ವಿಶ್ವದಲ್ಲಿ ಮಾನವ ನಿರ್ಮಿತ ಅಥವಾ ನೈಸರ್ಗಿಕವಾಗಿ ನಿರ್ಮಾಣಗೊಂಡ ವಿಸ್ಮಯಗಳಲ್ಲಿ 7ವಿಶ್ವದ ಅದ್ಭುತಗಳನ್ನು ಗುರುತಿಸಲಾಗಿದೆ. ಈಗ ಮತ್ತೊಂದು ಸೇರ್ಪಡೆಯಾಗಿ 8 ವಿಶ್ವದ ಅದ್ಭುತಗಳಾಗಿವೆ. ವಿಷ್ಣು ದೇವಾಲಯ - ಕಾಂಬೋಡಿಯ.
ಅವು
Angkor Watವಿಷ್ಣು ದೇವಾಲಯ ಜಗತ್ತಿನ ಅತಿ ದೊಡ್ಡ ದೇವಾಲಯ ಮತ್ತು ಹಿಂದೂ ದೇವಾಲಯ, ಗಿನ್ನಿಸ್ ಓಲ್ಡ್ ರೆಕಾರ್ಡ್ ಕೂಡ ಇದರ ಹೆಸರಿನಲ್ಲಿದೆ. ಇದು ಸುಮಾರು 500 ಎಕರೆಯ ವಿಸ್ತೀರ್ಣ ಪ್ರದೇಶದಲ್ಲಿ ತನ್ನ ದೇವಾಲಯ ನೆಲೆಸುವಂತೆ ಸೂರ್ಯವರ್ಮನ್ II 12ನೇ ಶತಮಾನದಲ್ಲಿ ಕಾಂಬೋಡಿಯಾದ ಅಂಕ್ಗರ್ ನಲ್ಲಿ ನಿರ್ಮಿಸಿದ್ದಾನೆ. ಈ ದೇವಾಲಯದ ವಾಸ್ತು ಶಿಲ್ಪ ದಕ್ಷಿಣ ಭಾರತೀಯ ವಾಸ್ತು ಶಿಲ್ಪದಂತೆ ನಿರ್ಮಾಣ. ನಂತರದಲ್ಲಿ ಬೌದ್ಧ ದೇವಾಲಯವಾಗಿ ಪರಿವರ್ತನೆ ಹೊಂದಿ ಈಗ ಹಿಂದೂ-ಬೌದ್ಧ ದೇವಾಲಯ ಎಂದು ಕರೆಯಲಾಗುತ್ತದೆ.
ಕಮೇರ್ ರಾಜ್ಯ ವಂಶದ ಸೂರ್ಯವರ್ಮನ್ 2 ರಾಜ ನೂತನ ರಾಜಧಾನಿ ಯಶೋದಾಪುರದಲ್ಲಿ ರಚಿಸಲು ಆದೇಶಿಸಿದ. ಇದರಿಂದ ಇಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯದಲ್ಲಿ ಎರಡು ಮೂಲಭೂತ ಯೋಜನೆಗಳ ಮೇಲೆ ದೇವಾಲಯ ನಿರ್ಮಾಣಗೊಂಡಿದೆ.
1. ದೇವಾಲಯ ಪರ್ವತ
2. ಗ್ಯಾಲರಿ ದೇವಾಲಯ. ಇದರ ಹಳೆಯ ಹೆಸರನ್ನು ಅಂಕ್ಗರ್ 'ಟೆಂಪಲ್ ಸಿಟಿ' ಅಂದರೆ 'ರಾಜಧಾನಿ ನಗರ' ಎಂದು ದೇವಾಲಯದ ಮೂಲ ಹೆಸರು ವ್ರಹ ವಿಷ್ಣು ಲೋಕ ಅಥವಾ ಪರಮ ವಿಷ್ಣು ಲೋಕ ಎಂದರ 'ವಿಷ್ಣುವಿನ ಪವಿತ್ರ ವಾಸ ಸ್ಥಾನ' ಎಂದು ಕರೆಯಲಾಗಿದೆ.
ಇಲ್ಲಿವರೆಗೂ ಹಿಂದು ದೇವಾಲಯವಾಗಿದ್ದ ದೇವಾಲಯ ಇವನ ಹೆಂಡತಿ ಇಂದ್ರತೆವಿಯು ಬೌದ್ಧ ಧರ್ಮದ ಅನುಯಾಯಿಯಾಗಿದ್ದು, ಅವನ ಮೇಲೆ ಪ್ರಭಾವಿಸಿದ್ದರಿಂದ ನಂತರ ದೇವಾಲಯ ಬೌದ್ಧ ದೇವಾಲಯವಾಗಿ ಪರಿವರ್ತನೆಗೊಳ್ಳುತ್ತಾ ಬಂದಿತು. ತದನಂತರ ಈ ದೇವಾಲಯ ಅವಗಣನೆಗೆ ಒಳಗಾಯಿತು. ಈ ಮಧ್ಯದಲ್ಲಿ 1586 ರಲ್ಲಿ ಇಲ್ಲಿಗೆ ಭೇಟಿ ನೀಡಿದ ಆಂಟೋನಿಯೋ ಡ ಮಾಡಲೇನಾ " ಪೋರ್ಚುಗೀಸ್ ಪ್ರವಾಸಿ ದೇವಾಲಯದ ಬಗ್ಗೆ ಇದೊಂದು ಅದ್ಭುತವಾದ ನಿರ್ಮಾಣ ಇದನ್ನು ಲೇಖನಿ ಅಥವಾ ಪೆನ್ನಿನ ಮೂಲಕ ವರ್ಣಿಸಲು ಸಾಧ್ಯವಿಲ್ಲ ಇದಕ್ಕೆ ಹೋಲಿಸುವ ಮತ್ತೊಂದು ಕಟ್ಟಡ ನಿರ್ಮಾಣ ಪ್ರಪಂಚದಲ್ಲಿಲ್ಲ ಇದರೊಂದಿಗೆ ಗೋಪುರ ಮತ್ತು ಅಲಂಕಾರಗಳನ್ನು ಹೊಂದಿದ್ದು ಮಾನವ ಪ್ರತಿಭೆ ಗ್ರಹಿಸಬಹುದಾದ ಎಲ್ಲಾ ಪರಷ್ಕಾರಗಳನ್ನು ಹೊಂದಿದೆ"ಎಂದಿದ್ದಾನೆ.
ನಂತರದಲ್ಲಿ ಆಧುನಿಕ ಕಾಲದಲ್ಲಿ ಇದರ ಜೀರ್ಣೋದ್ಧಾರ ಹೆಚ್ಚಾಗಿ ಇದನ್ನು National Pride ಎಂದು ಕರೆಸಿಕೊಂಡು, ತನ್ನ ದೇಶದ ಧ್ವಜದಲ್ಲೂ ಕೆಲವು ವರ್ಷಗಳು ಸ್ಥಾನ ಅಲಂಕರಿಸಿತ್ತು. ಹಿಂದೂ ಪುರಾಣಗಳ ಪ್ರಕಾರ ದೇವರುಗಳ ಮನೆ ಎಂದು ಹೇಳುವ ಮೂಲಕ ಈ ದೇವಾಲಯ ಮೌಂಟ್ ಮೇರುವನ್ನು ಪ್ರತಿನಿಧಿಸುತ್ತದೆ. ಇದರ quincunx ಗೋಪುರವು 5 ಪರ್ವತಗಳನ್ನು ಸಂಕೇತಿಸುತ್ತದೆ. ಅದರ ಗೋಡೆ ಮತ್ತು ಕಂದಕಗಳು, ಅದರ ಸುತ್ತುವರಿದಿರುವ ಪರ್ವತಗಳು ಮತ್ತು ಸಾಗರವನ್ನು ಸಂಕೇತಿಸುತ್ತದೆ. ಇದರ ನಿರ್ಮಾಣಕ್ಕೆ ಮರಳುಗಲ್ಲನ್ನು(Sand stone) ಬಳಸಲಾಗಿದೆ. ದೇವಾಲಯದ ಕೆತ್ತನೆಗಳ ಮೇಲೆ ಹಿಂದೂ ಧರ್ಮದ ರಾಮಾಯಣ, ಮಹಾಭಾರತದ ಚಿತ್ರಗಳನ್ನು ಕೆತ್ತಲಾಗಿದೆ. ಅಲಂಕಾರಗಳಲ್ಲಿ ಅಪ್ಸರೆ ದೇವತೆಗಳ ಚಿತ್ರಗಳನ್ನು ಕಾಣಬಹುದು.
ಈ ದೇವಾಲಯ ಪ್ರಮುಖವಾಗಿ ಸೂರ್ಯನ ಉದಯವನ್ನು ನೋಡಲು ಆ ಗೋಪುರಗಳ ಮೂಲಕ ಸುಂದರವಾಗಿ ಪ್ರತಿಬಿಂಬಿತವಾಗುತ್ತೆ. ಹಾಗೆಯೇ ದೇವಾಲಯದ ಸುತ್ತಲೂ ಸುಮಾರು 700 ಅಡಿ ಕಂದಕವಿದ್ದು ಅದನ್ನು ದಾಟಲು ಪಶ್ಚಿಮದಲ್ಲಿ ಸೇತುವೆ ನಿರ್ಮಾಣ ಮಾಡಲಾಗಿದೆ. ಈ ದೇವಾಲಯದ ಮತ್ತೊಂದು ವಿಶೇಷತೆ ಎಂದರೆ ಬ್ರಹ್ಮ, ವಿಷ್ಣು, ಮಹೇಶ್ವರ ಒಟ್ಟಿಗೆ ಇರುವ ದೇವಾಲಯವಾಗಿದೆ. ಈ ದೇವಾಲಯವನ್ನು ಮೆಕಾಂಗ್ ನದಿಯ ದಡದಲ್ಲಿ ನಿರ್ಮಿಸಲಾಗಿದೆ.
ಆಂಕರ್ ವಾಟ್ ವಿಷ್ಣು ದೇವಾಲಯವು 1992ರಲ್ಲಿ ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿ ಗುರುತಿಸಿಕೊಂಡಿದೆ. ಹಾಗೆ ಈ ದೇವಾಲಯದ ನವೀಕರಣವನ್ನು ಭಾರತವು ಮಾಡುತ್ತಿದೆ. ಇದರ ಮೂಲಕ ಇನ್ನು ಹಲವು ಪೀಳಿಗೆಗಳವರೆಗೂ ಉಳಿದು ಬರುತ್ತದೆ ಮತ್ತೊಂದು ಮುಖ್ಯವಾದ ವಿಷಯವೇನೆಂದರೆ, "ಇಟಲಿಯ ಪೊಂಪಿ ಎಂಬ ಸ್ಥಳವನ್ನು ಸೋಲಿಸಿ ಜಗತ್ತಿನ ಅದ್ಭುತಗಳ ಪಟ್ಟಿಗೆ ಈ ದೇವಾಲಯ ಸೇರಿದೆ". ಇದು ಈಗಲೂ ಧಾರ್ಮಿಕ ಕೇಂದ್ರವಾಗಿರುವುದರಿಂದ ಹಿಂದುಗಳು ಬೌದ್ಧ ದಿಕ್ಕುಗಳು ಇಲ್ಲಿಗೆ ಭೇಟಿ ನೀಡಿ ತಮ್ಮ ಭಕ್ತಿಯನ್ನು ಅರ್ಪಿಸುತ್ತಿದ್ದಾರೆ.
.jpg)




.jpg)
.jpg)
.jpg)
.jpg)

0 ಕಾಮೆಂಟ್‌ಗಳು