Ticker

6/recent/ticker-posts

Attractive Airport - ಸುಂದರ ವಿಮಾನ ನಿಲ್ದಾಣ - Kempegowda international Airport - Terminal 2


        ದೇಶದಲ್ಲಿರುವ 29 ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರ್ನಾಟಕದ ಬೆಂಗಳೂರಿನಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ Terminal-2, UNESCO ಕೊಡಮಾಡುವ 2023ರ ಪ್ರಿಕ್ಸ್ ವರ್ಸೈಲ್ಸ್ ನಲ್ಲಿ ಪ್ರತಿಷ್ಠಿತ ಪ್ರಶಸ್ತಿ ನೀಡಿ ವಿಶ್ವದಲ್ಲಿನ ಅತ್ಯಂತ ಸುಂದರ ವಿಮಾನ ನಿಲ್ದಾಣಗಳಲ್ಲಿ ಇದೊಂದು ಎಂದು ಗುರುತಿಸಿದೆ. ಇದರಲ್ಲಿ Terminal-2'ನ  ಒಳಾಂಗಣ ವಿನ್ಯಾಸದ ಅದ್ಭುತವನ್ನು " World Special prize for an interior - 2023" ಎಂಬ ಪ್ರಶಸ್ತಿಯನ್ನು ಕೆಂಪೇಗೌಡ ಅಂತರಾಷ್ಟ್ರೀಯ. ವಿಮಾನ ನಿಲ್ದಾಣ ಪಡೆದಿದೆ. ಇದರೊಂದಿಗೆ ಇಂತಹ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದ ಭಾರತದ ಏಕೈಕ ವಿಮಾನ ನಿಲ್ದಾಣವಾಗಿ ಕಾಣಿಸಿಕೊಂಡಿದೆ. ಇದರ ಜೊತೆಗೆ ವಿಮಾನ ನಿಲ್ದಾಣವು ಪ್ರಯಾಣೀಕರು, ವಿಮಾನ ಹಾರಾಟ, ಸಂಚಾರದಿಂದ ವಿಭಾಗದಿಂದ ದೇಶದಲ್ಲಿ ದೆಹಲಿ, ಮುಂಬೈ ನಂತರ 3ನೇ ಜನನಿಬಿಡ ಮತ್ತು ಏಷ್ಯಾ ಖಂಡದಲ್ಲಿ 29ನೇ ವಿಮಾನ ನಿಲ್ದಾಣವಾಗಿ ಗುರುತಿಸಿಕೊಂಡಿದೆ.


ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ Terminal-2 ನ್ನು Great Project ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಅದರೊಂದಿಗೆ ವರ್ಷಕ್ಕೆ 25ಲಕ್ಷ ಪ್ರಯಾಣಿಕರ ಆಗಮನ ಮತ್ತು ನಿರ್ಗಮನವಾಗುವುದಕ್ಕೆ ಬೇಕಾಗಿರುವಂತೆ ಇದರ ವಿನ್ಯಾಸ ಮಾಡಲಾಗಿದೆ. ಮತ್ತೆ ಇಲ್ಲಿಂದ ಹೋಗುವ ಮತ್ತು ಬರುವ ಪ್ರಯಾಣಿಕರಿಗೆ ಹಿತವಾದ ಅನುಭವ, ಸುಂದರ, ಆಕರ್ಷಕಯುತವಾದ ಕಲಾ ಜಗತ್ತಿನ ಮೂಲಕ ರಸದೌತಣ ಉಣಬಡಿಸುವ ಜೊತೆಗೆ ಕಣ್ಣಿಗೆ ಆನಂದವನ್ನು ಉಂಟುಮಾಡುವುದರ ಜೊತೆಗೆ ಮರೆಯಲಾಗದ ಅನುಭವವಾಗಿರುವಂತೆ ಪ್ರಯಾಣಿರಿಗಾಗಿ ಮಾಡಲಾಗಿದೆ. ಜೊತೆಗೆ ಪ್ರವಾಸೋದ್ಯಮವು ವೇಗ ವರ್ಧಿತವಾಗುತ್ತದೆ. Terminal - 2 ಈ ಹಿಂದೆ IGBC( Indian Green Building Council) ಇದರ Green new building rating system ಅಡಿಯಲ್ಲಿ IGBC Platinum ಎಂಬ ಪ್ರಮಾಣೀಕರಣವನ್ನು ಕೂಡ ಪಡೆದುಕೊಂಡಿದೆ. ಇದು ಕೂಡ ಹೆಮ್ಮೆ ತರಿಸುವ ವಿಷಯವೇ ಆಗಿದೆ.

