Ticker

6/recent/ticker-posts

ಗಣ

 

ಗಣ 

ಗಣ ಎಂದರೆ ಸಮೂಹ ಅಥವಾ ಗುಂಪು ಎಂದು ಕರೆಯಲಾಗುತ್ತದೆ. ಛಂದಸ್ಸಿನ ಹಿನ್ನೆಲೆಯಲ್ಲಿ ನೋಡುವುದಾದರೆ ಗಣ ಎಂದರೆ ಕೆಲವು ನಿಯಮಗಳಿಗನುಸಾರವಾಗಿ ವಿಭಾಗಿಸಿರುವ ಅಕ್ಷರಗಳ ಗುಂಪನ್ನು ಗಣ ಎಂದು ಕರೆಯಲಾಗುತ್ತದೆ. 

ಗಣಗಳಲ್ಲಿ 3 ವಿಧಗಳು
1ಮಾತ್ರಾಗಣ
2ಅಕ್ಷರಗಣ
3ಅಂಶಗಣ

1. ಮಾತ್ರಾಗಣ
ಇಲ್ಲಿ ಮಾತ್ರೆ ಎಂದರೆ ಅಕ್ಷರವನ್ನು ಉಚ್ಛರಿಸಲು ತೆಗೆದುಕೊಳ್ಳುವ ಸಮಯವನ್ನು ಮಾಪನ ಮಾಡುವುದನ್ನೇ ಮಾತ್ರೆ ಎನ್ನಲಾಗುತ್ತದೆ. 
ಮಾತ್ರೆಯನ್ನು 3 ರೀತಿಯಲ್ಲಿ  ನೋಡಲಾಗುತ್ತದೆ.

೧. ಲಘು
ಲಘು ಎಂದರೆ ಇಲ್ಲಿ ಹ್ರಸ್ವಾಕ್ಷರಗಳನ್ನು ಮತ್ತು ಅಲ್ಪಪ್ರಾಣಗಳಿಂದ ಕೂಡಿರುವ ಅಕ್ಷರಗಳನ್ನು ಉಚ್ಛರಿಸಲು ತೆಗೆದುಕೊಳ್ಳುವ ಸಮಯವನ್ನು ಮಾಪನ ಮಾಡುವುದನ್ನೇ ಲಘು ಎನ್ನುವರು. ಅಂದರೆ ಒಂದು ಮಾತ್ರಾ ಕಾಲಾವಧಿಯಲ್ಲಿ ಉಚ್ಛರಿಸುವುದನ್ನು ಲಘು ಎನ್ನುವರು. ಲಘುವನ್ನು U ಎಂಬ ಚಿಹ್ನೆಯಿಂದ ಬಳಸಲಾಗುತ್ತದೆ. 
ಉದಾ- U U U
            ಚಮಚ

ಲಘು ಬರುವ ಸಂದರ್ಭಗಳು
* ಎಲ್ಲಾ ಹ್ರಸ್ವಾಕ್ಷರಗಳಿಗೂ ಲಘು ಬಳಕೆ
* ಹ್ರಸ್ವಗಳಿಂದ ಕೂಡಿರುವ ವ್ಯಂಜನಗಳಿಗೂ ಲಘು ಬಳಕೆ
* ಶಿಥಿಲದ್ವಿತ್ವದ ಹಿಂದಿನಾಕ್ಷರ ಹ್ರಸ್ವವಾಗಿದ್ದರೆ ಅದು ಕೂಡ ಲಘು. 
ಉದಾ- U U   -   U
            ಕುಳಿರ್ಗಾಳಿ

 ೨. ಗುರು
ಇಲ್ಲಿ ದೀರ್ಘಾಕ್ಷರಗಳನ್ನು ಉಚ್ಛರಿಸಲು ತೆಗೆದುಕೊಳ್ಳುವ ಸಮಯವನ್ನು ಮಾಪನ ಮಾಡುವುದೇ ಗುರು. ಇದನ್ನು ಎರಡು ಮಾತ್ರಾ ಕಾಲಾವಧಿಯಲ್ಲಿ ಉಚ್ಛರಿಸಲಾಗುತ್ತದೆ. 
ಗುರುವನ್ನು ' - ' ಚಿಹ್ನೆಯಿಂದ ಗುರುತಿಸಲಾಗುತ್ತದೆ.

ಗುರು ಬರುವ ಸಂದರ್ಭಗಳು
* ದೀರ್ಘಾಕ್ಷರಗಳೆಲ್ಲವೂ ಗುರುವಾಗಿರುತ್ತದೆ.
* ದೀರ್ಘಾಸ್ವರದಿಂದ ಕೂಡಿರುವ ವ್ಯಂಜನಗಳೂವಗುರುವಾಗಿರುತ್ತವೆ. 
* ಒತ್ತಕ್ಷರದ ಹಿಂದಿನ ಅಕ್ಷರ ಹ್ರಸ್ವ ಅಥವಾ ದೀರ್ಘವಾಗಿದ್ದರೂ ಅದು ಗುರು.
* ಅನುಸ್ವಾರ ಮತ್ತು ವಿಸರ್ಗದಿಂದ ಕೂಡಿರುವ ಅಕ್ಷರಗಳಿಗೂ ಗುರು ಬಳಕೆ
* ಷಟ್ಪಧಿಯ ಮೂರನೆಯ ಸಾಲಿ‌ನ ಕೊನೆಯ ಅಕ್ಷರ ಲಘುವಾಗಿದ್ದರೂ ಅಲ್ಲಿ ಗುರು ಬಳಕೆ. 
ಉದಾ- 
U U U    - 
ಉದರದೊಳ್

* ಐ, ಔ ಸ್ವರಗಳಿಂದ ಕೂಡಿದ ಅಕ್ಷರಕ್ಕೂ ಗುರು ಬಳಕೆ.

ಉದಾ -
U -  U U.  U  -   U  -  UU
ಅನೈತಿಕ,   ಅನೌಪಚಾರಿಕ. 

೩. ಪ್ಲುತ
ಯಾವ ಅಕ್ಷರದ ಮುಂದೆ s ಚಿಹ್ನೆ ಬರುತ್ತದೊ ಅದನ್ನು ಪ್ಲುತ ಎನ್ನುವರು. 
ಉದಾ- 
-     -                 -      - 
ರಾಧಾs.         ರಾಮಾs


 ಮಾತ್ರಾಗಣ
ಇಲ್ಲಿ ಮಾತ್ರೆಗಳಿಗೆ ಅನುಗುಣವಾಗಿ ಗಣ ವಿಭಾಗ  ಮಾಡುವುದನ್ನು ಮಾತ್ರಾಗಣ ಛಂದಸ್ಸು ಎನ್ನುವರು. ಇದನ್ನು U  -  ಚಿಹ್ನೆಗಳಿಂದ ಗುರುತಿಸಲಾಗುತ್ತದೆ. 

ಮಾತ್ರಾಗಣದಲ್ಲಿ 3 ಪ್ರಕಾರಗಳನ್ನು ಕಾಣಬಹುದು
* ಮೂರು ಮಾತ್ರೆಯ ಗಣ ವಿಭಾಗ:  U U U
                                                     ಬಡವ.
* ನಾಲ್ಕು ಮಾತ್ರೆಯ ಗಣ ವಿಭಾಗ :  -   U  U
                                                   ಬಂಧುವು.
* ಐದು ಮಾತ್ರೆಯ ಗಣ ವಿಭಾಗ
                                                    U  U  -  U
                                                   ಜಯರಾಮ.

ಇಲ್ಲಿ ಮಾತ್ರಾಗಣಗಳಿಂದ ಕೂಡಿದ ಪದ್ಯಜಾತಿಗಳನ್ನು ಮಾತ್ರಾಗಣದಲ್ಲಿ ನೋಡುತ್ತೇವೆ‌ ಮಾತ್ರೆಗಳು ಬಹುವಾಗಿ ಪದ್ಯ ಅಥವಾ ಕಾವ್ಯಗಳಿಗೆ ಬಳಕೆಯಾಗುತ್ತದೆ. ಇಂತಹ ಮಾತ್ರಾ ವೃತ್ತಗಳು 3 ಇವೆ. 
1 ಕಂದ
2 ರಗಳೆ
3 ಷಟ್ಪಧಿ. 

ಕಂದ ಪದ್ಯ

ಕನ್ನಡ ಪ್ರಾಚೀನ ಸಾಹಿತ್ಯದಲ್ಲಿನ ಪದ್ಯಜಾತಿಗಳಲ್ಲೊಂದು. ಇದಕ್ಕಿ.ತ ಹೆಚ್ಚು ಬಳಕೆಯಾಗುತ್ತಿದ್ದುದು ಖ್ಯಾತ ಕರ್ನಾಟಕಗಳೆಂಬ ವೃತ್ತಗಳು. ತದನಂತರದಲ್ಲಿ ಅತಿ ಹೆಚ್ಚಿನ ಬಳಕೆಗೆ ಕಂದಪದ್ಯವು ಬಂದಿತು. ನಮ್ಮ ಕೃತಿಯಾದ ಕವಿರಾಜಮಾರ್ಗದಲ್ಲಿ ಮೊದಲು ಕಾಣುತ್ತೇವೆ. ನಂತರ ಪಂಪನ ಕಾವ್ಯಗಳಲ್ಲಿ ಹಾಗೆಯೇ ಪೊನ್ನ, ರನ್ನ, ನಾಗವರ್ಮ, ಜನ್ನ ಮೊದಲಾದವರ ಕಾವ್ಯಗಳಲ್ಲಿ ಕಂದಪದ್ಯ ಬಳಕೆಯಾಗಿರುವುದನ್ನು ಕಾಣುತ್ತೇವೆ. ಕಂದಪದ್ಯ ಜಾತಿ ಕನ್ನಡದ್ದಲ್ಲ, ಸಂಸ್ಕ್ರತದ 'ಆರ್ಯಗೀತಿ' ಎಂಬುದರಿಂದ ಪ್ರಚಾರದಲ್ಲಿತ್ತು. ನಂತರದಲ್ಲಿ ಪ್ರಾಕೃತದ ' ಸ್ಕಂಧಕ' ಕನ್ನಡದ ಕಂದವಾಗಿ ಬದಲಾಯಿಗು. 

ಕಂದ ಪದ್ಯದ ಲಕ್ಷಣಗಳು
* ಕಂದಪದ್ಯವು ಸಾಮಾನ್ಯವಾಗಿ 4 ಪದಗಳಿಂದ ಕೂಡಿರುತ್ತದೆ.
* ಇಲ್ಲಿ 1 ಮತ್ತು 3ನೇ ಸಾಲುಗಳು, 2 ಮತ್ತು 4ನೇ ಸಾಲುಗಳು ಪರಸ್ಪರ ಸಮಾವಾಗಿರುತ್ತವೆ. 
* 1 ಮತ್ತು 3ನೇ ಸಾಲಿನಲ್ಲಿ 4 ಮಾತ್ರೆಯ 3 ಗಣಗಳು, 2 ಮತ್ತು 4ನೇ ಸಾಲಿನಲ್ಲಿ 4 ಮಾತ್ರೆಯ 5 ಗಣಗಳು ಬರುತ್ತವೆ.
* ಕಂದಪದ್ಯದಲ್ಲಿ ಒಟ್ಟು 64 ಮಾತ್ರೆಗಳಿಂದ ಕೂಡಿರುವ ಪದ್ಯಜಾತಿಯಾಗಿದೆ. 
* 2 ಮತ್ತು 4ನೇ ಸಾಲಿನ ಕೊನೆಯ ಗಣದ ಕೊನೆಯ ಅಕ್ಷರ ಲಘುವಾಗಿದ್ದರೂ ಅದು ಗುರುವಾಗಿರುತ್ತದೆ.
* ಬೆಸ ಅಥವಾ ವಿಷಮ ಸ್ಥಾನದಲ್ಲಿ (1 3 5 7....) ಜಗಣ ಬರಬಾರದು.
* 6ನೇ ಗಣದ ಮೊದಲಕ್ಷರದ ನಂತರ ಯತಿ ಬರುತ್ತದೆ.

ಉದಾ- ೧.
 _  _    U  _  U        _  _
ಕಾವೇ/ ರಿಯಿಂದ/ ಮಾ ಗೋ

 _ U  U  U U _   U   _ U      _   _    U U  _
ದಾವರಿ/ವರಮಿ/ರ್ದನಾಡ/ ದಾ ಕನ್ನ/ಡದೊಳ್

_  U U    U  UUU   _  UU

ಭಾವಿಸಿ/ದ ಜನಪ/ದಂ ವಸು
_ UU      U U  _     U  UUU        UUU U       _ _
ಧಾವಳ/ಯವಿಲೀ/ನ ವಿಶದ /ವಿಷಯ ವಿ/ಶೇಷಂ

 

  _ UU    _ _        _  _
ಸಾಮಜ/ ಮಶ್ವ/ ತ್ಥಾಮಂ

 _ U U       _   U U     U _ U     _ U  U      _  _
ನಾಮದಿ /ನೊಂದಳಿ/ಡೊದಲ್ಲಿ/ ಕಂಡುಹ/ತೋಶ್ವ

  _     _   U U U U     _ _
ತ್ಥಾಮಾ/ಎನೆ ನೃಪ /  ನಶ್ವ

  _ U U     _ U U     U  U U U      U   _   U   U U  _
ತ್ಥಾಮನೆ/ ಗೆತ್ತೊಣ/ ರ್ದನೊವಜ/ ನೊರ್ವೆಸ/ ರಭಮಂ



ರಗಳೆಗಳು

ಕನ್ನಡ ಸಾಹಿತ್ಯ ಪ್ರಕಾರಗಳಲ್ಲೊಂದು. ಹಳಗನ್ನಡ ಸಾಹಿತ್ಯದಲ್ಲಿ ಪಂಪನಲ್ಲಿ ಬಳಕೆಯಾದರೂ ಹೆಚ್ಚು ಪ್ರಚಲಿತವಾಗಿದ್ದು ನಡುಗನ್ನಡದ ಆರಂಭ ಕಾಲದಲ್ಲಿ ಅದರಲ್ಲೂ ಹರಿಹರನಿಂದ ಜನ ಮನ್ನಣೆ ಪಡೆಯಿತು. ಇದು ೧ನೇ ನಾಗವರ್ಮನು ಛಂದೋಬುಧಿಯಲ್ಲಿ ಬಳಸಿರುವಂತೆ ಕಾಣುತ್ತದೆ. ಕಂದಪದ್ಯ ಬೇರೆ ಕಡೆ (ಪ್ರಾಕೃತದಿಂದ ಬಂದಹಾಗೆ ಇದು ಬಂದಿರಬಹುದು ಎನ್ನಲಾಗಿದೆ. ರಘಟಾ- ರಘಡ – ರಗಳ – ರಗಳೆಯಾಗಿ ಬದಲಾಗಿದೆ ಎಂದು ನಂಬಲಾಗಿದೆ. ನಾಗವರ್ಮ ಮತ್ತು ಜಯಕೀರ್ತಿಯರಿಬ್ಬರು ಇದರ ಲಕ್ಷಣಗಳನ್ನು ಹೇಳಿದ್ದಾರೆ.

ಲಕ್ಷಣಗಳು

·        * ಪ್ರತಿ ಪಾದದಲ್ಲೂ ಅಂತ್ಯ ಪ್ರಾಸವಿರುವುದರಿಂದ ಎರಡೆರೆಡು ಸಾಲುಗಳಂತೆ ವಿಂಗಡಣೆ

·       * ಇಂತಿಷ್ಟೇ ಸಾಲುಗಳಿರಬೇಕೆಂಬ ನಿಯಮವಿಲ್ಲ.

·       * ಪ್ರತಿ ಪಾದದಲ್ಲೂ ನಿಶ್ಚಿತವಾದ ಮಾತ್ರೆಗಳು ಬರುತ್ತವೆ.

·       * ರಗಳೆ ಪ್ರಕಾರ ಮೊದಲು ಪಂಪನ ಆದಿಪುರಾಣ ಮತ್ತು ಪಂಪಭಾರತದಲ್ಲಿ ಕಂಡುಬರುತ್ತದೆ.



ರಗಳೆಯಲ್ಲಿ ೩ ವಿಧಗಳು

೧. ಉತ್ಸಾಹ ರಗಳೆ

೨. ಮಂದಾನಿಲ ರಗಳೆ

೩. ಲಲಿತ ರಗಳೆ

 

೧. ಉತ್ಸಾಹ ರಗಳೆ

ಇದು ಪಂಪಭಾರತ ಮತ್ತು ಅಜಿತನಾಥ ಪುರಾಣದಲ್ಲಿ ಇದರ ಸುಳಿವು ಕಂಡು ಬರುತ್ತದೆ. ಇದರಲ್ಲಿ ಇಂತಿಷ್ಟೆ ಸಾಲುಗಳಿರಬೇಕೆಂಬ ನಿಯಮವಿಲ್ಲ.

ಇದರಲ್ಲಿ ೨ ಪ್ರಕಾರಗಳಿವೆ.

೧ನೇ ಪ್ರಕಾರ

೩ ಮಾತ್ರಗಳ ೩ ಗಣಗಳು ಜೊತೆಗೆ ಗುರು

U  _     U U  U    _  U     _
ಮಾವಿ/ನಡಿಯೊ/ಳಾಡು/ತುಂ

_  U     _  U     _ U    _
ಪಾಡ/ನೆಯ್ದೆ/ಕೇಳು/ತಂ.


೨ನೇ ಪ್ರಕಾರ 

೩ ಮಾತ್ರಗಳ ೪ ಗಣಗಳು

U U  U      _ U      _  U    _ U
ಕುಳಿರ್ವ /ಪೂಗೊ/ ಳಂಗ/ ಳಲ್ಲಿ

 UUU   _ U     _ U     _ U
 ತಳಿರ /ಕಾವ /ಣಂಗ/ ಳಲ್ಲಿ



೨.  ಮಂದಾನಿಲ ರಗಳೆ

ಇದು ಪ್ರಾಕೃತದಲ್ಲಿರುವ ಸಜ್ಝಟಿಕೆಯ ಪ್ರಭಾವದಿಂದ ಬಂದಿರುವುದಾಗಿದೆ. ಪಂಪನಲ್ಲಿ ಬಳಕೆಯಾಗಿರಬಹುದು.

ಇದರಲ್ಲಿ ೨ ಪ್ರಕಾರಗಳಿವೆ

೧ನೇ ಪ್ರಕಾರ

ಇಲ್ಲಿ ೪ ಮಾತ್ರೆಯ ೪ ಗಣಗಳು ಬರುತ್ತವೆ.

ಇದರಲ್ಲಿ ಅಂತ್ಯ ಪ್ರಾಸ ನಿಯತ.

UUU U        _ _       UU  _      U _  U
ಪೊವಿಲಬೆ/ ಡಂಗ0 /ಮಗೆ ಮೆ /ಚ್ಚೆನೋಡಿ

U  U _    U    U _    U  U _       U _ U
ದಿವಿಜೇ/ ನ್ದ ವಿಲಾ/ ಸದೊಳೀ/ ತು ಕೂಡಿ

 

೨ನೇ ಪ್ರಕಾರ

೧೬ನೇ ಮಾತ್ರೆಯು ಪ್ರತಿ ಸಾಲಿನಲ್ಲಿರುತ್ತವೆ.

೩ ಮತ್ತು ೫ ಮಾತ್ರೆಯ ೪ ಗಣಗಳು ಬರುತ್ತವೆ.

ಅಂತ್ಯ ಪ್ರಾಸ ಕಡ್ಡಾಯವಾಗಿರುತ್ತದೆ.

_  U    U U   U  U U   UUU    U U U_
ಅಲ್ಲಿ /ಸೊಗಯಿಸುವ /ಕೃತಕ  /ಗಿರಿಗಳಿಂ

_U      UUUUU         _ U        UUU_
ಕಲ್ಪ /  ತರುಗಳನೆ  /ಪೋಲ್ವ /ಮರಗಳಿಂ


೩. ಲಲಿತ ರಗಳೆ

ಲಲಿತ ರಗಳೆ ಆಂಗ್ಲಭಾಷೆಯ ಬ್ಲಾನ್ಕ್ ವರ್ಸಸ್ ಎಂಬ ಛಂದೋಪ್ರಕಾರದ ಕೆಲವು ಅಂಶವನ್ನು ಅಳವಡಿಸಿಕೊಂಡು ಸರಳ ರಗಳೆ, ಮಹಾಛಂದಸ್ಸು ಎಂಬ ಹೊಸ ಹೆಸರು ಪಡೆದಿದೆ. ಮಾಸ್ತಿಯವರು “ಬಿಡಿವೃತ್ರ “ ಎಂದಿದ್ದಾರೆ. ಕುವೆಂಪು “ಶ್ರೀ ರಾಮಾಯಣದರ್ಶನಂ”ನ ಇದೇ ರಗಳೆಯಲ್ಲಿ ರಚಿಸಿದ್ದಾರೆ. ಕನ್ನಡದಲ್ಲಿ ಅತಿ ಹೆಚ್ಚು ಬಳಕೆಯಾಗಿರುವ ರಗಳೆಯಾಗಿದೆ.

ಇದರಲ್ಲಿ ಪ್ರತಿ ಪಾದದಲ್ಲಿ ೫ ಮಾತ್ರೆಯ ೪ ಗಣಗಳು ಬರುತ್ತವೆ. ಇದರಲ್ಲಿ ಅಂತ್ಯ ಪ್ರಾಸ ಕಡ್ಡಾಯವಾಗಿರುತ್ತದೆ.

U U U U   U   _ U    _       U_     U U   U U _  U
ವಿಷಯವಿಷ /ವಲ್ಲಿಯುಂ /ಪೆರ್ಚಿಸುವ  /ಜಲಧಾರೆ

 

 


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು