ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕರ ದಾಳಿಗೆ ತುತ್ತಾಗಿ ಪಾಲಕರನ್ನು ಕಳೆದಿಕೊಂಡ ಅನಾಥ ಮಕ್ಕಳಿಗೆ ಆಟವಾಡಲು ಚನ್ನಪಟ್ಟಣದ ಗೊಂಬೆಗಳನ್ನು ಕಳುಹಿಸಿಕೊಡಲಾಗಿದೆ. ಮಾನವೀಯ ನೆಲೆಯಲ್ಲಿ ಆಟಿಕೆಗಳ ರಫ್ತಿಗೆ ಆಯ್ಕೆಯಾದ ರಾಜ್ಯ ಕರ್ನಾಟಕ. ಇದೊಂದು ಹೆಗ್ಗಳಿಕೆಯೇ ಆಗಿದೆ.
ಚನ್ನಪಟ್ಟಣದ ಬೊಂಬೆಗಳೇ ಏಕೆ?
ಇವು ಕರ್ನಾಟಕದಲ್ಲಿ ಮನೆಮಾತಾಗಿರುವ ಬೊಂಬೆಗಳು. ಇದು ಕರ್ನಾಟಕದಲ್ಲಿನ GI Tag ಹೊಂದಿರುವ ಪದಾರ್ಥ. ಹಾಗೆಯೇ ಇದಕ್ಕೆ ಬಳಸುವ ಬಣ್ಣಗಳು ನೈಸರ್ಗಿಕ ಬಣ್ಣಗಳಿಂದ ತಯಾರಿತವಾಗಿರುವುದರಿಂದ ಮಕ್ಕಳ ಅಥವಾ ಬಳಸುವ ಯಾರಿಗೇ ಆದರೂ ಯಾವುದೇ ತರಹದಲ್ಲಿ ಆರೋಗ್ಯದ ಮೇಲೆ ಪರಿಣಾಮಗಳನ್ನು ಬೀರದೆ ಇರುವುದರಿಂದ ಮತ್ತು ಕಸ್ಟ್ಂ ಕ್ಲಿಯರ್ ಬೇಗ ಆಗುವ ಸಲುವಾಗಿ ಇದನ್ನು ಆಯ್ಕೆ ಮಾಡಲಾಗಿದೆ.
GI tag ಎಂದರೇನು?
GI Tag ಎಂದರೆ ಭೌಗೋಳಿಕ ಸೂಚಕ ಎಂದರ್ಥ. ಹೀಗೆಂದರೆ ಆಯಾ ಭೌಗೋಳಿಕ ಪ್ರದೇಶದಲ್ಲಿ ಮಾತ್ರ ದೊರೆಯುವ ಅಥವಾ ಬೆಳೆಯುವ ಅಥವಾ ತಯಾರಿಸಲಾಗುವ ವಿಶೇಷ ಉತ್ಪನ್ನಗಳು, ಕಲಾಕೃತಿಗಳು, ವಸ್ತುಗಳು, ತಿನಿಸುಗಳು, ಬೆಳೆಗಳು, ಬಟ್ಟೆ-ಬರೆ ಮುಂತಾದವುಗಳಿಗೆ ಭೌಗೋಳಿಕ ಗುರುತಿನ ಆಧಾರದ ಮೇಲೆ ಉತ್ಪಾದಿಸುವ ಕಾರಣದ ಸಲುವಾಗಿ ಈ ಟ್ಯಾಗ್ ನೀಡಲಾಗುತ್ತದೆ. ಇಲ್ಲಿ ನಾವು ಸೂಚಿಸುವ ಯಾವುದೇ ಪದಾರ್ಥದ ಹೆಸರು ತಿಳಿಸಿದಾಗ ಅದರ ಉತ್ಪಾದನೆಯಾದ ಸ್ಥಳದ ಹೆಸರು ಗುರುತಿಸುವಂತಿರುವ ಪದಾರ್ಥಗಳಿಗೆ ಮಾತ್ರ ಇದನ್ನು ನೀಡಲಾಗುತ್ತದೆ. ಇದರಿಂದ ನಮಗೆ ತಿಳಿಯುವುದೇನೆಂದರೆ ಒಂದು ಪದಾರ್ಥದ ತಯಾರಿಜೆಯ ಮೂಲ ಸ್ಥಳ ನಮಗೆ ತಿಳಿದಂತಾಗುತ್ತದೆ.
