Ticker

6/recent/ticker-posts

MHRD Scholarships #Central Govt Scholarship



        Ministry of Human Resource  Development, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ಭಾರತ ಸರ್ಕಾರ ಇದರ ಅಡಿಯಲ್ಲಿ ಬರುವ ಉನ್ನತ ಶಿಕ್ಷಣ ಇಲಾಖೆಯೂ ಬಡತನ ಮತ್ತು ಹಣಕಾಸಿನ ಕೊರತೆಯಿಂದ ಉನ್ನತ ಶಿಕ್ಷಣದಿಂದ ವಂಚಿತರಾಗುವ ವಿದ್ಯಾರ್ಥಿಗಳಿಗಳಿಗೆಂದೇ ಎಂ ಎಚ್ ಆರ್ ಡಿ ಸ್ಕಾಲರ್ಶಿಪ್ ನ(MHRD Scholarships) ಬಿಡುಗಡೆ ಮಾಡಿದೆ. ಇದರ ಅಡಿಯಲ್ಲಿ ವಿವಿಧ ರೀತಿಯ ಸ್ಕಾಲರ್ ಶಿಪ್ ಕಾರ್ಯಕ್ರಮಗಳಿದ್ದು, ಇವನ್ನು ದೇಶದ ಯಾವುದೇ ಮೂಲೆಯಲ್ಲಿರುವ ವಿದ್ಯಾರ್ಥಿ ಇದನ್ನು ಬಳಸಿಕೊಂಡು ವಿದೇಶಗಳಲ್ಲಿ ವ್ಯಾಸಂಗ ಮಾಡಲು ಸಹಕಾರಿಯಾಗಿದೆ.

ಸ್ಕಾಲರ್ಶಿಪ್ ಬಗ್ಗೆ
Types Of Scholarship
The following is scholarships are provided by the organization:-

Scholarship Name                                                          Scholarship Type
Central Sector Scheme of Scholarship for College 
and  University Students National Level
Prime Minister Special Scholarship Scheme (PMSSS)
 for Jammu Kashmir National Level
National Scheme of Incentive to Girls for Secondary
 Education (NSIGSE) National Level
National Means Cum Merit Scholarship National Level
Prime Minister’s Research Fellowship (PMRF) National Level
AICTE Pragati Scholarship for Girls National Level
AICTE-Saksham Scholarship Scheme National Level
Commonwealth Scholarships in the United Kingdom External
New Zealand Commonwealth Scholarships External
Chinese Government Scholarships External
South Korean Government Scholarships External
Japanese Government Scholarships External
Italian Government Scholarships External
Mexican Government Scholarships External
Israel Government Scholarships External
Brazilian Government Scholarships External
Presidential Scholarships, Sri Lanka External
Ms. Agatha Harrison Memorial Fellowship                                     External

    
        ಇದೊಂದು ಕೇಂದ್ರ ಸರ್ಕಾರದ ಸ್ಕಾಲರ್ಶಿಪ್ ಯೋಚನೆಯಾಗಿದ್ದು, ಇದು Pradhan Mantri Uchatar Shiksha Protsahan Yojana (ಪ್ರಧಾನಮಂತ್ರಿ ಉಚ್ಚತರ್ ಶಿಕ್ಷ ಪ್ರೋತ್ಸಾಹನ್) ಯೋಜನಾ ಅಡಿಯಲ್ಲಿ ಕಾಲೇಜು ಮತ್ತು ಯುನಿವರ್ಸಿಟಿ ವಿದ್ಯಾರ್ಥಿಗಳಿಗಾಗಿ ತಂದಿರುವ ಕಾರ್ಯಕ್ರಮವಾಗಿದೆ. ಈ ಯೋಜನೆಯ ಉದ್ದೇಶ ಬಡತನದಲ್ಲಿರುವ ಮೆರಿಟೋರಿಯಸ್ (Meritorious) ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾಭ್ಯಾಸ ಪಡೆಯುವ ದಿನನಿತ್ಯದ ತಮ್ಮ ಖರ್ಚಿನ ಒಂದು ಭಾಗವನ್ನು ನೋಡಿಕೊಳ್ಳಲು ನೀಡುವ ಹಣಕಾಸಿನ ಸಹಾಯವಾಗಿದೆ.

ಇದರ ಸ್ವರೂಪ
        ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯ ಈ ಸ್ಕಾಲರ್ಷಿಪ್ ಅನ್ನು ನೀಡುತ್ತಿದೆ. ಇದನ್ನು 12ನೇ ತರಗತಿ ಅಥವಾ ಪಿಯುಸಿಯ ಪರೀಕ್ಷೆಯಲ್ಲಿ ಅವರು ತೆಗೆದುಕೊಂಡ ಶೇಕಡವಾರು ಅಂಕಗಳ ಮೇಲೆ ನೀಡಲಾಗುತ್ತದೆ. ವರ್ಷದಲ್ಲಿ 82 ಸಾವಿರ ವಿದ್ಯಾರ್ಥಿಗಳು ಡಿಗ್ರಿ ಅಥವಾ ಪಿಜಿಗಳನ್ನು ಕಾಲೇಜು ಅಥವಾ ಯುನಿವರ್ಸಿಟಿಗಳಲ್ಲಿ ಮಾಡುತ್ತಿರುವ ಮತ್ತು ವೃತ್ತಿ ಆಧಾರಿತ ಕೋರ್ಸ್ ಗಳನ್ನು(Professional Course) ಮಾಡುತ್ತಿರುವವರಿಗು ನೀಡಲಾಗುತ್ತೆ.

ಮಾನದಂಡಗಳು
  • 12ನೇ ತರಗತಿ ಅಥವಾ ಪಿಯುಸಿ ಅದಕ್ಕೆ ಸಂಬಂಧಿಸಿದ ಸಮಾನಾಂತರವಾದ ಪರೀಕ್ಷೆಗಳಲ್ಲಿ ಶೇಕಡ 80% ಗಿಂತ ಹೆಚ್ಚು ಅಂಕವನ್ನು ಪಡೆದಿರಬೇಕು.
  • ರೆಗ್ಯುಲರ್ ಡಿಗ್ರಿ ಅಥವಾ ಪ್ರೊಫೆಷನಲ್  ಕೋರ್ಸ್ ಗಳನ್ನು ಮಾಡುತ್ತಿರಬೇಕು ದೂರ ಶಿಕ್ಷಣದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವವರಿಗೆ ನೀಡಲಾಗುವುದಿಲ್ಲ.
  • ಕುಟುಂಬದ ವರಮಾನ 4.5 ಲಕ್ಷದ ಒಳಗಡೆ ಇರಬೇಕು ಪ್ರತಿ ವರ್ಷ ರಿನಿವಲ್ ಮಾಡಿಸಬೇಕು ತಾವು ಓದುತ್ತಿರುವ ಡಿಗ್ರಿಯಲ್ಲಿ 50% ಗಿಂತ ಹೆಚ್ಚು ಅಂಕಗಳು ಮತ್ತು 75% ಗಿಂತ ಹೆಚ್ಚಿನ ಹಾಜರಾತಿ ಇರಬೇಕು. 
  • ವಿದ್ಯಾರ್ಥಿಗಳು ನ್ಯಾಷನಲ್ ಸ್ಕಾಲರ್ಶಿಪೋರ್ಟನಲ್ಲಿ(National Scholarship Portal) ಹೆಸರು ನೋಂದಾಯಿಸಬೇಕು ರಿನಿವಲ್(Renewal) ಅನ್ನು ಆನ್ಲೈನಲ್ಲೇ ಮಾಡಿಸಬೇಕು. ಆಫ್ ಲೈನ್ ಗೆ ಅವಕಾಶವಿಲ್ಲ.
ಸ್ಕಾಲರ್ಶಿಪ್ ಹಣ 
  1. ಕಾಲೇಜಿನಲ್ಲಿ ಓದುವ ವಿದ್ಯಾರ್ಥಿಗಳಿಗೆ ಮೂರು ವರ್ಷಗಳಲ್ಲಿ ಪ್ರತಿ ವರ್ಷ 12000 ನಂತೆ ನೀಡಲಾಗುತ್ತದೆ.
  2.  ವಿಶ್ವವಿದ್ಯಾಲಯ ಮಟ್ಟದಲ್ಲಿ ಓದುವ ವಿದ್ಯಾರ್ಥಿಗಳಿಗೆ ಎರಡು ವರ್ಷ ತಲಾ 20000 ನೀಡಲಾಗುತ್ತದೆ 
  3. ಪ್ರೊಫೆಷನಲ್ ಕೋರ್ಸ್ ಮಾಡುವವರಿಗೂ ಮೊದಲ ಮೂರು ವರ್ಷ 12000ದಂತೆ ಉಳಿದ 4 ಮತ್ತು 5ನೇ ವರ್ಷ 20 ಸಾವಿರ ರೂಗಳನ್ನು ನೀಡಲಾಗುತ್ತದೆ.
  4. ಸ್ಕಾಲರ್ಶಿಪ್ ಹಣವನ್ನು ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಜಮೆ ಆಗುತ್ತದೆ
ಕಾಲೇಜು ಮತ್ತು ವಿಶ್ವವಿದ್ಯಾಲಯಗಳು MHRD Scholarship ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕಿದೆ. ಇದರಿಂದ ಹೆಚ್ಚಿನ ವಿದ್ಯಾರ್ಥಿಗಳು ಇದರ ಫಲವನ್ನು ಪಡೆಯಲು ಸಾಧ್ಯವಾಗುತ್ತದೆ.
 last Date for Appling this Scholarship is 31-12-2023.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು