Ticker

6/recent/ticker-posts

ರಾಷ್ಟ್ರಕೂಟರು - Rashtrakutas - Karnataka History



* ಬಾದಾಮಿ ಚಾಲುಕ್ಯರ ನಂತರ ಕರ್ನಾಟಕವನ್ನಾಳಿನ ಮತ್ತೊಂದು ರಾಜವಂಶ ರಾಷ್ಟ್ರಕೂಟರು.

* ಚಾಲುಕ್ಯರಂತೆ ಏಕಾಧಿಪತ್ಯಕ್ಕೆ ಕರ್ನಾಟಕವನ್ನು ಒಳಪಡಿಸಿದ ಸಾಧನೆ ಹೊಂದಿದ್ದಾರೆ.
* ಜೊತೆಗೆ 200ಕ್ಕಿಂತ ಹೆಚ್ಚು ವರ್ಷಗಳ ಸುಧೀರ್ಘವಾದ ಆಳ್ವಿಕೆ ನಡೆಸಿ ರಾಜಕೀಯ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕವಾಗಿ ಉನ್ನತ ಸ್ಥಾನವನ್ನು ಹೊಂದಿದ್ದಾರೆ.
* ಇವರ ರಾಜ್ಯ ಉತ್ತರದಲ್ಲಿ ನರ್ಮದಾ ನದಿಯಿಂದ ದಕ್ಷಿಣದಲ್ಲಿ ಕಾವೇರಿ ವರೆಗೂ ಪಶ್ಚಿಮದಲ್ಲಿ ಅರಬ್ಬಿ ಸಮುದ್ರ ಪೂರ್ವದಲ್ಲಿ ಆಂಧ್ರದ ಕಡಪವರೆಗೆ ಹಬ್ಬಿತ್ತು.

ರಾಷ್ಟ್ರಕೂಟರ ಮೂಲ 
* ಇವರ ರಾಜರ ಶಾಸನಗಳಲ್ಲಿ ಇವರನ್ನು ಯದು ವಂಶಕ್ಕೆ ಸೇರಿದವರು ಎಂದಿದೆ.
* ಫ್ಲೀಟ್ ಅವರು ರಾಥೋಡ್ ಉತ್ತರ ಭಾರತದ ಪಂಗಡಕ್ಕೆ ಸೇರಿದವರು ಎಂದಿದ್ದಾರೆ.
* ರಾಷ್ಟ್ರಕೂಟ ವಂಶದ ಅರಸರ ಹೆಸರುಗಳಾದ ಕಂಬರಸ, ಅಸಗವ್ವೆ, ರೇವಕ ಇವು ಕನ್ನಡದ ಹೆಸರುಗಳೆ ಆಗಿರುವುದರಿಂದ ಕರ್ನಾಟಕ ಮೂಲದವರು ಎಂದು ಹೇಳಬಹುದು.
* ಡಾಕ್ಟರ್ ಅಳ್ತೆಕರ್ ಇವರು ಕನ್ನಡ ಮೂಲದವರೆಂದು ಹೇಳಿದ್ದಾರೆ, ಕರ್ನಾಟಕದಿಂದ ಆಳ್ವಿಕೆ ನಡೆಸಿದ್ದಾರೆ ಅವರ ಒಂದು ಶಾಖೆ ಎಲಿಚಪುರದಲ್ಲಿ ಆಳ್ವಿಕೆ ನಡೆಸಿದೆ ಎಂದಿದ್ದಾರೆ.

ರಾಷ್ಟ್ರಕೂಟರ ರಾಜಕೀಯ ಇತಿಹಾಸ 
ದಂತಿದುರ್ಗ
* ರಾಷ್ಟ್ರಕೂಟ ವಂಶದ ಸ್ಥಾಪಕ
* ಬಾದಾಮಿ ಚಾಲುಕ್ಯರಲ್ಲಿ ಸಾಮಂತನಾಗಿದ್ದ.
* ಮಾಳ್ವ, ಗುಜರಾತ್ , ಕಂಚಿಯ ಪಲ್ಲವರು, ಮಧುರೈ ಪಾಂಡ್ಯರು, ಲಾಟಾ, ಕಳಿಂಗರನ್ನು ಸೋಲಿಸಿದವನು.
* ಎರಡನೇ ಕೀರ್ತಿವರ್ಮನನ್ನು ಸೋಲಿಸಿ ರಾಷ್ಟ್ರಕೂಟರ ವಂಶ ಸ್ಥಾಪಿಸಿದ.

 ಒಂದನೇ ಕೃಷ್ಣ
* ಕೀರ್ತಿವರ್ಮನನ್ನು ಪೂರ್ಣವಾಗಿ ನಾಶ ಮಾಡಿದನು.
* ಶಿಲಾಹಾರ ಮನೆತನದ ಸಣಪುಲ್ಲನನ್ನು ಸೋಲಿಸಿ ಮಾಂಡಳಿಕನನ್ನಾಗಿ ಮಾಡಿಕೊಂಡ.
* ಗಂಗರಾಜ ಶ್ರೀ ಪುರುಷನನ್ನು ಸೋಲಿಸಿದನು.
* ಎಲ್ಲೋರಾದ ಕೈಲಾಸ ದೇವಾಲಯ ಗುಹಾಂತರ ದೇವಾಲಯವನ್ನು ಕೊರಯಿಸಿದನು. ಇದನ್ನು ಪಾಶುಪತ ಶೈವ ಪಂದದ ಮಹಾವೃತ್ತಿ ಎಂಬುವನಿಗೆ ಇದನ್ನು ಸಮರ್ಪಿಸಿದನು.
*  ಬಿರುದುಗಳು - ಕೃಷ್ಣರಾಜ, ಪರಮ ಮಹೇಶ್ವರ, ಅಕಾಲ ವರ್ಷ ಶುಭತುಂಗ.

 ಎರಡನೇ ಗೋವಿಂದ 
*ಇವನು ಭೋಗ ಲಾಲಸೆಗಳಲ್ಲಿದ್ದ.

 ಧ್ರುವ 
*ಪಲ್ಲವ ದೊರೆ ದಂತಿವರ್ಮನನ್ನು ಸೋಲಿಸಿದ.
*  ವೆಂಗಿಯ ನಾಲ್ಕನೇ ವಿಷ್ಣುವರ್ಧನ ಇವನ ಪರಮಾಧಿಕಾರ ಒಪ್ಪಿದ್ದ.
* ಗಂಗರ ಶ್ರೀ ಪುರುಷ ಮತ್ತು ಶಿವಮಾರನನ್ನು ಸೋಲಿಸಿ ಶಿವಮಾರನನ್ನು ಸೆರೆಗೆ ಹಾಕಿದನು. 
* ಕನೂಜದ ಇಂದ್ರಾಯದ, ಗೂರ್ಜರ ಪ್ರತಿಹಾರರ ವತ್ಸರಾಜನನ್ನು, ಬಂಗಾಲದ ಪಾಲವಂಶ ಧರ್ಮಪಾಲನನ್ನು ಸೋಲಿಸಿ ಶ್ವೇತ ಚಕ್ರಗಳ ವಶ, ಆದರೂ ಕನುಜನ್ನು ತನ್ನ ವಶದಲ್ಲಿರಿಸಿಕೊಳ್ಳಲಿಕ್ಕಾಗಲಿಲ್ಲ.
*  ಇದರಿಂದ ಇವನು ರಾಜಾಧಿಪತ್ಯ ಭಾರತದಾದ್ಯಂತ ಹರಡಿತ್ತು.
*ಡಾ. ಅಳ್ತೀಕರ್ - ಧ್ರುವ  ಸಾಯುವ ತನಕ ಇಡೀ ರಾಷ್ಟ್ರಕೂಟರನ್ನು  ಎದುರಿಸುವವರು ಯಾರು ಇರಲಿಲ್ಲ ಎಂದಿದ್ದಾರೆ.
*  ಬಿರುದುಗಳು - ಧಾರಾವರ್ಷ, ನಿರೂಪಮ, ನರೇಂದ್ರ ದೇವ, ಕಲಿವಲ್ಲಭ.

