“I love watching Virat Kohli bat. He looks to me like an individual of my own heart. I love his aggression and he has serious passion that I used to have. He reminds me of myself”
Viv Richards - former west Indies captain
ಭಾರತ ಕ್ರಿಕೆಟ್ ತಂಡದ ಸದಸ್ಯ, ಭಾರತೀಯ ಕ್ರಿಕೆಟ್‍ನ ಮೂರು ಆಯಾಮಗಳ ಮಾಜಿ ನಾಯಕ, ಮೂರು ಆಯಾಮಗಳಲ್ಲಿ ಮೊದಲ ಸ್ಥಾನ ಹೊಂದಿರುವ ಭಾರತದ ಏಕೈಕ ಕ್ರಿಕೆಟ್ ಆಟಗಾರ. ಇವರು ಪ್ರಸ್ತುತ ಐಪಿಎಲ್‍ನಲ್ಲಿ ಬೆಂಗಳೂರು ರಾಯಲ್ ಚಾಲೆಂಜಸ್ರ್ಸ್ ಮತ್ತು ದೇಶೀಯವಾಗಿ ದೆಹಲಿಯನ್ನು ಪ್ರತಿನಿಧಿಸಿ ಆಡುತ್ತಿದ್ದಾರೆ. ಜಗತ್ತು ಕಂಡ ಶ್ರೇಷ್ಠ ಕ್ರೀಡಾಪಟುವಿನಲ್ಲಿ ವಿರಾಟ್ ಕೂಡ ಒಬ್ಬರು. ಆಟಗಾರನಾಗಿ, ಸಮಾಜ ಸೇವಾಕರ್ತನಾಗಿ, ಬ್ರಾಂಡ್‍ಗಳ ರಾಯಭಾರಿಯಾಗಿ ಗುರುತಿಸಿಕೊಂಡಿದ್ದಾರೆ.
T-20 ಮತ್ತು ಐಪಿಎಲ್‍ನಲ್ಲಿ ಅತಿ ಹೆಚ್ಚು ರನ್ ಬಾರಿಸಿದವರು, ಅಂತರಾಷ್ಟ್ರೀಯ ಕ್ರಿಕೆಟ್ ನಾಲ್ಕನೇ ಅತಿ ಹೆಚ್ಚು ರನ್ ಹೊಡೆದವರಾಗಿದ್ದಾರೆ. ಜೊತೆಗೆ ಏಕದಿನ ಮಾದರಿಯ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿರುವ ಗಾಡ್ ಆಫ್ ಕ್ರಿಕೆಟ್ – ಜೀವಂತ ದಂತಕಥೆ ಸಚಿನ್ ತೆಂಡೂಲ್ಕರ್‍ರರ 49 ಶತಕಗಳಷ್ಟೆ ಕೊಹ್ಲಿಯು ಬಾರಿಸಿದ್ದಾರೆ. ಇನ್ನೊಂದು ಶತಕ ದಾಖಲಿಸಿದರೆ ಈ ದಾಖಲೆಯನ್ನು ಮುರಿದು ತಮ್ಮ ದಾಖಲೆಯನ್ನು ನಿರ್ಮಾಣ ಮಾಡಲಿದ್ದಾರೆ. ಜೊತೆಗೆ 2011ರಲ್ಲಿ ಭಾರತವು ವಿಶ್ವಕಪ್ ಗೆದ್ದಾಗ ಮತ್ತು 2013ರ ಐಸಿಸಿ - ಚಾಂಪಿಯನ್ ಟ್ರೋಫಿಯನ್ನು ಗೆದ್ದಾಗಲು ತಂಡದ ಸದಸ್ಯರಾಗಿದ್ದರು. 2020ರಲ್ಲಿ ಐಸಿಸಿ ಇವರನ್ನು ದಶಕದ ಪುರುಷ ಕ್ರಿಕೆಟಿಗ ಎಂದು ಹೆಸರಿಸಿತು.
ಇಂತಹ ಒಬ್ಬ ಆಟಗಾರನ ಬಗೆಗೆ ಇನ್ನಿತರ ಮಾಹಿತಿ ತಿಳಿಯೋಣ
1988ರ ನವೆಂಬರ್ 5 ರಂದು ದೆಹಲಿಯಲ್ಲಿ ಪ್ರೇಮ್‍ಕೋಹ್ಲಿ ಮತ್ತು ಸರೋಜ್‍ಕೋಹ್ಲಿಯ ಪುತ್ರನಾಗಿ ಜನಿಸಿ. ಆರಂಭಿಕ ಶಾಲಾ ಹಂತದಲ್ಲೇ ಅವರ ಗಮನ ಕ್ರಿಕೆಟ್ ಕಡೆಗೆ ಹರಿಯಿತು. ಇದಕ್ಕೆ ನೀರೆರದವರು ಅವರ ತಂದೆ. ಇದಕ್ಕೆ ಸಾಕ್ಷಿಯಾಗಿ ದೆಹಲಿಯಲ್ಲಿ U-15 ತಂಡಕ್ಕೆ ಆಯ್ಕೆಯಾಗುತ್ತಾರೆ. ಇಲ್ಲಿ ಅವರ ಅಭ್ಯಾಸ ನಿರತರಾದಾಗ ಯಾವುದೇ ಸ್ಥಾನದಲ್ಲಿ ಆಡಲು ಬಂದರೂ ಅದರಲ್ಲೇ ಒಳ್ಳೆ ರನ್‍ಗಳನ್ನು ಗಳಿಸುತ್ತಿದ್ದರು. ಇಂತಹ ಸಂದರ್ಭದಲ್ಲಿ ಕೊಹ್ಲಿ ತಮ್ಮ ತಂದೆಯನ್ನು 2006ರಲ್ಲಿ ಕಳೆದು ಕೊಳ್ಳುತ್ತಾರೆ. ಇದರಿಂದ ತಮ್ಮ ಹೆಚ್ಚಿನ ಗಮನವನ್ನು ಇನ್ನು ಹೆಚ್ಚಾಗಿ ಕ್ರಿಕೆಟ್‍ನತ್ತಲೇ ಹರಿಸುತ್ತಾರೆ. ಇದರಲ್ಲಿ ಪ್ರಬುದ್ಧತೆ ಕಾಣಲು ಮುಂದಾಗುತ್ತಾರೆ. ಇದಕ್ಕೆ ಬೆನ್ನೆಲುಬಾಗಿ ತಾಯಿ ನಿಲ್ಲುತ್ತಾರೆ. 2003-04ರಲ್ಲಿ U-15 ತಂಡದ ನಾಯಕನಾಗಿ ನಂತರ 2004-05ರಲ್ಲಿ U-17 ತಂಡಕ್ಕೆ ಆಯ್ಕೆಯಾಗುತ್ತಾರೆ. ನಂತರದಲ್ಲಿ 2006ರ ಫೆಬ್ರವರಿ 18ರಂದು ರಣಜಿಗೆ ಪದಾರ್ಪಣೆ ಮಾಡಿ ಗಮನ ಸೆಳೆದರು.
U-19 ಭಾರತ ತಂಡಕ್ಕೆ ಆಯ್ಕೆಯಾಗುತ್ತಾರೆ. ಇಲ್ಲಿ ಹಲವು ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‍ನಲ್ಲಿ ಆಡುವ ಮೂಲಕ 2008ರಲ್ಲಿ ಫಬ್ರವರಿ-ಮಾರ್ಚ್ ನಲ್ಲಿ U-19 world cup ಆಯ್ಕೆಯಾಗಿ ಭಾರತ ತಂಡದ ನಾಯಕತ್ವ ವಹಿಸಿಕೊಳ್ಳುತ್ತಾರೆ. ಇಲ್ಲಿ ಅವರು ಆಡಿದ 6 ಪಂದ್ಯಗಳಲ್ಲಿ 235 ರನ್‍ಗಳ ಜೊತೆಗೆ ಸೆಂಚುರಿಯು ಸೇರಿದೆ. ಇದರೊಂದಿಗೆ ಟೂರ್ನಿಯ ಮೂರನೇ ಅತಿ ಹೆಚ್ಚಿನ ಸ್ಕೋರರ್ ಕೂಡ ಆದರು. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ ಗೆದ್ದು ವಿಶ್ವಕಪ್ ವಿಜೇತ ತಂಡದ ನಾಯಕನೆನಿಸಿಕೊಂಡರು.
ನಂತರ 2008ರ ಜೂನ್‍ನಲ್ಲಿ ಬಾರ್ಡರ್-ಗವಾಸ್ಕರ್ ವಿದ್ಯಾರ್ಥಿ ವೇತನ ಪಡೆದು, ಇದರ ಮೂಲಕ ಬ್ರಿಸ್ಬೇನ್‍ನ ಕ್ರಿಕೆಟ್ ಆಸ್ಟ್ರೇಲಿಯಾದ ಸೆಂಟರ್ ಆಫ್ ಎಕ್ಸಲೆನ್ಸ್‍ನಲ್ಲಿ ಆರು ವಾರಗಳವರೆಗೆ ತರಬೇತಿ ಪಡೆದರು. ನಂತರ ಹಿರಿಯರ ತಂಡಕ್ಕೆ ಉದಯೋನ್ಮುಖ ಆಟಗಾರರ ಆಯ್ಕೆಗಾಗಿ ಉದಯೋನ್ಮುಖ ಆಟಗಾರರ ಟೂರ್ನ್‍ಮೆಂಟ್‍ನಲ್ಲಿ ಆಡಿದರು, ಒಳ್ಳೆಯ ರನ್‍ಗಳನ್ನು ಕಲೆಹಾಕಿದರು.
2008 – 09ರಲ್ಲಿ ಶ್ರೀಲಂಕಾ ಪ್ರವಾಸ ಮತ್ತು ಪಾಕಿಸ್ತಾನದಲ್ಲಿ ಚಾಂಪಿಯನ್ ಟ್ರೋಫಿಗೆ ಇವರನ್ನು ಆಯ್ಕೆ ಮಾಡಲಾಯಿತು. ಇಲ್ಲಿ ಬೆಂಚ್‍ಕಾದರೂ ಶ್ರೀಲಂಕಾ ಎದುರಿನ ಪಂದ್ಯದಲ್ಲಿ ಪಾದಾರ್ಪಣೆಯ ಅವಕಾಶ ಒದಗಿ ಬಂದಿತು. ನಂತರದಲ್ಲಿ ತಮ್ಮ 22 ವರ್ಷದೊಳಗೆ 2 ಶತಕಗಳನ್ನು ಬಾರಿಸುವ ಮೂಲಕ ಈ ಸಾಧನೆ ಮಾಡಿದ 3ನೇ ಭಾರತೀಯ ಆಟಗಾರನೆನಿಸಿಕೊಂಡರು. 2010ರಲ್ಲಿ ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ T-20 ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದರು. ನಂತರ ಅವರು ಪಂದ್ಯದಿಂದ ಪಂದ್ಯಕ್ಕೆ ಆಟದ ಏರಿಳಿತಗಳನ್ನು ಕಂಡಿದ್ದರೂ 2011ರ ವಿಶ್ವಕಪ್‍ಗೂ ಆಯ್ಕೆಯಾಗಿ ಪ್ರತಿ ಪಂದ್ಯದಲ್ಲೂ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಸೆಂಚುರಿ ಬಾರಿಸಿ, ಫೈನಲ್‍ನಲ್ಲಿ 36ರನ್‍ಗಳ ಕೊಡುಗೆ ನೀಡಿದುದರ ಜೊತೆಗೆ ಗೌತಮ್ ಗಂಭೀರ್‍ರವರ ಜೊತೆಗೆ ಉತ್ತಮ ಜೊತೆಯಾಟಕ್ಕೂ ನೆರವಾದರು.
ವೆಸ್ಟ್ ಇಂಡೀಸ್ ವಿರುದ್ಧ – ಕಿಂಗ್‍ಸ್ಟನ್‍ನಲ್ಲಿ ನಡೆದ mɸïÖನಲ್ಲಿ ಮೊದಲ ಟೆಸ್ಟ್ ಪಂದ್ಯ ಆಡುವ ಮೂಲಕ mɸïÖಗೆ ಪಾದಾರ್ಪಣೆ ಮಾಡಿದರು. 2010ರಲ್ಲಿ ಜಿಂಬಾಬ್ವೆ, ಶ್ರೀಲಂಕಾ ಮತ್ತು ಭಾರತದ ತ್ರಿಕೋನ ಸರಣಿಗೆ ಉಪನಾಯಕನಾಗಿ ಆಯ್ಕೆಯಾದರು. 2012-13ರಲ್ಲಿ ಆಸ್ಟ್ರೇಲಿಯಾ, ಶ್ರೀಲಂಕಾ ಮತ್ತು ಭಾರತವನ್ನು ಒಳಗೊಂಡ ಕಾಮನ್‍ವೆಲ್ತ್ ತ್ರಿಕೋನ ಸರಣಿಯ ಪಂದ್ಯದಲ್ಲಿ ಶ್ರೀಲಂಕಾದ 321ರನ್‍ಗಳ ಗುರಿಗೆ ಭಾರತ 86/2 ರನ್ ಬಾರಿಸಿದ್ದಾಗ ಕೊಹ್ಲಿ ಬಂದು ಅಜೇಯ 133 ರನ್‍ಗಳಿಸಿದಾಗ ವೀಕ್ಷಕ ವಿವರಣೆಗಾರ ಡೀನ್‍ಜೋನ್ಸ್ – ಕೊಹ್ಲಿಯವರ ಇನ್ನಿಂಗ್ಸ್ ಸಾರ್ವಕಾಲಿಕ ಶ್ರೇಷ್ಠ ಏಕದಿನ ಪಂದ್ಯಗಳಲ್ಲಿ ಒಂದಾಗಿದೆ ಎಂದು ರೇಟ್ ಮಾಡಿದ್ದಾರೆ.
2013ರ ಜೂನ್ ನಲ್ಲಿ ಐಸಿಸಿ ZÁA¦AiÀÄ£ï ಟ್ರೋಫಿನಲ್ಲಿ ಆಡಿದರು. ಇಂಗ್ಲೆಂಡ್ ವಿರುದ್ಧ ಮಳೆಯ ಕಾರಣದಿಂದ ಸೀಮಿತ ಓವರ್‍ಗೆ ಇಳಿಸಿದಾಗ 43ರನ್ ಗಳಿಸಿ 129/7 ಮೊತ್ತ ಸೇರಿಸಿಲು ಸಾಧ್ಯವಾಯಿತು. ಇದರಲ್ಲಿ ಗೆಲುವು ಸಾಧಿಸಿ ಸತತ ಎರಡನೇ ಐಸಿಸಿ ಏಕದಿನ ಟೂರ್ನ್‍ಮೆಂಟ್ ಪ್ರಶಸ್ತಿ ಗಳಿಸಿತು. ಮತ್ತು ಐಸಿಸಿಯಿಂದ ಕೊಹ್ಲಿಯನ್ನು “ Team of the Tournament “ ಭಾಗವಾಗಿ ಹೆಸರಿಸಲಾಯಿತು.
2013ರ ಜುಲೈನಲ್ಲಿ ಜಿಂಬಾಬ್ವೆ ಪ್ರವಾಸದಲ್ಲಿ ಪೂರ್ಣ ಪ್ರಮಾಣದ ನಾಯಕರಾಗುತ್ತಾರೆ. ಇಲ್ಲಿ 5 – 0 ಸ್ವಿಪ್‍ನಿಂದ ಗೆಲ್ಲಲಾಯಿತು. 2014ರ T-20 world cup ಫೈನಲ್‍ನಲ್ಲಿ 58 ಎಸೆತಗಳಿಗೆ 77ರನ್ ಗಳಿಸಿದರು ಆದರೂ ಪಂದ್ಯ ಸೋತರು ಇಢಿ ಪಂದ್ಯಾವಳಿಯಲ್ಲಿ ಒಟ್ಟು 319ರನ್ ಗಳಿಸಿದರು. ಇದು ವಲ್ರ್ಡ್ T-20 ಪಂದ್ಯಾವಳಿಯಲ್ಲಿ ವೈಯಕ್ತಿಕ ಬ್ಯಾಟ್ಸ್ಮನ್ನಿಂದ ಅತಿ ಹೆಚ್ಚು ರನ್‍ಗಳಿಂದ ದಾಖಲೆಯಾಗಿದೆ.
2014ರಲ್ಲಿ ಶ್ರೀಲಂಕಾ ವಿರುದ್ಧ ಸರಾಸರಿ 58.55ರ ಅನ್ವಯ 1054ರನ್‍ಗಳಿಸುವ ಮೂಲಕ ಸೌರವ್ ಗಂಗೂಲಿ ನಂತರ ಸತತ 4 ಕ್ಯಾಲೆಂಡರ್ ವರ್ಷಗಳ ಕಾಲ ಏಕದಿನ ಪಂದ್ಯಗಳಲ್ಲಿ 1000ಕ್ಕಿಂತ ಹೆಚ್ಚು ರನ್‍ಗಳಿಸಿದ ವಿಶ್ವದ 2ನೇ ಆಟಗಾರನಾದರು. 2014ರಲ್ಲಿ ಆಸ್ಟ್ರೇಲಿಯಾದಲ್ಲಿ ಧೋನಿ ಅನುಪಸ್ಥಿತಿಯಲ್ಲಿ ಟೆಸ್ಟ್ ನಾಯಕನಾಗಿ ಮೊದಲ ಟೆಸ್ಟ್ ನಾಯಕತ್ವದಲ್ಲೇ ಶತಕ ಗಳಿಸದ ನಾಲ್ಕನೇ ಭಾರತೀಯನಾದರು.
2015ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ವಿರುದ್ಧ ಅಡಿಲೆಡ್‍ನಲ್ಲಿ 107 ರನ್ ಗಳಿಸುವ ಮೂಲಕ ವಿಶ್ವಕಪ್‍ನಲ್ಲಿ ಪಾಕ್ ವಿರುದ್ಧ ಶತಕ ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್‍ಮನ್ ಆದರು. ಜೊತೆಗೆ 2015ರಲ್ಲಿ ಏಷ್ಯಾಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2016ರ ಐಸಿಸಿ ಟಿ20 ವಲ್ರ್ಡ್‍ಕಪ್‍ನಲ್ಲಿ ಉತ್ತಮ ಫಾರ್ಮ್ ಹೊಂದಿದ್ದರಿಂದ 2016 ವಿಶ್ವ T-20ಗಾಗಿ “Team of the Tournament” ನಾಯಕನನ್ನಾಗಿ ಹೆಸರಿಸಲಾಯಿತು.
ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೀನ್ ಜೋನ್ಸ್ ಕೊಹ್ಲಿ ಕುರಿತು –
“ವಿಶ್ವ ಕ್ರಿಕಟ್‍ನ ಹೊಸ ರಾಜ” ಎಂದು ಹೊಗಳಿದ್ದಾರೆ.
2017-18ರಲ್ಲಿ ಸತತ ನಾಲ್ಕು ಸರಣಿಗಳಲ್ಲಿ ದ್ವಿಶತಕ ಬಾರಿಸುವ ಮೂಲಕ ಬ್ರಾಡ್ಮನ್ ಮತ್ತು ರಾಹುಲ್ ದ್ರಾವಿಡ್ ದಾಖಲೆಯನ್ನು ಮುರಿದರು. 2017ರಲ್ಲಿ ಐಸಿಸಿ ಚಾಂಪಿಯನ್ ಟ್ರೋಫಿಯಲ್ಲಿ ಮೊದಲ ಬಾರಿಗೆ ನಾಯಕತ್ವ ವಹಿಸಿಕೊಂಡರು. 2017ರಲ್ಲಿ 2818ರನ್ ಗಳಿಸುವುದರೊಂದಿಗೆ ಕ್ಯಾಲೆಂಡರ್ ವರ್ಷದಲ್ಲಿ ಬಾರಿಸಿದ 3ನೇ ಅತಿ ಹೆಚ್ಚು ಮೊತ್ತ ಮತ್ತು ಭಾರತೀಯ ಆಟಗಾರನ ಅತ್ಯಧಿಕ ಮೊತ್ತವಾಗಿದೆ. ಹಾಗೆಯೇ ವಿಶ್ವ ಟೆಸ್ಟ್ 11 ಮತ್ತು ಏಕದಿನ 11 ಎರಡಕ್ಕೂ ಕೊಹ್ಲಿಯನ್ನು ಐಸಿಸಿ ನಾಯಕನನ್ನಾಗಿ ನೇಮಿಸಿತು. ಹಲವು ಏರಿಳಿತಗಳನ್ನು ಕಾಣುವ ಮೂಲಕ ಕೊಹ್ಲಿಯು ಮೂರು ಆಯಾಮಗಳ ನಾಯಕತ್ವ ನೀಡಿ ಮತ್ತೆ ಆಟದಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಮುಂದಾದರು.
2023ರ ನವೆಂಬರ್ 3ರಂದು ಕ್ಯಾಲೆಂಡರ್ ವರ್ಷದಲ್ಲಿ 1000ರನ್‍ಗಳಿಸಿ ಎಂಟನೇ ಬಾರಿಗೆ ಇದನ್ನು ಸಾಧಿಸುವ ಮೂಲಕ ಸಚಿನ್ ಹೆಸರಲ್ಲಿದ್ದ 7 ಬಾರಿಯ ದಾಖಲೆಯನ್ನು ಸರಿಗಟ್ಟಿದರು. ಇದೇ ವರ್ಷದ ನವೆಂಬರ್ 5ರಂದು ದಕ್ಷಿಣ ಆಫ್ರಿಕಾದ ಪಂದ್ಯದಲ್ಲಿ 100ರನ್ ಹೊಡೆಯುವ ಮೂಲಕ ಸಚಿನ್‍ರ ಏಕದಿನ ಪಂದ್ಯದಲ್ಲಿ ಮಾಡಿದ್ದ 49 ಶತಕಗಳ ಸಾಧನೆಯನ್ನು ಸಮಗೊಳಿಸಿದರು ಮತ್ತು ಇನ್ನೊಂದು ಶತಕ ಬಾರಿಸಿದರೆ ಅವರ ದಾಖಲೆಯನ್ನು ಸರಿಗಟ್ಟಿದಂತಾಗಿ ತಮ್ಮ ದಾಖಲೆಯನ್ನು ನಿರ್ಮಿಸುತ್ತಾರೆ ಮುಂದೆ.
ಒಂದು ಸಂದರ್ಶನದಲ್ಲಿ ತೆಂಡೂಲ್ಕರ್ ತಮ್ಮ 100 ಶತಕಗಳ ಸಾಧನೆಯನ್ನು, ದಾಖಲೆಗಳನ್ನು ಮೀರಿಸುವ ಸಾಮಥ್ರ್ಯವನ್ನು ಕೊಹ್ಲಿ ಹೊಂದಿದ್ದಾರೆ ಎಂದು ಹೇಳಿದ್ದರು ಈ ಮಾತು ನಿಜವಾಗುವ ಸನಿಹದಲ್ಲಿದೆ. ತೆಂಡೂಲ್ಕರ್‍ನ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿ ಮುನ್ನೆಡೆದುಕೊಂಡು ಬಂದಿರುವ ಕೊಹ್ಲಿ ಆಕ್ರಮಣಶೀಲತೆಯ ಆಟಗಾರನಾಗಿ ಕಾಣಿಸಿಕೊಳ್ಳುವ ಜೊತೆಗೆ ಕ್ರಿಕೆಟ್ ಪ್ರಿಯರಿಗೆ ಮನೋರಂಜನೆಯನ್ನು ಒದಗಿಸುತ್ತಾರೆ.
0 ಕಾಮೆಂಟ್‌ಗಳು