ಅಕ್ಷರಗಳ ಆಧಾರದ ಮೇಲೆ ಗಣ ವಿಭಾಗ ಮಾಡುವುದನ್ನು ಅಕ್ಷರಗಣ ಎನ್ನುವರು. ಇಲ್ಲಿ ಮೂರು ಮೂರು ಅಕ್ಷರಗಳಿಗೆ ಒಂದೊಂದು ಗಣದಂತೆ ಗಣ ವಿಭಾಗಿಸಬಹುದು. ಇಲ್ಲಿ ಬರುವ ಎಲ್ಲಾ ಅಕ್ಷರಗಳು ಗಣ ವಿಂಗಡಣೆಯಲ್ಲಿ ಬರಬೇಕೆಂಬ ನಿಯಮವಿಲ್ಲ. ಕೊನೆಯಲ್ಲಿ ಒಂದು ಅಥವಾ ಎರಡು ಅಕ್ಷರಗಳು ಉಳಿಯುತ್ತವೆ ಇವನ್ನು ಶೇಷ ಎಂದು ಕರೆಯಬಹುದು. ಹಾಗೆ ಲಘು ಅಥವಾ ಗುರು ಎಂದು ಕರೆಯಬಹುದು. ಇಲ್ಲಿ ಮಾತ್ರೆಗಳು ಮುಖ್ಯವಾಗಿರುವುದಿಲ್ಲ. ಇಲ್ಲಿ ಪದ್ಯದ ಪಾದಗಳಲ್ಲಿನ ಅಕ್ಷರಗಳನ್ನು ಮೂರು ಮೂರು ಅಕ್ಷರಗಳಿಗೆ ಗಣ ವಿಭಾಗ ಮಾಡಿ ಅದನ್ನು ಹೆಸರಿಸಿದರೆ ಅದು ಅಕ್ಷರಗಣ ಛಂದಸ್ಸು ಆಗುತ್ತದೆ. ಹಾಗೆಯೇ ಇಲ್ಲಿ ಬಳಕೆಯಾಗುವ ಪದ್ಯಜಾತಿಗಳೆಂದರೆ ವೃತ್ತಗಳು.
ವೃತ್ತಗಳು
ಕನ್ನಡ ಸಾಹಿತ್ಯದಲ್ಲಿ ಚಂಪೂ ಪ್ರಕಾರದ ಸಾಹಿತ್ಯ ಬೆಳವಣಿಗೆಯಾಗುವಾಗ ಇದು ಮುಖ್ಯವಾದ ಪ್ರಕಾರವಾಗಿತ್ತು ಇಲ್ಲಿ ಕಂದ ಪದ್ಯ, ವಚನ ಅಂದರೆ ಗದ್ಯದ ಜೊತೆಗೆ ವರತ್ತಗಳ ಬಳಕೆ ಹೆಚ್ಚಾಗಿತ್ತು. ಇವು ಸಂಸ್ಕ್ರತದಲ್ಲಿ ಅತಿ ಹೆಚ್ಚಾಗಿ ಬೆಳವಾಣಿಗೆಯಾಗುತ್ತಿದ್ದವು.
ಇದರ ಲಕ್ಷಣಗಳು
* ವೃತ್ತಗಳು ೪ ಸಾಲಿನ ಪದ್ಯಗಳು
* ಪ್ರತಿ ಸಾಲುಗಳು ಪರಸ್ಪರ ಸಮವಾಗಿರುತ್ತವೆ
* ಅಕ್ಷರಗಳ ಮೇಲೆ ಗಣ ವಿಭಾಗ ಮಾಡಲಾಗುತ್ತದೆ.
* ಆದಿಪ್ರಾಸ ನಿಯತವಾಗಿರುತ್ತದೆ.