ಮೂರನೇ ಗೋವಿಂದ 
* ಇವನನ್ನು ಮುಮ್ಮಡಿ ಗೋವಿಂದ ಎಂದು ಕರೆಯಲಾಗುತ್ತದೆ.
* ಸಿಂಹಾಸನಕ್ಕಾಗಿ ಕಂಬ ಮತ್ತು ಮೂರನೇ ಗೋವಿಂದ ನಡುವೆ ಹೋರಾಟ ನಡೆಯುತ್ತದೆ. ಕಂಬನ ಪರವಾಗಿ ಪಲ್ಲವ, ಗಂಗ, ಚೇರ, ಪಾಂಡ್ಯರಜೊತೆ ಬಂದರು ಸೋಲಿಸಿ ಗಂಗವಾಡಿಯ ರಾಜ್ಯಪಾಲನನ್ನಾಗಿ ನೇಮಕ ಮಾಡಿದನು.
* ಕಂಬನ ಸೋಲಿನ ನಂತರ ನೊಳಂಬವಾಡಿಯ ಚಾರುಪೊನ್ನೇರು ಇವನ ಸಾಮಂತನಾದನು. 
* ಉತ್ತರದ ಕಡೆ ಕನೂಜ್ ನಲ್ಲಿನ  ನಾಗಭಟ್ಟನನ್ನು ಸೋಲಿಸಿ, ನಂತರ ಚಕ್ರಾಯುಧ,  ಧರ್ಮಪಾಲರು  ಮೂರನೇ ಗೋವಿಂದನಿಗೆ  ಶರಣಾಗತರಾದರು.
* ಉತ್ತರದಿಂದ ಹಿಂದಿರುಗುವಾಗ ವಿಂದ್ಯ ಪರ್ವತದ ತಪ್ಪಲು ಪ್ರದೇಶ ವಶ ಇದರ ಮಧ್ಯದಲ್ಲಿ ಅಮೋಘವರ್ಷನ ಜನನವು ಆಯಿತು.
* ದಕ್ಷಿಣದಲ್ಲಿ ಗಂಗ, ಪಲ್ಲವ, ಪಾಂಡ್ಯ, ಕೇರಳರು ಧಂಗೆ ಎದ್ದರು  ಇದನ್ನು ನಾಶಪಡಿಸಿದನು.
* ಲಿಂಗಾನು ಶಾಸನದಲ್ಲಿ ಇವನ ಆಸ್ಥಾನವನ್ನು ಜಗತ್ತುಂಗ ಸಭೆ ಎಂದು ಕರೆಯಲಾಗಿದೆ.
* ಬಿರುದುಗಳು ಪ್ರಬೂತ ವರ್ಷ, ಜಗತ್ತುಂಗ, ಅನುಪಮ, ತ್ರಿಭುವನದವಳ.
* ಇವನು ತನ್ನ ಸಾಮ್ರಾಜ್ಯವನ್ನು ಕನ್ಯಾಕುಮಾರಿಯಿಂದ ಹಿಮಾಲಯ ಸೌರಾಷ್ಟ್ರದಿಂದ ಬಂಗಾಳದವರೆಗೂ ವಿಸ್ತರಿಸಿಕೊಂಡಿದ್ದ.

 ಅಮೋಘವರ್ಷ ನೃಪತುಂಗ
* 14 ವರ್ಷಕ್ಕೆ ಪಟ್ಟಕ್ಕೆ ಬಂದನು.
* ಕರ್ಕನು ಇವನ ಆಡಳಿತದ ಜವಾಬ್ದಾರಿ ನೋಡಿಕೊಂಡಿದ್ದನು.
* ವೆಂಗಿ ಚಾಲುಕ್ಯರ ಗುಣಗ ವಿಜಯದಿತ್ಯನನ್ನು ವಿಂಗವಳ್ಳಿ ಎಂಬಲ್ಲಿ ಸೋಲಿಸಿದನು.
* ಗಂಗರ ವಿರುದ್ಧ ಹಗೆತನುವು ಮುಂದಾಗಿತ್ತು, ನೀತಿ ಮಾರ್ಗ ಎರೆಗಂಗನನ್ನು ಕೋಲಾರ ಜಿಲ್ಲೆಯ ರಾಜರಮಡು ಎಂಬಲ್ಲಿ ಸೋಲಿಸಲಾಯಿತು, ಇದೇ ಹಗೆತನ ಮುಂದುವರಿಯಬಾರದೆಂದು ಒಂದನೇ ಬೂತುಗನಿಗೆ ತನ್ನ ಮಗಳನ್ನು ನೀಡಿ ವಿವಾಹ ಮಾಡಿ ಸಂಬಂಧವನ್ನು ಸುಧಾರಿಸಿದನು. ಇದೇ ರೀತಿಯಲ್ಲಿ ವೆಂಗಿಯ ವಿಷ್ಣುವರ್ಧನನಿಗೆ, ಪಲ್ಲವರಾಜ ನಂದಿವರ್ಮನನಿಗೆ, ವಿವಾಹ ಮಾಡಿಕೊಟ್ಟು ಸಂಬಂಧಗಳನ್ನು ಸುಧಾರಿಸಿದನು.
* ಅಮೋಘವರ್ಷನ ಹೊಸದಾಗಿ ಮಳಖೇಡ ಅಥವಾ ಮಾನ್ಯಖೇಡ  ರಾಜಧಾನಿ ನಿರ್ಮಿಸಿದನು.
* ಬಿರುದುಗಳು - ಅತಿಶಯದವಳ, ರಟ್ಟಮಾರ್ತಾಂಡ, ವೀರನಾರಾಯಣ, ಶ್ರೀವಲ್ಲಭ.
* ತನ್ನ ರಾಜ್ಯದಲ್ಲಿ ಹರಡಿದ್ದ ಸಾಂಕ್ರಾಮಿಕ ಅಥವಾ ಲೋಕೋಪದ್ರವ (ಕ್ಷಾಮ ಅಥವಾ ಅಂಟುರೋಗ) ನಿವಾರಣೆಯಾದರೆ ಎಡಗೈ ಹೆಬ್ಬೆರಳು ನೀಡಿ ನೀಡುತ್ತೇನೆಂದು ಕೊಲ್ಲಾಪುರ ಮಹಾಲಕ್ಷ್ಮಿಗೆ ನೀಡಿದನು.
* ಅಮೋಘವರ್ಷ ವಿದ್ವಾಂಸ ಮತ್ತು ಪಂಡಿತನಾಗಿದ್ದ ಪ್ರಶ್ನೋತ್ತರ ಮಾಲಿಕ ಎಂಬ ಸಂಸ್ಕೃತ ಕೃತಿಯನ್ನು ರಚಿಸಿದ್ದ.
* ಶ್ರೀವಿಜಯ ಕವಿರಾಜಮಾರ್ಗದ ರಚನೆಯನ್ನು ಮಾಡಿದ.
* ಇವನ ರಾಜ್ಯಕ್ಕೆ ಅರಬ್ ಪ್ರವಾಸಿ ಸುಲೇಮಾನ್ ಭೇಟಿ ನೀಡಿದ ಇದನ್ನು ವಿಶ್ವದ ನಾಲ್ಕು ವಿಶಾಲ ಸಾಮ್ರಾಜ್ಯಗಳಲ್ಲಿ ಇದು ಒಂದು ಎಂದಿದ್ದಾನೆ. ಉಳಿದ ಮೂರು ರೋಮನ್ ಸಾಮ್ರಾಜ್ಯ, ಅರಬ್ ಸಾಮ್ರಾಜ್ಯ, ಚೀನಾ ಸಾಮ್ರಾಜ್ಯ.

ಎರಡನೇ ಕೃಷ್ಣ
* ರಾಜನಾದ ತಕ್ಷಣ ಚಾಲುಕ್ಯ, ಗೂರ್ಜರು, ಚೋಳರ ಪ್ರತಿರೋಧ ಉಂಟಾಯಿತು.
* ಗೂರ್ಜರ ಭೋಜನಿಂದ ಸೋಲಲ್ಪಟ್ಟನು.
* ವೆಂಗಿಯ ಚಾಲುಕ್ಯ ದೊರೆ ಗುಣಗ ವಿನಯಾದಿತ್ಯನಿಂದ ಸೋಲು.

 ಮೂರನೇ ಇಂದ್ರ 
* ಉತ್ತರದ ಗೂರ್ಜರ ಪ್ರತಿಹಾರರ ಆಕ್ರಮಣ.
*  ಆಂಧ್ರದ ಪಶ್ಚಿಮ ಭಾಗ ಆಳುತ್ತಿದ್ದ ಬಾಣ ರನ್ನು ಸೋಲಿಸಿದ.
* ನೇರವಾಗಿ ಕನೂಜನ್ನೇ ಆಕ್ರಮಿಸಿದವನು ಇವನೊಬ್ಬನೇ.
* ವೆಂಗಿಯಲ್ಲಿ ರಾಜಕೀಯ ಸಂಘರ್ಷ ಉಂಟಾದ್ದರಿಂದ ತಾಡನ ಪರವಾಗಿದ್ದು ಅವನಿಗೆ ಸಿಂಹಾಸನ ದೊರಕಿಸಿಕೊಟ್ಟ.

 ಕೃಷ್ಣ ಮೂರು 
* ತಕ್ಕೊಳಂನಲ್ಲಿ ಚೋಳ ರಾಜ ರಾಜಾದಿತ್ಯನನ್ನು ರಾಷ್ಟ್ರಕೂಟರ ಪರವಾಗಿ ಬೂತುಗ ಎರಡು ಹೋರಾಟ ನಡೆಸಿ ಅವನನ್ನು ಸಾಹಿಸಿದ. ಇದರಿಂದ ಕಂಚಿಯಿಂದ ತಂಜಾವೂರಿನವರೆಗೆ ಇವನ ಸಾಮ್ರಾಜ್ಯ ವಿಸ್ತರಣೆಯಾಯಿತು.
* ಉತ್ತರದ ಕಡೆಗೆ ಗಂಗಾ ನರಸಿಂಹ ನೇತೃತ್ವದಲ್ಲಿ ಹೋಗಿ ಗುರ್ಜರ ಪ್ರತಿಹಾರರ ಪರಮಾರರನ್ನು ಉಜ್ಜಯಿನಿಯಲ್ಲಿ ಸೋಲಿಸಿದನು.
 ಇದರ ಗೆಲುವಿಗೆ ಮಧ್ಯ ಪ್ರದೇಶದ ಜಬಲ್ ಪುರದಲ್ಲಿ ಜುರಾ ಶಾಸನವನ್ನು ಹೊರಡಿಸಿದ.

* ಇವನ ನಂತರ ಖೊಟ್ಟಿಗ ಇವನ ಸೋದರ ಇಮ್ಮಡಿ ಕರ್ಕ ಇವರ ಸಂದರ್ಭದಲ್ಲಿ ಪರಮಾರರ ಸೀಯಕ ಮಾನ್ಯಖೇಟವನ್ನು ಆಕ್ರಮಿಸಿದ ನಂತರ ಇಮ್ಮಡಿ ಕರ್ಕನನ್ನು ಚಾಲುಕ್ಯ ದೊರೆ ಎರಡನೇ ತೈಲಪ ಇವರ ಸಾಮ್ರಾಜ್ಯಕ್ಕೆ ಕೊನೆ ಹಾಡಿ ಕಲ್ಯಾಣಿ ಚಾಲುಕ್ಯರು ಅಸ್ತಿತ್ವಕ್ಕೆ ಬರುವಂತೆ ಮಾಡಿದನು.

ರಾಷ್ಟ್ರಕೂಟರ ಆಡಳಿತ
 * ಮಂತ್ರಿಮಂಡಲದೊಂದಿಗೆ ರಾಜನ ಆಳ್ವಿಕೆ.
* ಮಂತ್ರಿಮಂಡಲವು ರಾಜನ ಸಹಾಯಕಿತ್ತು, ಆದರೆ ಎಷ್ಟು ಜನ ಮಂತ್ರಿಗಳಿದ್ದರೆಂದು ತಿಳಿದಿಲ್ಲ.
 ಅದರಲ್ಲಿ ಕೆಲವರು
* ವಿದೇಶಾಂಗ ಮಂತ್ರಿ - ಮಹಾಸಂಧಿ ವಿಗ್ರಹಿ
* ಕಂದಾಯ ಮಂತ್ರಿ -ಅಮಾತ್ಯ * ಹಣಕಾಸಿನ ಮಂತ್ರಿ - ಕೋಶಾಧ್ಯಕ್ಷ
*ಆಡಳಿತ ಲೆಕ್ಕ ಪತ್ರ - ಕರಣಿಕ ಆಡಳಿತ ಅನುಕೂಲಕ್ಕಾಗಿ ರಾಜ್ಯ
ರಾಷ್ಟ್ರ -  ರಾಷ್ಟ್ರಪತಿ ಅಥವಾ ಯುವರಾಜ 
ವಿಷಯ -ವಿಷಯಪತಿ
 ಭುಕ್ತಿ - ಭೋಗಪತಿ
* ಗ್ರಾಮ-  ಗವುಂಡ
 ಇವರು ಇಲ್ಲಿನ ಆಗು ಹೋಗುಗಳನ್ನು ನೇರವಾಗಿ ನೋಡಿಕೊಳ್ಳುತ್ತಿದ್ದರು.

 ಸಾಮಾಜಿಕ ಪರಿಸ್ಥಿತಿ 
* ಸಾಮಾಜಿಕ ಜೀವನ ತಿಳಿಯಲು ಸುಲೇಮಾನ್, ಅಲ್ ಮಸೂದಿ, ಇಬನ್ ಬತೂತರ ಬರವಣಿಗೆಗಳು ಸಹಾಯಕವಾಗುತ್ತವೆ.
* ಪಿತೃ ಪ್ರಧಾನ ಕುಟುಂಬ ಜಾರಿಯಲ್ಲಿತ್ತು. 
* ಸ್ತ್ರೀಯರಿಗೂ ಸಮಾಜದಲಿ ಗೌರವ ಸ್ಥಾನಮಾನ ಇತ್ತು.
* ಸ್ತ್ರೀಯರು ಅಲಂಕಾರ ಪ್ರಿಯರಾಗಿದ್ದರು.
* ಪತಿಯ ಆಸ್ತಿಯಲ್ಲಿ ಪತ್ನಿಗೆ ಪಾಲು ಇರುವ ಅಂಶವು ಇಲ್ಲಿ ತಿಳಿಯಬಹುದು.
* ಇವರ ಕಾಲದಲ್ಲಿ ಬಲಿದಾನ ಪದ್ದತಿ ರೂಡಿಯಲ್ಲಿತ್ತು.
* ದೇವಾಲಯಗಳು ಸಾಮಾಜಿಕ ಜೀವನದ ಕೇಂದ್ರಗಳಾಗಿದ್ದವು.
 ನಾಯನ್ನಾರರು ಮತ್ತು ಆಳ್ವಾರರಿಂದ ಮೇಲು-ಕೀಳು ಕಡಿಮೆ ಇತ್ತು.

 ಆರ್ಥಿಕ ಜೀವನ 
* ವ್ಯವಸಾಯ ಆರ್ಥಿಕ ಜೀವನದ ಮೂಲಾಧಾರವಾಗಿತ್ತು. 
*ರಾಜ್ಯದ ಆದಾಯ ಭೂ ಕಂದಾಯದಿಂದಲೇ ಹೆಚ್ಚಿತ್ತು.
* ಭೂ ಕಂದಾಯಗಳು
 ಉದ್ರಂಗ, ಉಪರಿಕ, ಭಾಗಾಕಾರ.
* ಸರಕುಗಳ ಸುಂಕ - ಭೂತೋತ್ಪಾಟ್ಟ
* ತೆರಿಗೆಗಳು - ಮನೆ, ಹಾಯ್ಗಡ ವೃತ್ತಿ ತೆರಿಗೆ.

ವೃತ್ತಿ ಸಂಘಗಳು 
* ಬೇರೆ ಬೇರೆ ವೃತ್ತಿಗಳಿಗೆ ಸಂಬಂಧಿಸಿದ ಸಂಘಗಳನ್ನು ನಿರ್ಮಿಸಿಕೊಂಡಿದ್ದರು. ಅದನ್ನು ಶ್ರೇಣಿ ಎಂದು ಕರೆಯಲಾಗುತ್ತದೆ.
* ಅಯ್ಯಾವಳೆ 500 - ಬಲವಾದ ಅಧಿಕಾರಹೊಂದಿತ್ತು, ಉದ್ದಿಮೆ ಹಾಗೂ ವಾಣಿಜ್ಯವನ್ನು ತನ್ನ ಅಧೀನ ಕೊಳಪಡಿಸಿಕೊಂಡಿತ್ತು.
* ಬಳ್ಳಿಗಾವೆ ವಾಣಿಜ್ಯ ಸಂಘ ತಮ್ಮದೇ ಆದ ತುರಾಯಿ ಹೊಂದಿದ ಧ್ವಜಗಳನ್ನು ಹೊಂದಿತ್ತು. 
* ಕೃಷಿಗೆ ಸಂಬಂಧಿಸಿದ ಶ್ರೇಣಿ ಮೇಟಿ ಅಥವಾ ಮೇಳಿ.  ಮೇಟಿ ಎಂದರೆ ನೇಗಿಲು ಎಂದರ್ಥ.

 ವ್ಯಾಪಾರ ವಾಣಿಜ್ಯ 
ರಫ್ತು 
ಹತ್ತಿಯ ನೂಲು, ಬಟ್ಟೆ, ಒರಟದ ಮತ್ತು ನಯವಾದ ಮಸ್ಲಿನ್ ಬಟ್ಟೆ,  ಚರ್ಮ, ನೀಲಿ, ಅಡಕೆ, ತೆಂಗು ಮುಂತಾದವು.

ಆಮದು 
ಖರ್ಜೂರ, ಚಿನ್ನ, ಗುಲಾಮರು, ತಾಮ್ರ, ಸತು, ಲವಂಗ ಮುಂತಾದವು 

*ಗಣಿಗಳು ಮತ್ತು ಕೈಗಾರಿಕೆಗಳು ಇವರ ಕಾಲದಲ್ಲಿ ಅಭಿವೃದ್ಧಿ ಹೊಂದಿದವು. ಬಳ್ಳಾರಿ ಬಿಜಾಪುರ ಕಡಪ ಧಾರವಾಡ ಗೋಲ್ಕೊಂಡ ಮತ್ತಿತರ ಪ್ರದೇಶಗಳಲ್ಲಿ ತಾಮ್ರ ಮತ್ತು ವಜ್ರದ ಗಣಿಗಳಿಂದ ಕೂಡಿದ್ದವು.

ನಾಣ್ಯಗಳು
ದ್ರಮ್ಮ,  ಕವಿಂಜ (ಕಳಂಜು), ಕಾಸು, ಮಂಜಟಿ ಚಿನ್ನದ ನಾಣ್ಯಗಳಾಗಿದ್ದವು.
ವಿಸದಿ ಗದ್ಯಾನಕ ನಾಣ್ಯಗಳು ಇದ್ದವು 
ಟಂಕಸಾಲೆಗಳಿಗೆ ಅಕ್ಕಂಸಾಲೆ ಎನ್ನುತ್ತಿದ್ದರು.

ಧರ್ಮ 
* ವೈದಿಕ ಮತ್ತು ಜೈನ ಧರ್ಮದ ಆರಾಧಕರಾಗಿದ್ದರು.
* ಅಮೋಘವರ್ಷನ ಕಾಲದಲ್ಲಿ ಜೈನ ಧರ್ಮಕ್ಕೆ ರಾಜಶ್ರಯ ಜೊತೆಗೆ ವೈದಿಕ ಧರ್ಮದ ಪಾಲಕನು ಆಗಿದ್ದನು.
* ದೇವಸ್ಥಾನಗಳು ಸಾರ್ವಜನಿಕ ಆರಾಧನಾ ಕೇಂದ್ರಗಳಾಗಿದ್ದವು. *ಡಂಬಳ,ಕಾಂಪಿಲ್ಯಾ, ಕನ್ಹೇರಿಗಳಲ್ಲಿ ಬೌದ್ಧ ಕೇಂದ್ರಗಳಿದ್ದವು.
* ಕರಾವಳಿಯಲ್ಲಿ ಮುಸ್ಲಿಂ ಜನಪ್ರಿಯವಾಗುತ್ತಿತ್ತು.

 ಸಾಹಿತ್ಯ 
* ಈ ಕಾಲದ ಶಾಸನಗಳಿಂದ ಸಾಹಿತ್ಯ ಕ್ಷೇತ್ರ ಬೆಳೆದಿದೆ ಎಂಬುದನ್ನು ತಿಳಿಯಬಹುದು.
* ಕನ್ನಡವು ಉಚ್ಛ್ರಾಯ  ಸ್ಥಿತಿಯಲ್ಲಿ ಬೆಳೆದಿತ್ತು ಎಂಬುದನ್ನು ಗಮನಿಸಬಹುದು.
* ತ್ರಿವಿಕ್ರಮ - ನಳಚಂಪೂ ಇದು ಸಂಸ್ಕೃತ ಕಾವ್ಯ 
* ಹಾಲಾಯುಧ -  ಕವಿರಹಸ್ಯದ ಮೇಲೆ ಮೃತ ಸಂಜೀವಿನಿ ವಿಮರ್ಶಾತ್ಮಕ ಕೃತಿ ರಚಿಸಿದ್ದಾನೆ
*  ಸೋಮದೇವ ಸೂರಿ ಯಶಸ್ ತಿಲಕ ಚಂಪು,
 ನೀತಿ ವಾಕ್ಯ ಅಮೃತವನ್ನು ರಚಿಸಿದ್ದಾನೆ
* ವೀರಸೇನ- ಷಟ್ ಖಂಡಾಗಮ ಇದು ಜೈನರ ಆದಿ ಗ್ರಂಥ ಇದರ ಮೇಲೆ ಧವಲ ಎಂಬ ಟೀಕೆ ಬರೆದನು. 
* ಜಿನಸೇನಾ ಜಯದವಳ ಬರೆದನು.
* ಅಮೋಘವರ್ಷ - ಪ್ರಶ್ನೋತ್ತರ ರತ್ನ ಮಾಲಿಕ 
* ಶಾಕಟಾಯನ -ಅಮೋಘವರ್ಷ ವೃತ್ತಿ ವ್ಯಾಕರಣ ಗ್ರಂಥ.
* ಮಹಾವೀರ ಆಚಾರ್ಯ ಗಣಿತಾರಹಾರ ಸಂಗ್ರಹ ವೈಜ್ಞಾನಿಕ ಗ್ರಂಥವಾಗಿದೆ
* ಪಂಪ - ಆದಿಪುರಾಣ (ಕನ್ನಡದ ಮೊದಲ ಕಾವ್ಯ) ಪಂಪ ಭಾರತ ಅಥವಾ ವಿಕ್ರಮಾರ್ಜುನ ವಿಜಯ 
* ಪೊನ್ನ - ಶಾಂತಿಪುರಾಣ, ಭುವನೈಕರಾಮಾಭ್ಯುದಯ * ಶ್ರೀವಿಜಯ - ಕವಿರಾಜಮಾರ್ಗ 
*ತ್ರಿ ವಿಕ್ರಮ - ಮಾದಲಸಾ ಚಂಪು
* ವಿದ್ಯಾನಂದನ -ಅಷ್ಟಸಾಹಸ್ರೀ, ಮತ್ತು ಬಾಷ್ಯ ಪ್ರಭಾ ಚಂದ್ರ.

ಶಿಕ್ಷಣ 
*ಮಠಗಳು, ಅಗ್ರಹಾರಗಳು ಶೈಕ್ಷಣಿಕ ಕೇಂದ್ರಗಳಾಗಿದ್ದವು. *ಮನಗೋಳಿ, ಬಳ್ಳಿಗಾವೆ, ಸೊರಟೂರು, ಬೇಲೂರು, ಕಾಡಿಯೂರು ಶಿಕ್ಷಣ ಕೇಂದ್ರಗಳಾಗಿದ್ದವು. 

ಕಲೆ ಮತ್ತು ವಾಸ್ತುಶಿಲ್ಪ 
* ಕಲೆಯ ಶ್ರೀಮಂತಿಕೆಯನ್ನು ನಾವು ಇಲ್ಲಿ ಕಾಣಬಹುದು.

 ಕೈಲಾಸನಾಥ ದೇವಾಲಯ
* ಎಲ್ಲೋರದಲ್ಲಿದೆ.
* ಭಾರತದ ಗುಹಾ ವಾಸ್ತುಶಿಲ್ಪದ ಅತ್ಯಂತ ಮುಖ್ಯವಾದ ದೇವಾಲಯವಾಗಿದೆ.
* ಎಲ್ಲೋರದಲ್ಲಿ ಒಟ್ಟು 34 ಗುಹಾಲಯಗಳಿವೆ.
 12 ಬೌದ್ಧ ಧರ್ಮಕ್ಕೆ 
18 ಹಿಂದೂ ಧರ್ಮಕ್ಕೆ 
ನಾಲ್ಕು ಜೈನ ಧರ್ಮಕ್ಕೆ ಸೀಮಿತವಾದವು.
* ಇದು 16ನೇ ಗುಹಾಲಯವಾಗಿದೆ ಒಂದು ದೊಡ್ಡ ಬಂಡೆಯನ್ನು ಕೊರೆದು ಇದನ್ನು ನಿರ್ಮಾಣ ಮಾಡಲಾಗಿದೆ.
* ಒಂದನೇ ಕೃಷ್ಣನ ಕಾಲದಲ್ಲಿ ನಿರ್ಮಾಣ.
* ಇದು ಎರಡು ಆನೆಗಳಿಂದ ಎಳೆಯಲ್ಪಟ್ಟ ರಥದಂತಿರುವುದಾಗಿದೆ‌.
* ಇಲ್ಲಿ ಗರ್ಭಗುಡಿ, ನಂದಿ ಮಂಟಪ, ಮೇಲ್ಚಾವಣಿ ಇದೆ.
* ಮಹಾಮಂಟಪ, ಅಂತರಾಳ, ಸುಖನಾಸಿ, ನಂದಿಮಂಟಪವಿದೆ.
* ಇಲ್ಲಿ ರಾವಣ ಕೈಲಾಸ ಪರ್ವತ ಎತ್ತುವುದು, ಶಿವ ಪಾರ್ವತಿ, ಅಕ್ಕ ಪಕ್ಕದಲ್ಲಿ ದ್ವಾರಪಾಲಕ, ಚಾರಣಧಾರಿಗಳ  ಚಿತ್ರವೂ ಇದೆ.

 ದಶಾವತಾರ ಗುಹೆ
* ಎಲ್ಲೋರದ 15ನೇ ಗುಹೆ 
* ಶಿವ ತಾಂಡವ ಪಾರ್ವತಿ ಪರಹ ವಿಷ್ಣು ಲೀಲೆಗಳಿಗೆ ಸಂಬಂಧಿಸಿದ ಶಿಲ್ಪಕೃತಿಗಳಿವೆ.

 ಎಲಿಫೆಂಟಾ ಗುಹಾಲಯ 
* ಎಲಿಫೆಂಟಾ ದ್ವೀಪದಲ್ಲಿದೆ
*  ಅರ್ಧನಾರೀಶ್ವರ ಮೂರ್ತಿ ಇದೆ.
* ಎಲಿಫೆಂಟಾದ ಏಳು ಗುಹೆಗಳಲ್ಲಿ ಮಧ್ಯದ ಗುಹೆಯಲ್ಲಿ ತ್ರಿಮೂರ್ತಿಯ ಬೃಹದಾಕಾರ ಮೂರ್ತಿ ಇದೆ.
* ಇಲ್ಲಿನ ಶಿವ ,ಸೃಷ್ಟಿ ಸ್ಥಿತಿ ಲಯ ಮೂರನ್ನು ನಿರ್ವಹಿಸುವ ರೂಪದಲ್ಲಿದೆ.
* ಇಲ್ಲೇ ಗಿರಿಜಾ ಕಲ್ಯಾಣ ನಿರೂಪಿಸುವ ಶಿಲ್ಪವೂ ಇದೆ.


* ಪಟ್ಟದ ಕಲ್ಲಿನಲ್ಲಿ ಅಮೋಘವರ್ಷನ ಕಾಲದ  ಬಸದಿ ಇದೆ.
* ಭಾರತದ ಇತಿಹಾಸದಲ್ಲಿ ಈ ಕಾಲವನ್ನು ಕನೋಜ್ ಸಾಮ್ರಾಜ್ಯದ ಕಾಲ ಎಂದು ಕರೆದಿದ್ದಾರೆ, ಜೊತೆಗೆ ಕರ್ನಾಟಕ ಸಾಮ್ರಾಜ್ಯದ ಕಾಲ ಎಂದು ಹೇಳಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು