ಕರ್ನಾಟಕ ಇತಿಹಾಸ. ಭಾರತ ದೇಶದ 28 ರಾಜ್ಯಗಳಲ್ಲಿ ಕರ್ನಾಟಕವು ಒಂದು ವಿಸ್ತೀರ್ಣದಲ್ಲಿ 8ನೇ ದೊಡ್ಡ ರಾಜ್ಯ ಮತ್ತು ಜನಸಂಖ್ಯೆಯ ಗಾತ್ರದಲ್ಲಿ 9ನೇ ದೊಡ್ಡ ರಾಜ್ಯವಾಗಿ ಭಾರತದಲ್ಲಿ ಗುರುತಿಸಿಕೊಂಡಿದೆ. 1.91 ಲಕ್ಷ ಚದರ ವಿಸ್ತೀರ್ಣ ಹೊಂದಿರುವ ಕರ್ನಾಟಕ ರಾಜ್ಯವು ಭಾರತದಲ್ಲಿನ ದಕ್ಷಿಣ ಭಾರತದ ರಾಜ್ಯವಾಗಿ ನೈರುತ್ಯ ದಿಕ್ಕಿನಲ್ಲಿ ಗುರುತಿಸಿಕೊಂಡಿರುವ ಕರ್ನಾಟಕ ರಾಜ್ಯದ ಪ್ರಮಾಣಿತ ಭಾಷೆ ಮತ್ತು ರಾಜ್ಯ ಭಾಷೆಯಾಗಿ ಕನ್ನಡ ಗುರುತಿಸಿಕೊಂಡಿದೆ.
ಸ್ವಾತಂತ್ರ ಪೂರ್ವದಲ್ಲಿ ಹರಿದು ಹಂಚಿ ಹೋಗಿದ್ದ ಕರ್ನಾಟಕವು, ಸ್ವಾತಂತ್ರೋತ್ತರ ಭಾರತದಲ್ಲಿ 562 ಸಂಸ್ಥಾನಗಳನ್ನು ಕೂಡಿಸಿ ಹೇಗೆ ಭಾರತವಾಯಿತು ಹಾಗೆ ಕರ್ನಾಟಕವು ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಕೇರಳದಿಂದ ತನ್ನ ಭಾಗಗಳಿಗೆ ಹೋರಾಡಿ ಒಂದೇ ಭಾಷೆಯಾಡುವ ಜನರು ಎಲ್ಲರೂ ಒಂದೆಡೆ ಇರಬೇಕೆನ್ನುವಲ್ಲಿ ಏಕೀಕರಣ ಶುರುವಾಗಿ ವಿಶಾಲ ಮೈಸೂರು 1956 ನವಂಬರ್ 1ರಂದು ಸೃಷ್ಟಿಯಾಗಿ ನಂತರ 1973 ನವೆಂಬರ್ 1ರಂದು ವಿಶಾಲ ಮೈಸೂರಿನ ಅಡಿಯಲ್ಲಿ ಬರುವ ಎಲ್ಲಾ ಪ್ರದೇಶಗಳಿಗೂ ವಿಶಾಲ ಮೈಸೂರು ಸಮಗ್ರವಾಗಿ ಪ್ರತಿನಿಧಿಸುವುದಿಲ್ಲ ಎಂಬುದರ ಹಿನ್ನೆಲೆಯಲ್ಲಿ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು.
ಇಂತಹ ಕರ್ನಾಟಕ ಎಂಬ ಹೆಸರು ಪ್ರದೇಶ ಸೂಚಕವಾಗಿ ಪ್ರತಿನಿಧಿಸುತ್ತದೆ ಹಾಗಾದರೆ ಇದರ ಇತಿಹಾಸ ಅಥವಾ ಅದರ ನಿಷ್ಪತ್ತಿ ಹೇಗೆ ಎಂಬುದನ್ನು ನೋಡಬೇಕು ಕರ್ನಾಟಕ ಎಂಬ ಪದವು ಕ್ರಿಸ್ತಪೂರ್ವ ನಾಲ್ಕನೇ ಶತಮಾನದಲ್ಲಿ ಬರುವ ಪಾಣಿನಿಯ ಸಂಸ್ಕೃತದ ವ್ಯಾಕರಣದಲ್ಲಿ ಕರ್ನಾಟಕ ಎಂದು ಗುರುತಿಸಲಾಗಿ.
ತದನಂತರ ಮಹಾಭಾರತದ ಸಭಾಪರ್ವ ಮತ್ತು ಭೀಷ್ಮ ಪರ್ವದಲ್ಲಿ ನಿರ್ದಿಷ್ಟವಾಗಿ ಸ್ಥಳ ಸೂಚಕವಾಗಿ ಕಂಡುಬರುತ್ತದೆ ಆ ಸೂತ್ರ ಹೀಗಿದೆ.
- ಇದಾದ ನಂತರ ಸಂಸ್ಕೃತ ಪುರಾಣಗಳಾದ ಮಾರ್ಕಂಡೇಯ ಪುರಾಣ ಭಾಗವತ ಮತ್ತು ವರಹ ಮಿಹಿರ ಬೃಹತ್ ಸಂಹಿತದಲ್ಲೂ ಕರ್ನಾಟಕ ಹೆಸರು ಹೆಚ್ಚು ಬಾರಿ ಉಲ್ಲೇಖವಾಗಿರುವುದನ್ನು ಕಾಣಬಹುದು.
- ತಮಿಳು ಕೃತಿಗಳಾದ ತೊಳ್ಕಾಪಿಯಂ, ಶಿಲಪ್ಪಧಿಗಾರಂ, ಕರುನಾಡು ಅಥವಾ ಕರುನಾಟರ್ ಎಂದು ಗುರುತಿಸಿದೆ.
- ಚೇರನ್ ಶೇನ್ ಗುಟ್ಟವನ್ ನೀಲಗಿರಿಯಲ್ಲಿ ಕರುನಾಡರ ನಾಟಕ ನೋಡಿದೆ ಎಂದು ಹೇಳಿದ್ದಾನೆ.
- ಕ್ರಿಸ್ತಶಕ 450 ಕದಂಬ ವಿಷ್ಣುವರ್ಧನನ ಬೀರೂರು ತಾಮ್ರಪಟಗಳಲ್ಲಿ ಆತನು ಸಮಗ್ರ ಕರ್ನಾಟ ದೇಶ ಭೂವರ್ಗ ಭರ್ತಾರನಾಗಿದ್ದ ಎಂದು ಹೋಗಳಿವೆ ಮತ್ತು ಇದೇ ಮೊದಲ ಬಾರಿಗೆ ಕರ್ನಾಟ ಎಂಬ ಪದವು ಶಾಸನಗಳಲ್ಲಿ ದೊರೆತಂತಾಗಿದೆ.
- ಬಾದಾಮಿ ಚಾಲುಕ್ಯರ ಸೇನೆಯನ್ನು ಕರ್ನಾಟಕ ಬಲ ಎಂದು ಉಲ್ಲೇಖಿಸಲಾಗಿದೆ
- ಒಂದು ಕಣ್ ಮತ್ತು ನಾಟ್ ಎಂಬ ಎರಡು ಜನಾಂಗಗಳಿಂದ ಕರ್ನಾಟಕ ಬಂದಿದೆ.
- ಕಣ್ ಅಥವಾ ಕಳ್ ಎಂಬ ಒಂದು ಜನಾಂಗ ವಾಸಿಸುತ್ತಿತ್ತು ಅದರಿಂದ ಕಣ್ ನಾಡು ಆಯಿತೆಂಬುದು ಇನ್ನೊಂದು ವಾದ.
- ಕರ್ಣೇ + ಅಟ ಯತಿ ಎಂದರೆ ಕಿವಿಗೆ ಹೊಡೆಯುವವನು ಅಥವಾ ಖ್ಯಾತವಾದ ನಾಡು ಎಂಬುದರಿಂದ ಕರ್ನಾಟ ಎಂದಾಯಿತು.
- ಕಮ್ + ನಾಡು ಕಮ್ಮಿತ್ತು ನಾಡು ಸುವಾಸನೆಯ ಪ್ರದೇಶ ಎಂಬುದರಿಂದ ಬಂದಿತು.
- ಕರಿ + ಕಪ್ಪು ಮಣ್ಣಿನ ನೆಲ ಎಂಬುದರಿಂದ ಕರ್ನಾಡು ಮುಂದ ಕರ್ನಾಟಕವಾಯಿತೆಂದು ಹೇಳಬಹುದು.
0 ಕಾಮೆಂಟ್‌ಗಳು