Ticker

6/recent/ticker-posts

ಛಂದಸ್ಸು, Chandhassu

 

    ಕಾವ್ಯ ಅಥವಾ ಪದ್ಯಗಳನ್ನು ರಚಿಸಲು ಬೇಕಾದ ನಿಯಮಗಳ ಶಾಸ್ತ್ರಕ್ಕೆ ಛಂದಸ್ಸು ಎಂದು ಕರೆಯುವರು. ಇಲ್ಲಿ ಛಂದಸ್ಸು ಪದವು ಸಂಸ್ಕ್ರತದ ಛಂದ್, ಛದ್ ಧಾತುವಿನಿಂದ ಬಂದಿದೆ. ಛಂದ್ ಎಂದರೆ ಆಚ್ಛಾದಿಸು, ಮುಚ್ಚುವುದು, ಹೊದಿಸುವುದು ಎಂದರ್ಥ.

ಕಾವ್ಯಕ್ಕೆ ಸೊಬಗು, ಕಾಂತಿ, ಶಕ್ತಿಬರಬೇಕಾದರೆ ಛಂದಸ್ಸು ಅನಿಮಾರ್ಯ ಎಂದು ಕವಿಕಾಮ ಹೇಳಿದ್ದಾನೆ.

ಛಂದಸ್ಸು ಎಂದರೆ ಕಾವ್ಯಕ್ಕೆ ಒಂದು ವಾತಾವರಣ ಒಂದು ಆಚ್ಛಾದನವಿದ್ದಂತೆ ಎಂದು ಹೆಗಲ್ ಹೇಳಿದ್ದಾರೆ.

ಸಾಹಿತ್ಯದಲ್ಲಿ ಗದ್ಯವಮತ್ತು ಪದ್ಯ ಪ್ರಕಾರಗಳನ್ನು ನೋಡುತ್ತೇವೆ.  ಪದ್ಯ ಎಂದರೆ ಕಾವ್ಯ ಎಂದು ಗುರುತಿಸಿಕೊಳ್ಳಬಹುದು. ವ್ಯಾಕರಣವು ಕಾವ್ಯ ಮತ್ತು ಗದ್ಯಕ್ಕೂ ಅನ್ವಯಿಸುತ್ತದೆ. ಆದರೆ ಛಂದಸ್ಸು ಕಾವ್ಯಕ್ಕೆ ಅತಿ ಪ್ರಮುಖವಾಗಿ ಅನ್ವಯಿಸುತ್ತದೆ. ಕಾವ್ಯದಲ್ಲಿ ನಾವು ನೋಡುವ ರಸ, ಧ್ವನಿ, ಅಲಂಕಾರ, ಔಚಿತ್ಯ ಮುಂತಾದವು ಇವು ಕಾವ್ಯದ ಆಂತರಿಕ ಅಂಗಗಳು, ಛಂದಸ್ಸು ಕಾವ್ಯದ ಬಾಹ್ಯ ಅಂಗವಾಗಿ ಕಾಣುತ್ತದೆ. ಕಾವ್ಯವು ಒಬ್ಬ ಕವಿಯ ಅನುಭವ, ಭಾವನೆಗಳ ಸಂಗ್ರಹವಾಗಿರುತ್ತದೆ. ಅದು ಓದುಗನಿಗೆ ತಲುಪುವಾಗ ಛಂದಸ್ಸು ಅಭಿವ್ಯಕ್ತಿಗೊಂಡು ಬರುತ್ತದೆ.

 ಛಂದಸ್ಸಿಗೆ ಸಂಬಂಧಪಟ್ಟ ಛಂದೋಗ್ರಂಥಗಳು
* ಪಿಂಗಳ- ಛಂದಃಸೂತ್ರ - ಸಂಸ್ಕ್ರತದ ಮೊದಲ ಛಂದೋಗ್ರಂಥ
* ಈಶ್ವರ ಕವಿ - ಜಿಹ್ವಾಬಂಧನ
* ಗುಣಚಂದ್ರ - ಛಂದಃಸ್ಸಾರ
* ಶ್ರೀವಿಜಯ- ಕವಿರಾಜಮಾರ್ಗ
* ಶಾರ್ಙ್ಗದೇವ - ಸಂಗೀತ ರತ್ನಾಕರ
* ಜಯಕೀರ್ತಿ - ಛಮದೋನುಶಾಸನ
* D.S ಕರ್ಕಿ - ಛಂದೋವಿಕಾಸ
* T.V ವೆಂಕಟಾಚಲಶಾಸ್ತ್ರಿ - ಛಂದಃಸ್ವರೂಪ
* 3ನೇ ಸೋಮೇಶ್ವರ - ಮಾನಸೋಲ್ಲಾಸ/ ಅಭಿಲಷೀತಾರ್ಥ ಚಿಂತಾಮಣಿ

 ಛಂದಸ್ಸಿನ ಮಹತ್ವ
ಛಂದಮನರಿಯದೆ ಕವಿತೆಯ
ದಂದುಗದೊಳ್ ತೊಡರ್ದು
ಸುಳಿವ ಕುಕವಿಯೆ ಕುರುಡಂ' - 1ನೇ ನಾಗವರ್ಮ. 
(ಛಂದಸ್ಸನ್ನು ತಿಳಿಯದೆ ಕವಿತೆಯನ್ನು ರಚಿಸುವ ಕವಿಗಳು ಸಾಮಾನ್ಯ ಅಥವಾ ಕೆಟ್ಟ ಕವಿಗಳು ಕುರುಡರಿದ್ದಂತೆ). 


1. ಪ್ರಾಸ - 
ಕಾವ್ಯ ಅಥವಾ ಪದ್ಯದ ಸಾಲಿನಲ್ಲಿ ನಿಗಧಿತವಾದ ಅಥವಾ ನಿರ್ಧಿಷ್ಟವಾದ ಸ್ಥಾನದಲ್ಲಿ ಒಂದೇ ರೀತಿಯಾದ ವ್ಯಂಜನಾಕ್ಷರ ಪುನರಾವರ್ತನೆಯಾಗುವುದನ್ನು ಪ್ರಾಸ ಎನ್ನುವರು. ಪ್ರಾಸ ಎಂಬುದು ಸಂಸ್ಕ್ರತದಿಂದ ಬಂದಿದೆ‌ 

ಸೋಮೇಶ್ವರ ಪ್ರಾಸವನ್ನು ಪ್ರಾಣಾಕ್ಷರ ಎಂದಿದ್ದಾನೆ.

ಸರ್ವಜ್ಞ - ಒಂದೆಡೆ ಪ್ರಾಸವಿಲ್ಲದ ಪದವ ತಾಸು ಹಾಡಿದಡೇನು. 

ಉದಾ- ಸಲಜನಂ ಕಾಣುತೆ ಕಾ
           ತುವೆನಲಾ ಕಾರಿಕಾಲೊಳಿಪ್ಪಮ್ಮೆಯರಂ.

 1. ಆದಿಪ್ರಾಸ 
ಪದ್ಯದ ಪ್ರತಿ ಪಾದದಲ್ಲಿ ಮೊದಲನೆಯಕ್ಷರ ಅಥವಾ ಎರಡನೆಯ ಅಕ್ಷರವು ಒಂದೇ ರೀತಿಯ ವ್ಯಂಜನಾಕ್ಷರ ಪುನರಾವರ್ತನೆಯಾಗುವುದನ್ನು ಆದಿಪ್ರಾಸ ಎನ್ನುವರು. 

ಉದಾ- 
             ನರತ್ನ ಹೇಮನಿರ್ಮಿತವೆನಿಪಾಸ್ಥಾನ
             ಭನದೋಳಾ ರಾಜರತ್ನ 
             ಛವಿವಡೆದೆಸೆದನು ರತ್ನಪುಷ್ಪಕದೊಳು
             ದಿವಿಜೇಂದ್ರನೊಪ್ಪು ವಂದದೋಳು.

             ಸಲಜನಂ ಕಾಣುತೆ ಕಾ
           ತುವೆನಲಾ ಕಾರಿಕಾಲೊಳಿಪ್ಪಮ್ಮೆಯರಂ (ರಗಳೆ).

2.ಅಂತ್ಯಪ್ರಾಸ
ಪದ್ಯದ ಪ್ರತಿ ಪಾತ್ರದ ಕೊನೆಯಲ್ಲಿ ಒಂದೇ ತೆರನಾದ ವ್ಯಂಜನಾಕ್ಷರಗಳು ಪುನರಾವರ್ತನೆಯಾಗುವುದನ್ನು ಅಂತ್ಯಪ್ರಾಸ ಎನ್ನುವರು
ಉದಾ- 
        ಇಟ್ಟಿದ್ದೆ ಎದೆತುಂಬ ಕನಸುಗಳ ನಕ್ಷತ್ರ
        ಪ್ರೀತಿ ಗೆರೆಯನು ಎಳೆದು ಬಿಡಿಸಿದ್ದೆ ನಿನ ಚಿತ್ರ

        ಆಡುವ ಗುಂಡಯ್ಯನ ಹೊಸ ನೃತ್ಯಂ
        ನೋಡುವ ಶಿವನಂ ಮುಟ್ಟಿತುವಸತ್ಯಂ

3.ಮಧ್ಯಪ್ರಾಸ
ಕೆಲವೊಮ್ಮೆ ಪದ್ಯದ ಪ್ರತಿ ಪಾದದ ಮಧ್ಯದಲ್ಲಿ ಒಂದೇ ತೆರನಾದ ವ್ಯಂಜನಾಕ್ಷರ ಪುನರಾವರ್ತನೆಯಾಗುವುದನ್ನು ಮದ್ಯಪ್ರಾಸ ಎನ್ನುವರು.
ಉದಾ- 
        ಜನ್ಮ ಭೂಮಿಯ ಮೀರಿದ ಸ್ವರ್ಗವೇ ಇಲ್ಲ
        ಮಾತೃ ಭಾಷೆಯ ಮೀರಿದ ಅಮೃತವಿಲ್ಲ.

ಆದಿಪ್ರಾಸ 
ಇದರಲ್ಲಿ ನಾಗವರ್ಮ ಮತ್ತು ಈಶ್ವರ ಕವಿಗಳು ೬ ವಿಧಗಳನ್ನು ನೀಡಿದ್ದಾರೆ. 
೧.ಸಿಂಹ ಪ್ರಾಸ 
೨.ಗಜ ಪ್ರಾಸ 
೩.ವೃಷಭ ಪ್ರಾಸ 
೪.ಅಜಪ್ರಾಸ 
೫.ಶರಭಪ್ರಾಸ 
೬. ಹಯಪ್ರಾಸ

1. ಸಿಂಹಪ್ರಾಸ
ಪ್ರಾಸಾಕ್ಷರದ ಹಿಂದಿನ ಸ್ವರವು ಹ್ರಸ್ವವಾಗಿದ್ದರೆ ಅದು ಸಿಂಹಪ್ರಾಸವಾಗಿರುತ್ತದೆ. 
ಉದಾ-
        ತನೂಜನ ಕೂಡೆ ಮೈದುನ
        ದ ಸರಸವನೆಸಗಿ ರಥದೊಳು
        ನುಜರಿಪು ಬರಸೆಳೆದು

        ನರಿದು ನುಡಿಯಲುಂ ನುಡಿ
        ದುನರಿದಾರಯಲುಮಾರ್ಪರಾ ನಾಡವರ್ಗಳ್
        ದುರರ್ ನಿಜದಿಂ ಕುರಿತೋ
        ದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳ್

2. ಗಜಪ್ರಾಸ
ಇಲ್ಲಿ ಪ್ರಾಸಾಕ್ಷರದ ಹಿಂದಿನ ಸ್ವರವು ದೀರ್ಘವಾಗಿದ್ದರೆ ಅದನ್ನು ಗಜಪ್ರಾಸ ಎನ್ನುವರು.
ಉದಾ- 
        ಕಾವೇರಿಯಿಂದಮಾ ಗೋ
        ದಾರಿವರಮಿರ್ದ ನಾಡದಾ ಕನ್ನಡದೊಳ್
        ಭಾವಿಸಿದ ಜನಪದಂ ವಸು
        ಧಾಳಿಯವಿಲೀನವಿಶದ ವಿಷಯ ವಿಸೇಷಂ

        ಭೇವಿಲ್ಲಲೆ ಕರ್ಣನಮ್ಮೊಳು
        ಯಾವರು ಕೌರವರೊಳಗೆ ಸಂ
        ವಾದಿಸುವಡನ್ವಯಕೆ

3. ವೃಷಭ ಪ್ರಾಸ
ಪ್ರತಿ ಪಾದದ ಪ್ರಾಸಾಕ್ಷರದ ಹಿಂದೆ ಒಂದು ವ್ಯಂಜನವಾಗಲಿ, ಅನೇಕ ವ್ಯಂಜನಗಳಾಗಲಿ ಇದ್ದು ಅದರ ಹಿ.ದೆ ಅನುಸ್ವಾರವಿದ್ದರೆ ಅದು ವೃಷಭ ಪ್ರಾಸವಾಗಿರುತ್ತದೆ.
ಉದಾ- 
        ಅಂಬುಜವೆಲ್ಲವು ರವಿಯ ನೋಳ್ಪಂತೆ ನೀ
        ಲಾಂಬುಜ ನೋಳ್ಪಂತೆ ಶಶಿಯ
        ತುಂಬಿದ ಸಭೆಯೆಲ್ಲ ನರಪನ ನೋಡುವ ಮಿಕ್ಕ
        ಹಂಲ ಮರೆದುದಲ್ಲಲ್ಲಿ

        ಕಂವಧಂಗೆಯ್ದ ಮುರ
        ಧ್ವಂಸಿಗೆ ಪೂಜಾರ್ಥಮೆಂದು ಮಾರುತ ಕೊಟ್ಟೆಂ

4. ಅಜಪ್ರಾಸ
ಪ್ರತಿ ಪಾದದ ಪ್ರಾಸಾಕ್ಷರದಲ್ಲಿ ಒಂದು ವ್ಯಂಜನವಾಗಲಿ ಅಥವಾ ಅನೇಕ ವ್ಯಂಜನಗಳಾಗಲಿ ಇದ್ದು ಅದರ ಹಿಂದೆ ವಿಸರ್ಗ ಬಂದರೆ ಅದು ಅಜಪ್ರಾಸವಾಗುತ್ತದೆ. 
ಉದಾ- 
        ನೀಂ ನಃ ಶಂಕೆಯನದೆ
        ವಾನಿಃಶರಣ ಜನರಿಂಗೆ ಶರಣಾನೀಗಳ್

        ಆಃ ಪೊರೆವನಿವನೆ ಪರಮಯ
        ಶಃ ಪಾತ್ರನೆನಲ್ಕೆ ಜನಮನಿನಿಸಲ ಸದೆಯುಂ

 5. ಶರಭಪ್ರಾಸ
ಪ್ರತಿಪಾದದ ಮೊದಲಿನ ಎರಡು ಸ್ವರಗಳ ನಡುವೆ ಒಂದೇ ವಿಧವಾದ ವಿಜಾತಿಯ ಸಂಯುಕ್ತಾಕ್ಷರವು ಬಂದರೆ ಅದೇ ಶರಭ ಪ್ರಾಸ ಎನ್ನುವರು. 
ಉದಾ- 
        ಲ್ಗಯ್ಯ ನರಪರಂಜಿ ತಡೆಯದೆ ರಘೂದ್ಸಹನ
        ಸೊಲ್ಗೇಳಿ ನಮಿಸಲಿಳೆಯೊಳ್ ಚರಿಸುತಧ್ವರದ
        ಲ್ಗುದುರೆ ಬಂದು ವಾಲ್ಮೀಕಿಯ.

        ಕ್ಷಣದೊಳ್ ಪರಸ್ಪರ ನಿರೀಕ್ಷಣದಿಂ ಮುಳಿಸ್ಮಣಿ ಪೂಣ್ಮೆ ರ
        ಕ್ಷೇಕ್ಷಣರಾತ್ಮ ಶಕ್ತಿಗೆ ಶರೀರಬಲಕ್ಕನುರೂಪಮಪ್ಪುದಂ

6. ಹಯ ಪ್ರಾಸ
ಪ್ರತಿ ಪಾದದ ಪ್ರಾಸಾಕ್ಷರದಲ್ಲಿ ಒಂದೇ ವಿಧವಾದ ಸಜಾತಿಯ ಸಂಯುಕ್ತಾಕ್ಷರಗಳಿದ್ದರೆ ಅದು ಹಯ ಪ್ರಾಸವಾಗುತ್ತದೆ. 
ಉದಾ- 
        ನಿನ್ನ ಕೊಂದಂ ಗಡಮೊಳ್
        ನಿನ್ನುಂ ಕೊಂದವನನಿಕ್ಕಿ ಕೊಲ್ಲದೆ ಮಾಣ್ದಾ
        ನಿನ್ನು ಮೊಳೆಂ ಗಡ ಸಾಲದೆ
        ನಿನ್ನಯ ಕೂರ್ಮೆಗಮದೆನ್ನ ಸೌಧರ್ಮಿಕೆಗಂ.

         ಬಿನ್ನಹ ಗುರುವೆ ಧ್ಯಾನಕೆ ಬೇಸರಾದಾಗ 
         ನಿನ್ನ ನಾದಿಯ ಮಾಡಿಕೊಂಡು
         ನ್ನಡದೊಳಗೊಂದು ಕಥೆಯ ಪೇಳುವೆನದು
         ನಿನ್ನಾಜ್ಞೆ ಕಂಡ ನನ್ನೊಡೆಯಾ.


 ಯತಿ
ಕಾವ್ಯಗಳಲ್ಲಿನ ಪದ್ಯಗಳನ್ನು ಓದುವಾಗ ಕೆಲವೊಂದು ನಿರ್ಧಿಷ್ಟ ಜಾಗದಲ್ಲಿ ನಿಲುಗಡೆ ಮಾಡಬೇಕಾಗುತ್ತದೆ ಇದನ್ನೇ ಯತಿ ಎನ್ನಲಾಗುತ್ತದೆ. ಯತಿಯನ್ನು ಬಳಸುವುದು ಪದ್ಯಗಳ ಅರ್ಥಗೆಡದಂತೆ ನೋಡಿಕೊಳ್ಳುವ ಸಲುವಾಗಿ ಒಂದೆಡೆ ನಿಲ್ಲಿಸಲಾಗುತ್ತೆ. ಇದು ಸಂಸ್ಕ್ರತದ ಯಮ್ ಧಾತುವಿನಿಂ ಬಂದಿದೆ. ಯಮ್ ಎಂದರೆ ತಡೆ, ವಿಶ್ರಾಂತ, ವಿರಾಮ ಎಂದರ್ಥ.

ಕವಿಗಳು ಯತಿಯನ್ನು ಕರೆದಿರುವುದು
* ಜಯದೇವ - ವಿರೋಮೋಯತಿ
* ಜಯಕೀರ್ತಿ - ವಾಕ್ ವಿರಾಮ
* ಹೇಮಚಂದ್ರ -  ಶ್ರಮೋ ವಿರಾಮೋಯತಿ
* ಕವಿರಾಜಮಾರ್ಗ - ಯತಿಯೆಂಬುಸಿರ್ವತಾಣಂ
ಉದಾ - 
ಲೋಗರಿಗೆ ಕೊಡಬಾರದಾಗಿ ಸತಿ ವಂಶಗತ ವಾಗಿ ಬಂದುದರಿಂದ ತಂದೆ {} ಪಟ್ಟವ 
ಕಟ್ಟು ವಾಗಲರ್ಚಿಸಿಕೊಂಬುದಾಗಿ ದೈವಂ ನೆಳಲವತಪನೊಸೆದೀವುದಾಗಿ.ಸಾಗಿಸುವ 
ತಾಯ್ {} ಧುರದೊರಿಗಳಂ ನಡುಗಿಸುವುದಾಗಿ ಚತುರಂಗಬಲವೆನಿಸಿತೀ {}ಛತ್ರವೆಂ ಬಾಗಳಿದನರಿದರಿದು ಬೇಡುವರನತಿ ಮರುಳ ರನ್ನರೇ ಮೂಜಗದೊಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು