Ticker

6/recent/ticker-posts

ಯಾವ ಪಂದ್ಯವನ್ನೂ ಸೋಲದೇ ಭಾರತವು ವಿಶ್ವಕಪ್ ಗೆಲ್ಲಬಹುದೇ? Can India win the World Cup without losing a match?


2023 ರ ವಿಶ್ವಕಪ್‌ನಲ್ಲಿ ಭಾರತದ ಅಭಿಮಾನಗಳ ಎದುರು ಇದೊಂದು ಪ್ರಶ್ನೆ ಇದೆ. ಭಾರತ ತಂಡದ ಕ್ರಿಕೆಟ್ ಅಭಿಮಾನಿಗಳು ಇದು ಸಾಧ್ಯವಾಗಲಿದೆ ಎಂದು ಹೇಳುತ್ತಿದ್ದಾರೆ.  ಇದರಿಂದ ಭಾರತದ 3ನೇ ವಿಶ್ವಕಪ್ ಜಯವು ಭಾರತೀಯ ಕ್ರಿಕೆಟ್‌ನಲ್ಲಿ ಮಹತ್ವದ ಘಟನೆಯಾಗಬಹುದು ಅಥವಾ ದಾಖಲೆಯಾಗಬಹುದು. ಇಂತಹ ಸಾಧನೆಯನ್ನು ಈ ಮೊದಲು ಎರಡು ದೇಶಗಳು ಎರಡೆರೆಡು ಬಾರಿ          ಮಾಡಿವೆ. 

                      ಅವು:  1. ವೆಸ್ಟ್ ಇಂಡೀಸ್ – 1975, 1979.

                                 2. ಆಸ್ಟೆಲಿಯಾ –  2003, 2007

ರಲ್ಲಿ ಈ ಸಾಧನೆ ಮಾಡುವ ಮೂಲಕ ಕ್ರಿಕೆಡ್ ಲೋಕದ ಏಕಮೇವಾಧಿಪತ್ಯವನ್ನು ಸಾಧಿಸಿದ್ದವು. ಈಗ ಅಂತಹುದೇ ಸಮಯ ಭಾರತಕ್ಕೂ ಒಲಿದು ಬಂದಿದೆ. ಭಾರತ ಈಗಾಗಲೇ ಆಡಿರುವ ೮  ಪಂದ್ಯಗಳಲ್ಲಿ ಎಂಟು ಪಂದ್ಯಗಳನ್ನು ತನ್ನ ಬ್ಯಾಂಟಿ0ಗ್, ಬೌಲಿಂಗ್, ಫೀಲ್ಡಿಂಗ್‌ನಲ್ಲಿ ಒಳ್ಳೆ ಸಾಮರ್ಥ್ಯ ತೋರುವ ಜೊತೆಗೆ ಪಂದ್ಯಗಳನ್ನು ಗೆದ್ದಿದೆ. ಇನ್ನು ಭಾರತಕ್ಕೆ ಲೀಗ್‌ನಲ್ಲಿ ನೆದರ್ಲೆಂಡ್ ಆಡಲು ಒಂದು ಪಂದ್ಯ ಬಾಕಿ ಇದ್ದು ಇದನ್ನು ಗೆಲ್ಲುವ ಮೂಲಕ ಸೆಮಿ ಫೈನಲ್‌ನಲ್ಲಿ ಪಾಕಿಸ್ತಾನ ಅಥವಾ ನ್ಯೂಜಿಲೆಂಡ್ ದೇಶಗಳ ವಿರುದ್ಧ ಆಡುತ್ತದೆ. ಈಗಾಗಲೇ ಈ ಎರಡು ತಂಡಗಳನ್ನು ಭಾರತ ತನ್ನ ಲೀಗ್ ಪಂದ್ಯಗಳಲ್ಲಿ ಸೋಲಿಸಿದೆ. ಇದರೊಂದಿಗೆ ತನ್ನ ಆಟದ ಸೊಬಗಿಗೆ ಯಾವ ತಂಡಗಳು ಸರಿಸಾತಿಯಾಗಿಲ್ಲ ಎಂಬುದನ್ನು ಸಾಬೀತು ಮಾಡಿದೆ. 

    ಭಾರತ ಒಂದು ಪಂದ್ಯವನ್ನು ಸೋಲದೆ ವಿಶ್ವಕಪ್ ಗೆಲ್ಲುವ ತವಕದಲ್ಲಿದೆ ಮತ್ತು ಕೋಟ್ಯಂತರ ಭಾರತೀಯರ ಒಲುವು ಇದರ ಕಡೆಗೆಯೇ ಇದೆ, ಇದು ಸಾಧ್ಯವಾಗಬಹುದು ಎಂಬ ನಂಬಿಕೆಯೂ ಭಾರತೀಯರಲ್ಲಿದೆ. ಏಕೆಂದರೆ ಸೆಮಿ ಫೈನಲ್‌ನಲ್ಲಿ ಮತ್ತು ಫೈನಲ್‌ನಲ್ಲಿ ಭಾರತ ತಾನು ಲೀಗ್ ಪಂದ್ಯಗಳಲ್ಲಿ ಸೋಲಿಸಿದ ತಂಡಗಳೇ ಬರುತ್ತವೆ. ಉದಾಹರಣೆಗೆ ಸೆಮಿ ಫೈನಲ್‌ಗೆ ನ್ಯೂಜಿಲೆಂಡ್ ಅಥವಾ ಪಾಕಿಸ್ತಾನ ತಂಡಗಳಲ್ಲೊ0ದು ಬರುತ್ತವೆ. ಇದರಲ್ಲಿ ಒಂದು ತಂಡದ ಮೇಲೆ ಗೆದ್ದು ಫೈನಲ್‌ಗೆ ಬಂದಾಗ ದಕ್ಷಿಣಾ ಆಫ್ರಿಕಾ ಅಥವಾ ಆಸ್ಟೆಲಿಯಾ ತಂಡಗಳು ಸೆಣಿಸಿ ಒಂದು ತಂಡ ಫೈನಲ್‌ಗೆ ಬರಲಿದೆ. ಫೈನಲ್‌ಗೆ ಬಂದ ತಂಡವನ್ನು ಭಾರತ ಈಗಾಗಲೇ ಲೀಗ್ ಪಂದ್ಯಾವಳಿಯಲ್ಲಿ ಸೋಲಿಸಿದೆ. ಇದರಿಂದ ಇನ್ನು ತನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಮೂಲಕ ಎದುರಾಳಿಯ ತಂಡದ ದೌರ್ಬಲ್ಯಗಳನ್ನು ತಿಳಿದಿರುವುದರಿಂದ ಯಾವ ಪಂದ್ಯಗಳ ಸೋಲು ಕಾಣದೇ 3ನೇ ಬಾರಿಯ ವಿಶ್ವಕಪ್ ಎತ್ತಿಹಿಡಿಯುವ ಸುಸಂದರ್ಭವಾಗಿದೆ.

ಇಂತಹ ಸಾಧನೆ ಮಾಡಿರುವ ತಂಡಗಳ ಬಗೆಗೆ

೧. ವೆಸ್ಟ್ ಇಂಡೀಸ್ – 1975

           ಕ್ರಿಕೆಟ್ ಪ್ರಪಂಚ ಕಂಡ ದೈತ್ಯ ಮತ್ತು ಬಲಿಷ್ಠ ಆಟಗಾರರ ತಂಡ. ಮೊದಲ ಬಾರಿಗೆ ‘ಕ್ರಿಕೆಟ್ ವಿಶ್ವಕಪ್’ ಅಥವಾ Prudential cup  75 ಎಂದು ಕರೆಯಲಾಗುತ್ತದೆ. ಇದನ್ನು ಐಸಿಸಿ ಆಯೋಜಿಸಿದೆ. ಮೊದಲ ಏಕದಿನ ಅಂತರಾಷ್ಟಿಯ ಕ್ರಿಕೆಡ್ ಇತಿಹಾಸದಲ್ಲಿ ಪ್ರಮುಖವಾದ ಪಂದ್ಯಾವಳಿಯಾಗಿದೆ. 

        ಇಲ್ಲಿ 8 ತಂಡಗಳು ಮೊದಲ ಬಾರಿಗೆ ವಿಶ್ವಕಪ್ ಮಹಾ ಸಮರದಲ್ಲಿ ಸೆಣೆಸಲು ಬಂದಿದ್ದವು. ಇಲ್ಲಿ ೮ ತಂಡಗಳು ಎರಡು ಗುಂಪುಗಳಾಗಿ ಮಾಡಲಾಗಿತ್ತು. ಜೊತೆಗೆ 60 ಒವರ್‌ಗಳ ಪಂದ್ಯವಾಗಿದ್ದು, ವೆಸ್ಟ್ ಇಂಡೀಸ್ ‘ಬಿ - ಗುಂಪಿನಲ್ಲಿ ಬಂದು ತನ್ನ ಲೀಗ್‌ನ 3 ಪಂದ್ಯಗಳಲ್ಲೂ ಗೆದ್ದು ಮುಂದಿನ ಹಂತಕ್ಕೆ ಬಂದಿತು.

     ಸೆಮಿ ಫೈನಲ್

        ಪಂದ್ಯ: ದಿನಾಂಕ: 18-6-1975 ರಂದು 

              ನ್ಯೂಜಿಲೆಂಡ್       v/s           ವೆಸ್ಟ್ ಇಂಡೀಸ್    

          158/10 (52.2ಒವರ್)          159/5(40.2ಒವರ್)  

         ವೆಸ್ಟ್ ಇಂಡೀಸ್ 5 ವಿಕೆಟ್‌ಗಳಿಂದ ಗೆದ್ದು ಫೈನಲ್‌ಗೇರಿತು.   

ಫೈನಲ್

ಪಂದ್ಯ: ದಿನಾಂಕ:21-6-1975

ವೆಸ್ಟ್ ಇಂಡೀಸ್         v/s         ಆಸ್ಟೆçÃಲಿಯಾ

291/8(60ಒವರ್)                       274/10(58.4) 

    ಇಲ್ಲಿ ವೆಸ್ಟ್ ಇಂಡೀಸ್ 17ರನ್ನುಗಳ ಅಂತರದಿAದ ಆಸ್ಟೆಲಿಯಾವನ್ನು ಸೋಲಿಸುವ ಮೂಲಕ ಮೊದಲ ಬಾರಿಗೆ ಯಾವ ಪಂದ್ಯಗಳನ್ನು ಸೋಲದೆ ಮತ್ತು ಮೊದಲ ಬಾರಿಗೆ ವಿಶ್ವಕಪ್ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿತು. ಇದರ ಮೂಲಕ ಇತಿಹಾಸವನ್ನು ನಿರ್ಮಾಣ ಮಾಡಿತು.


2. ವೆಸ್ಟ್ ಇಂಡೀಸ್ – 1979

1979ರ ವಿಶ್ವಕಪ್ - Prudential cup  79 ಎಂದು 1979 ರಲ್ಲಿ ನಡೆಯಿತು. ಇಲ್ಲೂ ಕೂಡ  ತನ್ನ ಪಾರಮ್ಯವನ್ನು ವೆಸ್ಟ್ ಇಂಡೀಸ್ ಮುಂದುವರೆಸಿತು. ಇಲ್ಲು 8 ತಂಡಗಳು ಪಾಲ್ಗೊಳ್ಳುವ ಮೂಲಕ ವೆಸ್ಟ್ ಇಂಡೀಸ್ ‘ಬಿ ಗುಂಪಿನಲ್ಲಿ’ ಸ್ಥಾನ ಪಡೆದು, ಗುಂಪು ಹಂತದ ಪಂದ್ಯಗಳಲ್ಲಿ ಭಾರತ, ಶ್ರೀಲಂಕಾ ಪಂದ್ಯದಲ್ಲಿ ಒಂದು ಬಾಲ್ ಆಡದೆ ಆಡ ರದ್ದು ಮತ್ತು ನ್ಯೂಜಿಲೆಂಡ್ ವಿರುದ್ಧ ಗೆದ್ದು ಸೆಮಿಫೈನಲ್ ತಲುಪಿತು.                                                

 ಸೆಮಿ ಫೈನಲ್

    ಪಂದ್ಯ: ದಿನಾಂಕ :20-6-1979 ರಂದು 

  ವೆಸ್ಟ್ ಇಂಡೀಸ್       v/s        ಪಾಕಿಸ್ತಾನ    

          293/6 (60  ಒವರ್) 250/10 (60  ಒವರ್)  

        ವೆಸ್ಟ್ ಇಂಡೀಸ್ 43 ರನ್‌ಗಳ ಅಂತರದಿ0ದ ಗೆದ್ದು ಫೈನಲ್‌ಗೇರಿತು. 

   ಫೈನಲ್

ಪಂದ್ಯ: ದಿನಾಂಕ:23-6-1979

 ವೆಸ್ಟ್ ಇಂಡೀಸ್      v/s          ಇಂಗ್ಲೆ0ಡ್

 289/9              194/10

ಇಲ್ಲಿ 92ರನ್‌ಗಳ ಅಂತರದಿ0ದ ಗೆದ್ದು ೨ನೇ ಬಾರಿ ವಿಶ್ವಕಪ್ ಗೆದ್ದ ತಂಡವಾಯಿತು ಹಾಗೆಯೇ ಎರಡನೇ ಬಾರಿ ಒಂದು ಪಂದ್ಯವನ್ನು ಸೋಲದೆ ವಿಶ್ವಕಪ್ ಗೆದ್ದ ತಂಡವಾಯಿತು. 


 

3. ಆಸ್ಟೆಲಿಯಾ – 2003

೮ನೇ ವಿಶ್ವಕಪ್ ಆವೃತ್ತಿಯಾಗಿದ್ದು ಇಲ್ಲಿ ೧೪ ತಂಡಗಳು ಭಾಗವಹಿಸಿದ್ದವು ಮತ್ತು ಪೂಲ್ ಎ ಮತ್ತು ಬಿ ಎಂದು ತಂಡಗಳನ್ನು ವಿಭಾಗಿಸಲಾಗಿತ್ತು. ಐಸಿಸಿಯು ಈ ಪಂದ್ಯಾವಳಿಯನ್ನು ದಕ್ಷಿಣಾ ಆಫ್ರಿಕಾ, ಕೀನ್ಯಾ ಮತ್ತು ಜಿಂಬಾಬ್ವೆಯಲ್ಲಿ ಆಯೋಜಿಸಿತ್ತು. ಇಲ್ಲಿ ಆಸ್ಟೆಲಿಯಾ ತಾನು ಆಡಿದ 11 ಪಂದ್ಯಗಳನ್ನು ಗೆಲ್ಲುವ ಮೂಲಕ ವಿಶ್ವಕಪ್ ಎತ್ತಿ ಹಿಡಿಯಿತು. 

      ಸೆಮಿ ಫೈನಲ್

                      ಪಂದ್ಯ: ದಿನಾಂಕ :18-3-2003  ರಂದು 

                    ಆಸ್ಟೆಲಿಯಾ       v/s           ಶ್ರೀಲಂಕಾ    

                212/7 (50  ಒವರ್)       123/7 (38.1  ಒವರ್)  

           ಆಸ್ಟೆಲಿಯಾ ೪೮ ರನ್‌ಗಳ ಅಂತರದಿ0ದ ಗೆದ್ದು ಫೈನಲ್‌ಗೇರಿತು.   

ಫೈನಲ್

             ಪಂದ್ಯ: ದಿನಾಂಕ:23-3-2003

            ಆಸ್ಟೆಲಿಯಾ       v/s       ಭಾರತ

         359/2(50)          234/10(39.2)

       125ರನ್‌ಗಳ ಅಂತರದಿ0ದ ಯಾವ ಪಂದ್ಯಗಳನ್ನು ಸೋಲದೆ ಆಸ್ಟೆಲಿಯಾ ವಿಶ್ವಕಪ್‌ನ್ನು ಎತ್ತಿ ಹಿಡಿಯಿತು.  

     

4. ಆಸ್ಟೆಲಿಯಾ – 2007

9ನೇ ವಿಶ್ವಕಪ್ ಆವೃತ್ತಿಯಾಗಿದ್ದು, ಐಸಿಸಿಯು ವೆಸ್ಟ್ ಇಂಡೀಸ್‌ನಲ್ಲಿ ವಿಶ್ವಕಪ್ ಪಂದ್ಯಾವಳಿಯನ್ನು ಆಯೋಜಿಸಿತು. ಇಲ್ಲಿ 16 ತಂಡಗಳು ಭಾಗವಹಿಸಿದ್ದವು. ಇಲ್ಲೂ ಆಸ್ಟೆಲಿಯಾ 11 ಪಂದ್ಯಗಳನ್ನು ಗೆಲ್ಲುವ ಮೂಲಕ ವಿಶ್ವಕಪ್ ಎತ್ತಿಹಿಡಿಯಿತು. 

        ಸೆಮಿ ಫೈನಲ್

           ಪಂದ್ಯ: ದಿನಾಂಕ 25-4-2007  ರಂದು 

                ದಕ್ಷಿಣಾ ಆಫ್ರಿಕಾ       v/s           ಆಸ್ಟೆಲಿಯಾ       

                149/10                  153/5  

      ಆಸ್ಟೆçÃಲಿಯಾ 5 ವಿಕೆಟ್‌ಗಳ  ಅಂತರದಿ0ದ ಗೆದ್ದು ಫೈನಲ್‌ಗೇರಿತು. 

    ಫೈನಲ್

ಪಂದ್ಯ: ದಿನಾಂಕ:28-4-2007

                 ಆಸ್ಟೆಲಿಯಾ        v/s                ಶ್ರೀಲಂಕಾ

281/4(38 ಮಳೆಯ ಕಾರಣದಿಂದ)              215/8(36)

53ರನ್‌ಗಳ ಅಂತರದಿ0ದ ಯಾವ ಪಂದ್ಯಗಳನ್ನು ಸೋಲದೆ ಆಸ್ಟೆಲಿಯಾ ಎರಡನೇ ಬಾರಿಗೆ ವಿಶ್ವಕಪ್‌ನ್ನು ಎತ್ತಿ ಹಿಡಿಯಿತು.


ಇದೇ ಮಾಡರಿಯಲ್ಲಿ ಭಾರತವು 11 ಪಂದ್ಯಗಳನ್ನು ಆಡುತ್ತೆ. ಎಲ್ಲಾ ಪಂದ್ಯಗಳನ್ನು ಗೆದ್ದರೆ ಇತಿಹಾಸ ನಿರ್ಮಾಣ ಮಾಡುತ್ತದೆ. ಈ ಇತಿಹಾಸ ನಿರ್ಮಿಸುವ ಸುಸಂದರ್ಭಕ್ಕಾಗಿ ಭಾರತೀಯ ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ. 2023....?





ಕಾಮೆಂಟ್‌‌ ಪೋಸ್ಟ್‌ ಮಾಡಿ

1 ಕಾಮೆಂಟ್‌ಗಳು

Emoji
(y)
:)
:(
hihi
:-)
:D
=D
:-d
;(
;-(
@-)
:P
:o
:>)
(o)
:p
(p)
:-s
(m)
8-)
:-t
:-b
b-(
:-#
=p~
x-)
(k)