GI Tag ಬಂದದ್ದು
1994 ರಿಂದ WTOನ ಸದಸ್ಯ ದೇಶಗಳನ್ನು ಖಚಿತಪಡಿಸಿಕೊಳ್ಳಲು TRIPSನ ಅಡಿಯಲ್ಲಿ ಬರುತ್ತದೆ. ಭಾರತದಲ್ಲಿ ಜಿ.ಐ ಟ್ಯಾಗ್ ಸೆಪ್ಟೆಂಬರ್ 15-2003ರಿಂದ ಜಾರಿಗೆ ಬಂದಿತು. ಇದು ಭೌಗೋಳಿಕ ಸೂಚನೆಗಳು(ನೋಂದಣಿ ಮತ್ತು ರಕ್ಷಣೆ) ಕಾಯ್ದೆ - 1999ರಲ್ಲಿ ರಚಿಸಲಾಗಿದೆ. ಇದನ್ನು ಕೈಗಾರಿಕಾ ಪ್ರಚಾರ ಮತ್ತು ಆಂತರಿಕ ವ್ಯಪಾರ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಬರುತ್ತದೆ. ಇದನ್ನು ಭಾರತದಲ್ಲಿ ಮೊದಲ ಬಾರಿಗೆ ಡಾರ್ಜಿಲಿಂಗ್ ಚಹಾಗೆ ನೀಡಲಾಗಿದೆ.
ಭಾರತವು ವಿಶ್ವ ವಾಣಿಜ್ಯ ಒಪ್ಪಂಧಕ್ಕೆ ಭಾರತ ಸಹಿ ಹಾಕಿದ ನಂತರ, ಅದರ ಜೊತೆಗೆ ಭಾರತ ಸರ್ಕಾರ 1991ರಲ್ಲಿ New Economic Policy ತಂದಾಗ ಅದರಲ್ಲಿ LPG ಎಂಬ ಅಂಶವನ್ನು ಪರಿಚಯಿಸಿತು.
L ಎಂದರೆ - ಉದಾರೀಕರಣ (Liberalisation)
P ಎಂದರೆ - ಖಾಸಗೀಕರಣ (Privatisation)
G ಎಂದರೆ - ಜಾಗತೀಕರಣ (Globalisation).
ಇದರಿಂದ ಭಾರತದ ನಿರ್ಬಂಧಿತ ಆರ್ಥಿಕ ವ್ಯವಸ್ಥೆಯು(Closed Economy) ಮುಕ್ತ ಆರ್ಥಿಕ ವ್ಯವಸ್ಥೆಯಾಗಿ ತೆರೆದುಕೊಂಡಾಗ(Open Economy) ಬೇರೆ ದೇಶಗಳ ಮಾರುಕಟ್ಟೆಗಳು ಭಾರತಕ್ಕೆ ಬರಲು ಅವಕಾಶ ಸಿಕ್ಕಿದ್ದರಿಂದ ಅಲ್ಲಿನ ವಸ್ತುಗಳು ಪ್ರವಾಹದಂತೆ ದೇಶದ ಮಾರಯಕಟ್ಟೆಗೆ ಲಗ್ಗೆ ಇಟ್ಟಾಗ ಸ್ಥಳೀಯ ಅಥವಾ ದೇಶೀಯ ವಸ್ತುಗಳ ಪರಿಸ್ಥಿತಿ ಏನು? ಅವುಗಳ ರಕ್ಷಣೆ ಹೇಗೆ? ಎಂಬುದಾಗಿ ಯೋಚಿಸುವಾಗ GIನ ಪ್ರಾಮುಖ್ಯತೆ ತಿಳಿದು ತರಲಾಯ್ತು. ಇದರಿಂದ 2003ರಿಂದ ದೇಶೀಯ ವಸ್ತುಗಳ ನೋಂದಣಿ ಆರಂಭವಾಯ್ತು.
ಇದರಿಂದಾಗಿ ದೇಶೀಯ ಉತ್ಪನ್ನಗಳಿಗೂ ಮಾರುಕಟ್ಟೆ ಉತ್ಪಾದನೆಗೆ ಸರ್ಕಾರದ ಬೆಂಬಲವೂ ಸಿಗುವುದರೊಂದಿಗೆ ಮಾರುಕಟ್ಟೆ ವಿಸ್ತರಣೆಯೂ ಆಗುತ್ತದೆ. ಆದರೆ GI tag ಪಡೆಯುವಾಗ ವಹಿಸುವ ಮುತುವರ್ಜಿಯನ್ನು ಪಡೆದ ನಂತರ ಅದೇ ಮುತುವರ್ಜಿಯನ್ನು ವಹಿಸುವುದೇ ಇಲ್ಲ. ಇದರಿಂದ ಬೇರೆ ವಸ್ತುಗಳು ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುತ್ತದೆ. ತದನಂತರದಲ್ಲಿ ಜಿ.ಐ ಬಗೆಗಿನ ಅರಿವನ್ನು ಉತ್ಪಾದಕರಿಗೆ ಸರ್ಕಾರ ಪರಿಣಾಮಕಾರಿಯಾಗಿ ತಲುಪಿಸಬೇಕು. ಇದು ಕೂಡ ಆಗುತ್ತಿಲ್ಲ. ಪ್ರಚಾಎದ ವೇದಿಕೆಗಳು ಲಭ್ಯವಾಗುತ್ತಿಲ್ಲ. ಇದರೊಂದಿಗೆ ಜಿ.ಐ ಟ್ಯಾಗ್ ತಂದಿರುವ ಉದ್ದೇಶ "ಪಾರಂಪರಿಕ ವಸ್ತುಗಳವರಕ್ಷಣೆ ಮತ್ತು ಆದಾಯ ದ್ವಿಗುಣಗೊಳಿಸುವಿಕೆ" ಇದು ಸಾಧ್ಯವಾಗುತ್ತಿಲ್ಲ.
GI Tag ಮಹತ್ವ
ಜಿ.ಐ ಟ್ಯಾಗ್ ಪಡೆಯುವುದರಿಂದ ಉತ್ಪನ್ನಗಳಿಗೆ ಕಾನೂನಿನ ರಕ್ಷಣೆ ದೊರಕುತ್ತದೆ. ಇದರಿಂದ ನಕಲು, ಪ್ರತಿ ಉತ್ಪಾದನೆಯೂ ಮಾಡುವಂತಿಲ್ಲ, ರೈತರಿಗೆ ವಿಸ್ತರಿತ ಮಾರುಕಟ್ಟೆ ಲಭ್ಯವಾಗುವುದರಿಂದ ಅವರ ಆದಾಯದ ಗಳಿಕೆ ಹೆಚ್ಚುತ್ತದೆ. ಹಾಗೆಯೇ ಪ್ರವಾಸೋದ್ಯಮದ ಅಭಿವೃದ್ಧಿಯು ಸಾಧ್ಯವಾಗುತ್ತದೆ. ಉದ್ಯೋಗ ನಿರ್ಮಾಣ, ಜೀವಿ ಪರಿಸರ ಸಂರಕ್ಷಣೆ ಸಾಧ್ಯವಾಗುತ್ತದೆ. ಮುಂತಾದ ಕೆಲ ಅಂಶಗಳು ಇವೆ. ಇದರಿಂದಾಗಿ ಇದರ ಬಗೆಗಿನ ಅರಿವನ್ನು ಹೆಚ್ಚಿಸುವ ಕೊರತೆಯೇ ನಮ್ಮಲ್ಲಿ ಹೆಚ್ಚು ಕಾಣುತ್ತದೆ. ಅದರೊಂದಿಗೆ ಗ್ರಾಮೀಣಾಭಿವೃದ್ಧಿಯಲ್ಲಿ ಮಹತ್ವದ ಪಾತ್ರವನ್ನು GI ವಹಿಸುತ್ತದೆ.
ಭಾರತದಲ್ಲಿ ಇದುವರೆಗೂ 400 ಕ್ಕಿಂತ ಹೆಚ್ಚಿನ GI Tag ಹೊಂದಿರುವ ವಸ್ತು ಅಥವಾ ಪದಾರ್ಥಗಳಿವೆ. ಇದರಲ್ಲಿ ಕರ್ನಾಟಕವು ದೇಶದಲ್ಲೇ ಅತಿ ಹೆಚ್ಚಿನ GI ಗಳನ್ನು ಹೊಂದಿರುವ ರಾಜ್ಯಗಳಲ್ಲಿ ಪ್ರಥಮ ಸ್ಥಾನದಲ್ಲಿದೆ.
.jpg)

.jpg)


.jpg)

0 ಕಾಮೆಂಟ್‌ಗಳು