Terminal - 2 ವಿಶೇಷತೆ ಏನು?

ಟರ್ಮಿನಲ್ 2 ನ್ನು ಬೆಂಗಳೂರಿನ "ಗಾರ್ಡನ್ ಸಿಟಿ" ಎಂಬುದಕ್ಕೆ ಗೌರವಾರ್ಥವಾಗಿ ಸ್ಕಡ್ ಮೋರ್, ಓವಿಂಗ್ಸ್, ಮತ್ತು ಮೆರಿಲ್ ವಿನ್ಯಾಸಗೊಳಿಸಿದರು. ಲಾರ್ಸೆನ್ ಮತ್ತು ಟರ್ಬೋ ಕಂಪನಿಯು ನಿರ್ಮಾಣವನ್ನು ಮಾಡಿತು. ಇದು ಭಾರತದ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಯರು 11 ನವೆಂಬರ್ 2022ರಂದು ಉದ್ಘಾಟಿಸಿ ದೇಶಕ್ಕೆ ಸಮರ್ಪಿಸಿದರು. Terminal - 2, 2,55.661ಚ.ಮೀ ವಿಸ್ತೀರ್ಣ ಹೊಂದಿದೆ. ಇದು 4 ಮುಖ್ಯ ಅಂಶಗಳ ಮೇಲೆ ನಿರ್ಮಾಣವಾಗಿದೆ. ಅವು


1. ಉದ್ಯಾನವನದಲ್ಲಿ ಟರ್ಮಿನಲ್( Terminal in Garden) 

ಉದ್ಯಾನವನ್ನು ಟರ್ಮಿನಲ್ ನಂತೆ ವಿನ್ಯಾಸ ಮತ್ತು ಅಭಿವೃದ್ಧಿಗೊಳಿಸಾಗಿದೆ. ಇದು ಪ್ರಯಾಣಿಕರಿಗೆ ಹಲವು ಸಸ್ಯಗಳನ್ನು ಅನ್ವೇಷಿಸಲು, ಅವುಗಳ ಆವಾಸವನ್ನು  ನೋಡಲು ಸಾಧ್ಯವಾಗಿಸುತ್ತದೆ. ಇದರೊಂದಿಗೆ 6 ಲಕ್ಷಕ್ಕಿಂತ ಹೆಚ್ಚಿನ ಸಸ್ಯಗಳಿದ್ದು, ಅದು ಪ್ರಯಾಣಿಕರನ್ನು ಬೇರೆ ಲೋಕಕ್ಕೆ ಕರೆದುಕೊಂಡು ಹೋದಂತಾಗುತ್ತದೆ. ಹಾಗೆಯೇ ಇಲ್ಲಿ ಸಸ್ಯಗಳಿಗೆ ನೀರುಣಿಸುವುದು ಕೂಡ ಸ್ವಯಂಚಾಲಿತ ವ್ಯವಸ್ಥೆಗಳಿಂದಲೇ ಆಗಿದೆ. 


2. ಸುಸ್ಥಿರತೆ ( Sustainability)

Terminal-2 ಸುಸ್ಥಿರವಾದ ನವೀಕರಿಸಬಹುದಾದ ಶಕ್ತಿಯ ಬಳಕೆಯನ್ನು 100% ಮಾಡುತ್ತಿದೆ. ಇದರೊಂದಿಗೆ ಇದನ್ನು ಸುಸ್ಥಿರ ಕಟ್ಟಡವಾಗಿಯೂ ನಿರ್ಮಾಣ ಮಾಡಲಾಗಿದೆ. IGBCನಿಂದ ಪ್ರಮಾಣೀಕರಣವನ್ನು ಪಡೆದಿದೆ‌. ವಿಶೇಷತೆಯೆಂದರೆ ವಿಮಾನ ನಿಲ್ದಾಣ ಕಾರ್ಯಾಚರಣೆಗೆ ಮೊದಲೇ ಪ್ರಮಾಣೀಕರಣ ಮಾಡಿದ ದೊಡ್ಡ ವಿಮಾನ ನಿಲ್ದಾಣವಾಗಿದೆ. ಇಲ್ಲಿ ನೈಸರ್ಗಿಕ ಮರುಬಳಕೆಯ ಪದಾರ್ಥಗಳ ಬಳಕೆ, ಮಳೆನೀರು ಕೊಯ್ಲು, ಸಂಸ್ಕರಿಸಿದ ಮತ್ತು RM ಸಂಸ್ಕರಿತ ತ್ಯಾಜ್ಯಗಳ ನೀರು ಬಳಕೆ ಮಾಡಲಾಗುತ್ತಿದೆ.

3. ತಂತ್ರಜ್ಞಾನ (Technology) (ತಡೆರಹಿತ ಮತ್ತು ಸರಳಗೊಳಿಸುವಿಕೆ) 

ತಂತ್ರಜ್ಞಾನ ಎಂಬುದು ಎಲ್ಲಾ ಸೌಕರ್ಯಗಳ ಕೇಂದ್ರಬಿಂದು. Terminal-2 ತಂತ್ರಜ್ಞಾನವನ್ನು ಪೂರ್ಣವಾಗಿ ಅಳವಡಿಸಿಕೊಂಡಿದೆ. End-to-End digi ಯಾತ್ರಾ ಬಯೋಮೆಟ್ರಿಕ್ ಗೆ ಒಂದು ಉದಾಹರಣೆಯಾಗಿದೆ. 

4. ಕಲೆ ಮತ್ತು ಸಂಸ್ಕ್ರತಿ (Art & Culture) 

ಇಲ್ಲಿ ಮಾನವನ ಭಾವನೆಗಳನ್ನು ಕಲೆಗಳ ಮೂಲಕ ಪ್ರದರ್ಶಿಸಲಾಗುತ್ತದೆ. ಇಲ್ಲಿನ ಕಲೆಗಳು 2 ವಿಷಯಗಳನ್ನು(Theme) ಆಧಾರಿಸಿದೆ. 
* ಕರ್ನಾಟಕದ ಶ್ರೀಮಂತ ಪರಂಪರೆ
* ಭರತನ ನಾಟ್ಯಶಾಸ್ತ್ರದ 9 ಭಾವನೆಗಳು. ಮೇಲೆ ವಿವರಿಸಲಾದ 4 ಅಂಶಗಳ ಮೇಲೆ T2 ಕಾರ್ಯ ನಡೆಸುತ್ತಿದೆ. 

ಕೆಲವು ವಿಶೇಷತೆಗಳು

* T2 ಸಂಪೂರ್ಣವಾಗಿ ಬಿದಿರಿನಿಂದ ಅಲಂಕೃತಗೊಂಡಿದೆ.
* ಇದು ಪೂರ್ಣವಾಗಿ ಹಸಿರುಮಯವಾಗಿದೆ. ವಾಟರ್ ಫಾಲ್ಸ್ ಒಳಗೊಂಡಿರುವ ಟರ್ಮಿನಲ್ ಕೂಡ ಹೌದು.



2024ರ ಅಂತ್ಯದ ವೇಳೆಗೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಳಸುವವರ ಸಂಖ್ಯೆ 4 ಕೋಟಿ ತಲುಪುವುದೆಂದು ನಿರೀಕ್ಷಿಸಲಾಗಿದೆ. ಹೀಗೆ ಪ್ರಯಾಣಿಕರು ಹೆಚ್ಚುತ್ತಿದ್ದರೆ 2032ರೊಳಗೆ ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣದ ಅವಶ್ಯತೆಯಾಗಿ ಬೇಕಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

1 ಕಾಮೆಂಟ್‌ಗಳು

Emoji
(y)
:)
:(
hihi
:-)
:D
=D
:-d
;(
;-(
@-)
:P
:o
:>)
(o)
:p
(p)
:-s
(m)
8-)
:-t
:-b
b-(
:-#
=p~
x-)
(k)