ಅಕ್ಷರ ಗಣದ ವಿಧಗಳು
ಗುರುಲಘು ಮೂರಿರೆ ಮನಗಣ
ಗುರುಲಘು ಮೊದಲಿರೆ ಭಯಗಣ
ಗುರುಲಘು ನಡುವಿರೆ ಜರಗಣ
ಗುರುಲಘು ಕೊನೆಯಿರೆ ಸತಗಣಮಕ್ಕುಂ
ಇದನ್ನು ಸಂಕ್ಷಿಪ್ತಗೊಳಿಸಿ ಬರೆದಾಗ
ಮಗಣ: - - -
ನಗಣ: U U U
ಭಗಣ: - U U
ಯಗಣ: U - -
ಜಗಣ: U - U
ರಗಣ: - U -
ಸಗಣ: U U -
ತಗಣ: - - U
ಈ ಗಣಗಳನ್ನು ಬಳಸಲು ಅತಿ ಉಪಯುಕ್ತವಾದ ಒಂದು ಸೂತ್ರವಿದೆ. ಅದು
"ಯಮಾತಾರಾಜಭಾನಸಲಗಂ"
ಖ್ಯಾತ ಕರ್ನಾಟಕಗಳು
ಸಂಸ್ಕ್ರತದಲ್ಲಿ 106ಗಿಂತ ಹೆಚ್ಚು ವೃತ್ತಗಳಿವೆ ಎಂದು ಹೇಳಲಾಗುತ್ತದೆ. ಆದರೆ ಕನ್ನಡದಲ್ಲಿ ಅತಿ ಹೆಚ್ಚು ಬಳಕೆಯಾಗುತ್ತಿರುವುದು 6 ವೃತ್ತಗಳೆ ಆಗಿರುವುದರಿಂದ ಅದನ್ನು ಖ್ಯಾತ ಕರ್ನಾಟಕಗಳೆಂದು ಕರೆಯಲಾಗಿದೆ.
ಅವು -
1 ಉತ್ಪಲಮಾಲಾವೃತ್ತ
2 ಚಂಪಕಮಾಲಾವೃತ್ತ
3 ಮತ್ತೇಭವಿಕ್ರೀಡಿತ ವೃತ್ತ
4 ಶಾರ್ದೂಲವಿಕ್ರೀಡಿತ ವೃತ್ತ
5 ಸ್ರಗ್ಧರಾ ವೃತ್ತ
6 ಮಹಾಸ್ರಗ್ಧರಾ ವೃತ್ತ
ಖ್ಯಾತ ಕರ್ನಾಟಕಗಳ ಲಕ್ಷಣ ಪದ್ಯ
ಗುರುವೊಂದಾದಿಯೊಳುತ್ಪಲಂ ಗುರುಮೊದಲಮೂರಾಗೆ ಶಾರ್ದೂಲಮಾ
ಗುರುನಾಲ್ಕಾಗಿರಲಂತು ಸ್ರಗ್ಧರೆ, ಲಘುಧ್ವಂಧ್ವಗುರುಧ್ವಂಧ್ವಮಾ
ಗಿರಿ ಮತ್ತೇಭ ಲಘುದ್ವಯ ತ್ರಿಗುರುವಿಂದಕ್ಕುಂ ಮಹಾಸ್ರಗ್ಧರಂ
ಹರಿಣಾಕ್ಷಿ ಲಘುನಾಲ್ಕು ಚಂಪಕಮಿವಾರುಂ ಖ್ಯಾತ ಕರ್ನಾಟಕಂ
1. ಉತ್ಪಲಮಾಲಾವೃತ್ತ
* ನಾಲ್ಕು ಸಾಲಿನ ಪದ್ಯವಾಗಿರುತ್ತದೆ. ಪ್ರತಿ ಸಾಲು ಪರಸ್ಪರ ಸಮವಾಗಿರುತ್ತವೆ
* 3 ಅಕ್ಷರದ 6 ಗಣಗಳಿಂದ ಕೂಡಿದ್ದು ಕೊನೆಯಲ್ಲಿ ಒಂದು ಲಘು, ಒಂದು ಗುರು ಬರುತ್ತದೆ.
* ಇದರಲ್ಲಿ ಒಟ್ಟು 20 ಅಕ್ಷರಗಳು ಬರುತ್ತವೆ.
* ಇಲ್ಲಿ ಭ ರ ನ ಭ ಭ ರ - ಲಘು, ಗುರು
* ಇದರಲ್ಲಿ ಗುರು ಮೊದಲು ಬರಬೇಕು.
- UU - U - U U U - U U - U U. - U - U -
ತೆಂಕಣ/ಗಾಳಿ ಸೋಂ /ಕಿದೊಡ/ಮೊಳ್ನುಡಿ/ಗೇಳ್ದೊ ಡ/ಮಿಂಪನಾ/ಳ್ದ ಗೇ
- UU.- U - / UUU /- U U - U U - U - U -
ಯಂಕಿವಿ/ವಿಕ್ಕಡಂ /ಬಿರಿದ /ಮಲ್ಲಿಗೆ/ಗಂಡೊಡ/ಮಾದ ಕೆಂ/ದಲಂ
- UU - U - U U U - U U - U U - U - U -
ಪಂಗೆಡೆ/ಗೊಂಡೊಡಂ/ ಮಧುಮ/ಹೋತ್ಸವ/ಮಾದೊಡ /ಮೇನನೆಂ/ಬೆನಾ
- UU - U - UUU - U U - UU - U - U -
ರಂಕುಸ/ವಿಟ್ಟೊಡಂ/ನೆನೆವು/ದೆನ್ನ ಮ/ನಂ ವನ/ವಾಸಿ ದೇ/ಶಮಂ
2. ಚಂಪಕಮಾಲಾವೃತ್ತ
* ನಾಲ್ಕು ಸಾಲಿನ ಪದ್ಯವಾಗಿರುತ್ತದೆ. ಪ್ರತಿ ಸಾಲು ಪರಸ್ಪರ ಸಮವಾಗಿರುತ್ತವೆ
* ಇದರಲ್ಲಿ ಒಟ್ಟು 21 ಅಕ್ಷರಗಳಿರುತ್ತವೆ.
* ಇದರ ಸೂತ್ರ ನ ಜ ಭ ಜ ಜ ಜ ರ ಎಂಬು 7 ಗಣಗಳು ಬರುತ್ತವೆ.
UUU U - U - UU U - U U - U U - U - U -
ನೆನೆಯ/ದಿರಣ್ಣ/ ಭಾರತ /ದೊಳಿಂಪೆ/ರರಾರು/ಮನೊಂದೆ/ಚಿತ್ತದಿಂ/
UUU U U - - UU U U - - - U U U - - U U
ನೆನೆವೊ/ಡೆ ಕರ್ಣ/ನಂ ನೆನೆ/ಯ ಕರ್ಣ/ನೊಳಾರ್ ದೊ/ರೆ ಕರ್ಣ/ನೇರು ಕ
- U U U - U U- U U - U U U- U - U - U U
ರ್ಣನ ಕ/ಡು ನನ್ನಿ/ಕರ್ಣನ/ಳವಂಕ/ದ ಕರ್ಣ/ನ ಚಾಗ/ಮೆಂದು ಕ
- U U U - U - UU U U - U - U U -U - U -
ರ್ಣನ ಪ/ಡೆಮಾತಿ/ನೊಳ್ ಪುದಿ/ದು ಕರ್ಣ/ರಸಾಯ/ನಮಲ್ತೆ /ಭಾರತಂ
3. ಮತ್ತೇಭವಿಕ್ರೀಡಿತ ವೃತ್ತ
* ನಾಲ್ಕು ಸಾಲಿನ ಪದ್ಯವಾಗಿರುತ್ತದೆ. ಪ್ರತಿ ಸಾಲು ಪರಸ್ಪರ ಸಮವಾಗಿರುತ್ತವೆ
* ಇಲ್ಲಿ ಒಟ್ಟು 20 ಅಕ್ಷರಗಳು ಬರುತ್ತವೆ. ಒಂದು ಲಘು, ಒಂದು ಗುರು ಬರುತ್ತದೆ.
* ಇದರ ಸೂತ್ರ
ಸ ಭ ರ ನ ಮ ಯ ದಿಂದ ಕೂಡಿದ 6 ಗಣಗಳು ಬರುತ್ತವೆ
U U - - UU - UU - UU - - - U - - U -
ಅರಿಯಂ/ಸೋದರ/ನೆಂದುಧ/ರ್ಮತನ/ಯಂ ನಿರ್ವ್ಯಾ/ಜದಿಂ ನಿ/ನ್ನನಾ
UU - - UU U - - UUU - - - U - - U -
ನರಿವೆಂ /ಮುನ್ನರಿ/ದಿರ್ದುಮೆ/ನ್ನರಸ/ನಾನೇಕಿ/ತ್ತೆನಿ ಲ್ಲೇ/ಕೆ ಪೇ
UU - - UU - U - - UU - - - U - - U -
ರಿಳಿಪ/ಲ್ಕೊಲ್ದೆನು/ಮಿಲ್ಲ ಕಾ/ರ್ಯವಶ/ದಿಂಕೂರ್ಪಂ/ತೆವೊಲ್ ನಿ/ನ್ನನಾ
UU - - U U - U - UU U - - - U - - U -
ನೆರೆಕೊಂ/ದೆಂಮುಳಿ/ಸಿಂದಮಂ/ಗನೃಪ/ತೀ ಕೌಂತೇ/ಯರೇಂ ಕೊಂ/ದರೇ
4. ಶಾರ್ದೂಲವಿಕ್ರೀಡಿತ ವೃತ್ತ
* ನಾಲ್ಕು ಸಾಲಿನ ಪದ್ಯವಾಗಿರುತ್ತದೆ. ಪ್ರತಿ ಸಾಲು ಪರಸ್ಪರ ಸಮವಾಗಿರುತ್ತವೆ
* ಇಲ್ಲಿ 6 ಗಣಗಳು ಬರುತ್ತವೆ. ಕೊನೆಯಲ್ಲಿ ಒಂದು ಗುರು
* ಸೂತ್ರ ಮ ಸ ಜ ಸ ತ ತ - 19 ಅಕ್ಷರಗಳಿಂದ ಕೂಡಿದ್ದು ಅತ್ಯಂತ ಚಿಕ್ಕ ವೃತ್ತವಾಗಿದೆ
- - - U U - UU - UU - - - U - - U -
ಕ್ರಂದತ್ಸ್ಯಂ/ದನಜಾ/ತನಿರ್ಗ/ತಶಿಖಿ /ಜ್ವಾಳಾಸ/ಹಸ್ರಂಗ/ಳಾ
- - - U U- U - U UU - - - U - - U -
ಟಂದೆತ್ತಂ/ಕವಿದ/ಳ್ವೆ ಬೇವ/ ಶವಸಂ/ಘಾತಂಗ/ಳಂ ಚಕ್ಕ/ಮೊ
- - - UU - U - U UU - - - U - - U -
ಕ್ಕೆಂದಾಗಳ್ /ಕಡಿದು/ಗ್ರಭೂತ/ನಿಕರಂ/ಕೆಯ್ ಬೇಯೆ/ಬಾಯ್ ಬೇಯೆ/ತಿಂ
- - - U U - U U - U U - U - U - - U -
ಬಂದಂ ತ/ನ್ನ ಮನ/ಕ್ಕಗುರ್ವಿ/ಸುವಿನಂ /ದುರ್ಯೋಧ/ನಂ ನೋಡಿ/ದಂ
5. ಸ್ರಗ್ಧರೆ ವೃತ್ತ
* ನಾಲ್ಕು ಸಾಲಿನ ಪದ್ಯವಾಗಿರುತ್ತದೆ. ಪ್ರತಿ ಸಾಲು ಪರಸ್ಪರ ಸಮವಾಗಿರುತ್ತವೆ
* ಇದರಲ್ಲಿ 21 ಅಕ್ಷರಗಳಿದ್ದು, 7 ಗಣಗಳಿಂದ ಕೂಡಿರುತ್ತದೆ.
