Ticker

6/recent/ticker-posts

ಕರ್ನಾಟಕದ ಜಲಪಾತಗಳು # Falls in Karnataka - Part - 1

        ಕರ್ನಾಟಕ ರಾಜ್ಯವು ಯುನೆಸ್ಕೋ ಪಟ್ಟಿಗೆ ಸೇರಿದ ಪಾರಂಪರಿಕ ತಾಣಗಳು, ಗಿರಿಧಾಮಗಳು, ರಾಷ್ಟ್ರೀಯ ಉದ್ಯಾನವನಗಳು, ಅಭಯಾರಣ್ಯಗಳನ್ನು ಒಳಗೊಂಡಿರುವಂತೆ ವಿವಿಧವಾದ ಜಲಪಾತಗಳನ್ನು ಒಳಗೊಂಡಿದೆ. ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಇಲಾಖೆಯು "ಒಂದು ರಾಜ್ಯ ಹಲವು ಜಗತ್ತುಗಳು" ಎಂಬ ಅಡಿ ಬರಹವನ್ನಿಟ್ಟುಕೊಂಡಿರಯವಂತೆ ಕರ್ನಾಟಕದ ಪ್ರವಾಸ ಮಾಡಿದಾಗ ಇದರ ಅನುಭವವಾಗಿ ಇದು ನಿಜವೆನಿಸುತ್ತದೆ. ಅಂತಹ ಒಂದು ಜಗತ್ತು ಯಾವುದೆಂದರೆ ಜಲಪಾತಗಳು.

ಜಲಪಾತಗಳು 
        ಇವು ನದಿಯ ಆರಂಭದ ಹಂತ ಅಥವಾ ಬಾಲ್ಯಾವಸ್ಥೆಯಲ್ಲಿ ಸೃಷ್ಟಿ ಮಾಡುವ ಪ್ರಕೃತಿಯ ಸೊಬಗಾಗಿದೆ ನದಿಗಳು ಹರಿಯುವ ದಿಕ್ಕಿನಲ್ಲಿ ಆಳವು ಕಡಿದಾಗಿರುವ ಪ್ರದೇಶಗಳಲ್ಲಿ ನೀರು ಹರಿದು ಕೆಳಗೆ ಬೀಳುವುದನ್ನು ಜಲಪಾತಗಳೆಂದು ಕರೆಯುತ್ತಾರೆ.

ಕರ್ನಾಟಕದಲ್ಲಿರುವ ಪ್ರಮುಖ ಜಲಪಾತಗಳು
ಜೋಗ ಜಲಪಾತ
        "ಜೋಗದ ಸಿರಿ ಬೆಳಕಿನಲ್ಲಿ........  "ಸಾಯೋಕೋ ಮೊದಲು ಒಮ್ಮೆ ನೋಡು ಜೋಗ ಗುಂಡಿ" ಎಂಬ ಸಾಲುಗಳು ಜೋಗದ ಬಗೆಗೆ ನೆನಪಿಸುತ್ತವೆ. ಭಾರತದ ನಯಾಗರ ಜಲಪಾತ ಎಂದೇ ಕರೆಯುವ ಜೋಗ ಜಲಪಾತ. ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಗಡಿಯಲ್ಲಿ ಬರುವ ಜಲಪಾತವಾಗಿದೆ. ಸ್ಥಳೀಯವಾಗಿ ಗೇರ್ಸೊಪ್ಪ ಜಲಪಾತ ಎಂದು ಕರೆಯಲಾಗುತ್ತಿದೆ. ಈ ಜಲಪಾತವನ್ನು ಸೃಷ್ಟಿಸಿರುವ ನದಿ ಶರಾವತಿ. ಜೋಗವು 253 ಮೀಟರ್ ಎತ್ತರದಿಂದ ನೀರು ಧುಮ್ಮಿಕ್ಕುವ ಮೂಲಕ ರಾಜ, ರಾಣಿ, ರೋರರ್, ರಾಕೆಟ್ ಎಂಬ ನಾಲ್ಕು ಕಿರು ಜಲಪಾತಗಳಾಗಿ ದುಮಕುತ್ತವೆ. ಪ್ರಮುಖವಾಗಿ ಮಳೆಯಾಶ್ರಿತವಾದ ಜಲಪಾತವಾಗಿರುವುದರಿಂದ ಮಳೆಗಾಲದಲ್ಲಿ ಮೈದುಂಬಿ ಹರಿಯುವ ಮೂಲಕ ಅತಿ ಹೆಚ್ಚಿನ ಪ್ರವಾಸಿಗರನ್ನು ಮಳೆಗಾಲದಲ್ಲಿ ತನ್ನತ್ತ ಕರೆಸಿಕೊಳ್ಳುತ್ತದೆ. 
ಆಲ್ ಪರ್ವತದಲ್ಲಿರುವ ಸೆರೊಸಾಲಿ, ಯವಾನ್ಸನ್, ಹಾರ್ವೆ, ಜೋಗಕ್ಕಿಂತ ಎತ್ತರವಾಗಿದ್ದರು, ನೀರಿನ ಲಭ್ಯತೆ ಕಡಿಮೆ. ನಯಾಗರ ಎತ್ತರವಾಗಿಲ್ಲದಿದ್ದರೂ ನೀರಿನ ಲಭ್ಯತೆ ಹೆಚ್ಚಿದೆ ಆದರೆ ನಮ್ಮ ಜೋಗಕ್ಕೆ ಇಲ್ಲ. ಕರ್ನಾಟಕವು ತನ್ನ ಜಲ ವಿದ್ಯುತ್ ಉತ್ಪಾದನೆಗೆ ಪ್ರಮುಖ ಮೂಲವನ್ನಾಗಿ ಜೋಗವನ್ನೇ ನಂಬಿದೆ. ಇಲ್ಲಿ ಮಹಾತ್ಮ ಗಾಂಧಿ ಜಲವಿದ್ಯುತ್ ಯೋಜನೆ ಇದರ ಮೇಲೆ ಅವಲಂಬಿತವಾಗಿದೆ.

Click on the Video Arrow caption
ಉಂಚಳ್ಳಿ ಜಲಪಾತ
        ಇದನ್ನು ಲುಷಿಂಗ್ಟನ್ ಜಲಪಾತವೆಂದೆ ಕರೆಯಲಾಗುತ್ತೆ. ಇದು ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ತಾಲೂಕಿನಲ್ಲಿ ಬರುವ ಒಂದು ಜಲಪಾತವಾಗಿದೆ. ಇದು ಅಘನಾಶಿನಿ ನದಿಯಿಂದ ಸೃಷ್ಟಿಯಾಗಿದೆ. ಈ ಜಲಪಾತವನ್ನು ಬೆಳಕಿನಲ್ಲೂ, ರಾತ್ರಿಯ ಸಮಯದಲ್ಲೂ ನೋಡಲು ಸಾಧ್ಯ. ಹಾಗೆಯೇ ಈ ಜಲಪಾತದ ಬಳಿ ಹುಣ್ಣಿಮೆ ರಾತ್ರಿಯ ಸಮಯದಲ್ಲೂ ಕಾಮನಬಿಲ್ಲನ್ನು ಕಾಣಬಹುದು. ರಭಸದಿಂದ ಯಾವಾಗಲೂ ಧುಮುಕುವದರಿಂದ ಕೆಪ್ಪ ಜೋಗ ಎಂತಲೂ ಕರೆಯುತ್ತಾರೆ.


 
Click on the video Arrow caption
 ಹೆಬ್ಬೆ ಜಲಪಾತ 

        ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಕೆಮ್ಮಣ್ಣು ಗುಂಡಿಯ ಬಳಿ ಮತ್ತು ಭದ್ರಾ ಹುಲಿ ಮೀಸಲು ಪ್ರದೇಶದೊಳಗೆ ಪ್ರಕೃತಿ ವೈಭವದೊಂದಿಗೆ 550 ಅಡಿಗಿಂತ ಹೆಚ್ಚಿನ ಎತ್ತರದಿಂದ ಭದ್ರ ನದಿಯು ಹರಿದು ಎರಡು ಕಲುಗಳಾಗಿ ಹರಿದು ಬಂದು ಬೀಳುವುದರಿಂದ ಇಲ್ಲಿ ದೊಡ್ಡ ಹೆಬ್ಬೆ ಮತ್ತು ಚಿಕ್ಕ ಹೆಬ್ಬೆ ಎಂದು ಇಲ್ಲಿ ಕರೆಯಲಾಗುತ್ತದೆ. ನೋಡಲು ಅದ್ಭುತವಾದ ಸೊಗಸಾದ ಪೇಂಟಿಂಗ್ ಮಾಡಿರುವಂತೆ ಈ ಜಲಪಾತವು ಕಾಣುತ್ತದೆ. ಚಿಕ್ಕಮಗಳೂರಿನಲ್ಲಿ ಅತ್ಯಂತ ಜನಪ್ರಿಯವಾದ ಪ್ರೇಕ್ಷಣೀಯ ಸ್ಥಳವಾಗಿದೆ ಇದು ಕಾಫಿ ಎಸ್ಟೇಟ್ ಗಳ ಮಧ್ಯೆ ಹಾಗೂ ಕಾಡಿನ ಮಧ್ಯದಿಂದ ಹರಿದು ಬರುವುದರಿಂದ ಗಿಡಮೂಲಿಕೆಗಳು ಇದರಲ್ಲಿ ಸೇರಿವೆ ಎಂದು ಜನಸಾಮಾನ್ಯರು ತಿಳಿದು ಇದರಲ್ಲಿ ಸ್ನಾನವನ್ನು ಮಾಡುತ್ತಾರೆ. ಇದರಿಂದ ರೋಗದ ನಿವಾರಣೆಯಾಗುತ್ತದೆ ಎಂದು ನಂಬಿದ್ದಾರೆ.

ಅಬ್ಬೆ ಫಾಲ್ಸ್ 


        ಕರ್ನಾಟಕದ ಕಾಶ್ಮೀರ ಎಂದೇ ಕರೆಯುವ ಕೊಡಗು ಜಿಲ್ಲೆಯಲ್ಲಿ ಅಬ್ಬೆ ಫಾಲ್ಸ್ ಬರುತ್ತದೆ. ಇದನ್ನು ಜೆಸಿ ಫಾಲ್ಸ್ ಎಂದು ಕರೆಯಲಾಗುತ್ತದೆ. ಕೊಡಗಿನಲ್ಲಿ ನೋಡುವ ಪ್ರೇಕ್ಷಣೀಯ ಸ್ಥಳಗಳಂತೆ ಇದು ಕೂಡ ಹೆಚ್ಚು ಪ್ರಸಿದ್ಧವಾದ ಪ್ರೇಕ್ಷಣೀಯ ಸ್ಥಳ ಎಂದು ಗುರುತಿಸಲಾಗಿದೆ. ಇದು ಕಾವೇರಿ ನದಿ ಮತ್ತು ಸಣ್ಣ ಪುಟ್ಟ ತೊಂದರೆಗಳಿಂದ ಸೃಷ್ಟಿಯಾಗಿದೆ.


ಗೋಕಾಕ್ ಜಲಪಾತ 


        ಗೋಕಾಕ್ ಎಂದಾಕ್ಷಣ ಬಾಯಲ್ಲಿ ನೀರು ಬರಿಸುವ ಕರೆದಂಟು ನೆನಪಾದಂತೆ, ಫಾಲ್ಸ್ ಕೂಡ ನೆನಪಾಗುತ್ತೆ. ಕರ್ನಾಟಕದ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನಲ್ಲಿ ಬರುತ್ತದೆ. ಇದನ್ನು ನೋಡಲು ನಯಾಗರ ಫಾಲ್ಸ್ನಂತೆಯೇ ಕಾಣುತ್ತದೆ. ಇದು 171 ಅಡಿ ಮೇಲಿನಿಂದ ಕೆಳಗೆ ದುಮುಕುತ್ತದೆ. ಗೋಕಾಕ್ ಜಲಪಾತವು ಘಟಪ್ರಭಾ ನದಿಯಿಂದ ಉಂಟಾಗಿದೆ ಹಾಗೆ ಇದನ್ನು ಕರ್ನಾಟಕದ ಎರಡನೇ ದೊಡ್ಡ ಜಲಪಾತ ಎಂದು ಕರೆಯಲಾಗುತ್ತದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು