ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದಡಿಯಲ್ಲಿನ ಗ್ರಾಮೀಣ ಪ್ರವಾಸೋದ್ಯಮದಲ್ಲಿ UNESCO ಪಾರಂಪರಿಕ ತಾಣವಾಗಿ ಗುರುತಿಸಿಕೊಂಡಿರುವ "ಹಂಪಿಗೆ ಕಂಚಿನ ವಿಭಾಗದಲ್ಲಿ ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ" ಎಂದು ಗುರುತಿಸಿದೆ. ಇದರಿಂದ ಹಂಪಿಯ ಶ್ರೇಷ್ಠತೆಗೆ ಮತ್ತೊಂದು ಗರಿ ದೊರಕಿದಂತಾಗಿದೆ. ಹಂಪಿಯು ಗತವೈಭವದ ಕೇಂದ್ರವಾಗಿ ದೇವಾಲಯ ಸ್ಮಾರಕಗಳು ಕೋಟೆಗಳನ್ನು ಒಳಗೊಂಡು ಪ್ರಪಂಚದ ಪ್ರವಾಸಿಗಳನ್ನು ತನ್ನತ್ತ ಆಕರ್ಷಿಸುತ್ತಿದೆ
ಏನಿದು ಗ್ರಾಮೀಣ ಪ್ರವಾಸೋದ್ಯಮ
ಗ್ರಾಮೀಣ ಪ್ರವಾಸೋದ್ಯಮವೆಂದರೆ ಇದೊಂದು ಚಟುವಟಿಕೆಯಾಗಿದ್ದು ನಗರ ಕೇಂದ್ರೀತವಲ್ಲದ ಸ್ಥಳಗಳಲ್ಲಿ ಇದು ಆಯೋಜನೆಗೊಂಡು ಇದರ ಮೂಲಕ ಸ್ಥಳೀಯ ಕಲೆ, ಸಂಸ್ಕೃತಿ, ಪರಂಪರೆ, ಸ್ಥಳೀಯ ಜೀವನಶೈಲಿ ಮತ್ತು ಪದ್ಧತಿಯನ್ನು ಪ್ರದರ್ಶಿಸುತ್ತದೆ. ಇದರಿಂದ ಪ್ರವಾಸಿಗರು ವಿಶಾಲವಾದ ಚಟುವಟಿಕೆಗಳಲ್ಲಿ ಭಾಗಿಯಾಗುವ ಮೂಲಕ ಕೃಷಿ ಮತ್ತು ನಿಸರ್ಗದೊಂದಿಗೆ ಹೊಂದಿಕೊಂಡಿರುವ ಸೇವೆ ಮತ್ತು ಉತ್ಪನ್ನಗಳ ಅನುಭವವನ್ನು ಪಡೆದುಕೊಳ್ಳಬಹುದು.
ಗ್ರಾಮೀಣ ಪ್ರವಾಸೋದ್ಯಮ ಚಟುವಟಿಕೆಗಳು ಕೃಷಿ. ಅರಣ್ಯಗಾರಿಕೆ, ಸಾಂಪ್ರದಾಯಿಕ ಮತ್ತು ಸಾಮಾಜಿಕ ಸಂರಚನೆ, ಗ್ರಾಮೀಣ ಜೀವನಶೈಲಿ, ಪರಂಪರೆ ಮುಂತಾದ ಅಂಶಗಳಿಂದ ಪ್ರಭಾವಿತಗೊಂಡಿರುವ ಕಡಿಮೆ ಜನಸಂಖ್ಯಾ ಸಾಂದ್ರತೆ, ಭೂ ಸ್ವರೂಪ ಮತ್ತು ಭೂ ಬಳಕೆಯೊಂದಿಗೆ ಗ್ರಾಮೀಣ ಪ್ರದೇಶಗಳನ್ನು ಹೆಚ್ಚು ಕೇಂದ್ರೀಕರಿಸುತ್ತದೆ.
ಭಾರತ ಹಳ್ಳಿಗಳ ದೇಶವಾಗಿದ್ದು ಹೆಚ್ಚಿನ ಜನಸಂಖ್ಯೆ ಹಳ್ಳಿಗಳಲ್ಲಿ ವಾಸಿಸುತ್ತಿರುವುದರಿಂದ ಗ್ರಾಮೀಣ ಪ್ರದೇಶಗಳು ದೇಶದ ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಸಂರಚನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಬಹುದಾಗಿದೆ. ಇದರ ಮೂಲಕ ಸ್ಥಳೀಯ ಸಮಸ್ಯೆಗಳನ್ನು ಹಂತ ಹಂತವಾಗಿ ದೂರವಾಗಿಸಿ ಉದ್ಯೋಗ ನಿರ್ಮಾಣವನ್ನು ಹೆಚ್ಚಿಸುವುದರೊಂದಿಗೆ ಸ್ಥಳೀಯವಾದ ಕರಕುಶಲಗಳು ಉಪ ಕಸುಬು ಗಳಿಗೂ ಮನ್ನಣೆ ದೊರೆಯುತ್ತದೆ. ಇದು ಸ್ಥಳೀಯ ಪ್ರವಾಸ ಉದ್ಯಮ ಉದ್ಯೋಗ ನಿರ್ಮಾಣ ಕೇಂದ್ರ ರಾಜ್ಯಗಳು ಒಟ್ಟಾಗಿ ಕೆಲಸ ಮಾಡುವ ಇತರ ಸಂಘ ಸಂಸ್ಥೆಗಳ ನಡುವೆ ಸಹಕಾರ ಮೂಡಿಸುವಲ್ಲಿ ಜೊತೆಗೆ ಬೆಸ್ಟ್ ಪ್ರಾಕ್ಟಿಸಸ್ ಅಭಿವೃದ್ಧಿ ಅವಕಾಶಗಳಂತ ಕೆಲವು ಗುಣಲಕ್ಷಣಗಳನ್ನು ಇದು ಹೊಂದಿದೆ.
ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ ಸ್ಪರ್ಧಿಯಲ್ಲಿ 795 ಅರ್ಜಿಗಳು ದೇಶದ 31 ರಾಜ್ಯಗಳು ಮತ್ತು ಎಂಟು ಕೇಂದ್ರಾಡಳಿತ ಪ್ರದೇಶಗಳಿಂದ ಬಂದಿದ್ದು, ಅದರಲ್ಲಿ ಹಂಪಿ ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ ಎಂದು ಗುರುತಿಸಲ್ಪಟ್ಟಿದೆ. ಇದರ ಮೂಲಕ ರಾಜ್ಯದ ಕರಕುಶಲ ಗ್ರಾಮೀಣ ಕಲೆಯನ್ನು ಇನ್ನಷ್ಟು ಪ್ರವಾಸಿಗರಿಗೆ ಆಕರ್ಷಿಸುವಂತೆ ಮಾಡಲು ಉತ್ತೇಜನ ದೊರಕಿದಂತಾಗಿದೆ. ಈ ಪ್ರಶಸ್ತಿ ಬಾಳೆ ನಾರಿನಿಂದ ಮಾಡುವ ಕರಕುಶಲ ವಸ್ತುಗಳು ಮಳಿಗೆಗಳು ಹೋಂ ಸ್ಟೇ ಗಳಲ್ಲಿ ಪ್ರವಾಸಿ ಸೌಲಭ್ಯಕ್ಕೆ ಇರುವ ಪೂರಕ ವಾತಾವರಣ ಪ್ರವಾಸೋದ್ಯಮದಲ್ಲಿ ಸ್ಥಳೀಯರು ಪಾಲ್ಗೊಳ್ಳುವಿಕೆಯ ಮೇಲೆ ಪ್ರಶಸ್ತಿ ಹಂಪಿಗೆ ಬಂದಿದೆ. ಇದು ಇನ್ನು ಮುಂದೆ ಎಲ್ಲಾ ಗ್ರಾಮಗಳಿಗೂ ಮಾರ್ಗದರ್ಶಕವಾಗಿ ಇಂತಹ ಪ್ರಶಸ್ತಿಯನ್ನು ಕರ್ನಾಟಕದ ಇತರ ಗ್ರಾಮಗಳು ಪಡೆಯಬೇಕು. ಗ್ರಾಮಗಳ ಸುಭಿಕ್ಷತೆಗಳಿಂದ ರಾಜ್ಯದ ಸುಭಿಕ್ಷತೆ, ರಾಜ್ಯದ ಸುಭಿಕ್ಷತೆಗಳಿಂದ ದೇಶದ ಪ್ರಗತಿ ಸಾಧ್ಯ.




.jpg)
.jpg)
.jpg)
.jpg)
0 ಕಾಮೆಂಟ್‌ಗಳು