* ಸೂತ್ರ ಮ ರ ಭ ನ ಯ ಯ ಯ
- - - - U - - UU UU U U - - U - - U - -
ಆಸೇತೋ/ರಾಮ ಚಾ/ಪಾಟನಿ/ ತಟಯು/ಗ ಟಂಕಾಂ/ಕಿತಾಖಂ/ಡ ಖಂಡಾ
- - - - U - -UU UUU U- - U - - U - -
ದಾ ಪೀಯೂ/ಷಾಬ್ಧಿ ದು/ಗ್ಧಪ್ಲವ/ ಧವಳ /ಕನತ್ಕಂ/ದರಾನ್ಮಂ/ದರಾದ್ರೇಃ
- - - - U - - U U UUU U - - U - - U - -
ಆಚಂದ್ರಾ/ರ್ಕ ಪ್ರತೀ/ತೋಭಯ/ಗಿರಿಶಿ/ಖರಾತ್ ಸ್ವೋ/ದಯಸ್ಯೈ/ ಕ ಹೇತೋಃ
- - - UU - - UU UUU U - - U - - U - -
ಶೈಲೇಳಾ/ಕಲ್ಪಕಾ/ಳಂಕ್ಷಿತಿ/ವಲಯ/ಮಿದಂ ಪಾ/ತು ವಿಕ್ರಾಂ/ ತತುಂಗಃ
6 ಮಹಾಸ್ರಗ್ಧರೆ ವೃತ್ತ
* ನಾಲ್ಕು ಸಾಲಿನ ಪದ್ಯವಾಗಿರುತ್ತದೆ. ಪ್ರತಿ ಸಾಲು ಪರಸ್ಪರ ಸಮವಾಗಿರುತ್ತವೆ
* ಇದರಲ್ಲಿ ಒಟ್ಟು 22 ಅಕ್ಚರಗಳಿಂದ ಕೂಡಿ 7 ಗಣಗಳನ್ನು ಹೊಂದಿ ಕೊನೆಯಲ್ಲಿ ಒಂದು ಗುರು ಬರುತ್ತದೆ.
* ಅತ್ಯಂತ ದೊಡ್ಡ ವೃತ್ತವಾಗಿದೆ.
* ಸೂತ್ರ ಸ ತ ತ ನ ಸ ರ ರ - ಗುರು
UU - - - U - - U UU U U U - - - - - U. - -
ಕಲಿಗಂ/ಬಲ್ಗಾಳ್ಗ/ಮಂಬೆತ್ತಿ/ದೆನಿದು/ವೆ ಪದಂ/ಮಾರ್ಕೊಳಲ್ /ಸಿಂಧುರಾ/ಜಂ
UU - - - U - - U UUU UU - - U - - U - -
ಗೆಲಲೆಂ/ದಾಂ ಬಂದೆ/ನಿಂಕೊಂದ/ಪನೆ ನೆ/ರದುನಿಂ/ದಾನಿಮೆಂ/ದಾಂತರಂ/ಮೂ
U U - - - U - - U UU U U U - - U - - - - -
ದಲಿಸು/ತ್ತೆಚ್ಚಂ ಪ್ರ/ಚಂಡ ಪ್ರ/ಳಯ ಘ/ನ ಘಟಾ/ರಾವದಿಂ/ದಾರ್ದುಬಾ/ಣಾ
U U - - - U - - U UUU U U - - U - - U - -
ವಲಿಯಿಂ/ದಂಪೂಳಿ/ರೋದೋವಿ/ವರಮ/ನೊ ದ ವಿ/ತ್ತೊಂದು ಘೋ/ರಾಂಧಕಾ/ ರಂ
0 ಕಾಮೆಂಟ್‌ಗಳು